alex Certify ಗಡಿಬಿಡಿಯಿಂದ ತಿನ್ನುವುದು ಬೇಡವೇ ಬೇಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಡಿಬಿಡಿಯಿಂದ ತಿನ್ನುವುದು ಬೇಡವೇ ಬೇಡ

ನೀವು ಏನು ತಿನ್ನುತ್ತೀರಿ ಎನ್ನುವುದರ ಜೊತೆಗೆ ನೀವು ಹೇಗೆ ತಿನ್ನುತ್ತೀರಿ ಎಂಬುದೂ ಮುಖ್ಯವಾಗುತ್ತದೆ. ಅವಸರವಸರದಲ್ಲಿ ತಿಂದರೆ ದೇಹದ ತೂಕ ಹೆಚ್ಚಬಹುದು ಎನ್ನುತ್ತಾರೆ ತಜ್ಞರು.

ಹೌದು. ಹೊಸವರ್ಷದ ತೂಕ ಇಳಿಸುವ ರೆಸೆಲ್ಯೂಷನ್ ಎಲ್ಲರೂ ತೆಗೆದುಕೊಳ್ಳಬಹುದು. ಆದರೆ ಅದನ್ನು ಪಾಲಿಸುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಕಚೇರಿಯ ಕೆಲಸ, ಮನೆಯ ಗಡಿಬಿಡಿಯ ಮಧ್ಯೆ ತಿನ್ನುವ ವಿಷಯಕ್ಕೆ ನಾವು ಕೊಡುವ ಮಹತ್ವ ಬಹಳ ಕಡಿಮೆ.

ನಿಧಾನವಾಗಿ ತಿನ್ನುವುದು ಬಹಳ ಮುಖ್ಯ. ಗಬಗಬ ತಿನ್ನುವುದರಿಂದ ನಾವು ಆಹಾರವನ್ನು ಜಗಿಯಲು ಕಡಿಮೆ ಸಮಯ ಕೊಡುತ್ತೇವೆ. ಇದು ಜೀರ್ಣಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ. ಬೊಜ್ಜಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಜಗಿದು ತಿನ್ನುವುದು ಬಹಳ ಮುಖ್ಯ.

ಎಷ್ಟೇ ಗಡಿಬಿಡಿ ಇದ್ದರೂ ತಿನ್ನುವ ಸಮಯವನ್ನು ಮಿಸ್ ಮಾಡಬೇಡಿ. ನಿಂತುಕೊಂಡು, ಅತ್ತಿಂದಿತ್ತ ಬೇರೆ ಕೆಲಸ ಮಾಡುತ್ತಾ ಬೆಳಗಿನ ಉಪಹಾರ, ಮಧ್ಯಾಹ್ನದ ಊಟವನ್ನು ಮಾಡಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...