alex Certify ಜಲಜನಕದಿಂದ ಓಡುವ ಕಾರು ಖರೀದಿ ಮಾಡಿದ ನಿತಿನ್ ಗಡ್ಕರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಲಜನಕದಿಂದ ಓಡುವ ಕಾರು ಖರೀದಿ ಮಾಡಿದ ನಿತಿನ್ ಗಡ್ಕರಿ

ಪರ್ಯಾಯ ಇಂಧನಗಳ ವಾಹನಗಳ ಬಳಕೆಗೆ ಒತ್ತಾಯ ಮಾಡುತ್ತಲೇ ಬಂದಿರುವ ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ, ಭವಿಷ್ಯದಲ್ಲಿ ಭಾರತದ ಪೆಟ್ರೋಲ್ ಅವಲಂಬನೆ ಕಡಿಮೆಯಾಗುವಂತೆ ನೋಡುವ ತಮ್ಮ ಆಸೆಯ ಬಗ್ಗೆ ಹೇಳುತ್ತಲೇ ಬಂದಿದ್ದಾರೆ.

ತಮ್ಮ ಮಾತನ್ನ ತಾವೇ ಮೊದಲು ಪಾಲಿಸಲು ಮುಂದಾಗಿರುವ ನಿತಿನ್ ಗಡ್ಕರಿ, ಇದೀಗ ಪೆಟ್ರೋಲ್‌/ಡೀಸೆಲ್‌/ಸಿಎನ್‌ಜಿ ಬದಲಿಗೆ ಜಲಜನಕದಲ್ಲಿ ಓಡುವ ಕಾರೊಂದನ್ನು ಖರೀದಿ ಮಾಡಿದ್ದಾರೆ. ’ಕಸದಿಂದ ರಸ ತೆಗೆಯುವ’ ಬಗ್ಗೆ ಯಾವಾಗಲೂ ಮಾತನಾಡುವ ಗಡ್ಕರಿ, ದೇಶದ ವಿವಿಧ ನಗರಗಳಲ್ಲಿ ಬಸ್ಸು, ಲಾರಿ, ಕಾರುಗಳನ್ನು ಜಲಜನಕದಿಂದ ಓಡಿಸಲು ಆಶಿಸುತ್ತಾರೆ.

ಜೀವನ ನಿರ್ವಹಣೆಗಾಗಿ ಮದ್ಯದಂಗಡಿ ತೆರೆದ ಹಾಸ್ಯನಟ….!

ರಾಷ್ಟ್ರಮಟ್ಟದ ಆರ್ಥಿಕ ಒಳಗೊಳ್ಳುವಿಕೆಯ ಆರನೇ ಶೃಂಗ ಸಭೆಯಲ್ಲಿ ಮಾತನಾಡಿದ ಗಡ್ಕರಿ ಈ ಬಗ್ಗೆ ಹೇಳಿಕೊಂಡಿದ್ದಾರೆ. “ಫರೀದಾಬಾದ್‌ನ ತೈಲ ಸಂಶೋಧನಾ ಸಂಸ್ಥೆಯೊಂದು ಅಭಿವೃದ್ಧಿಪಡಿಸಿರುವ, ಜಲಜನಕದಿಂದ ಓಡುವ, ಪೈಲಟ್ ಪ್ರಾಜೆಕ್ಟ್‌ನಲ್ಲಿರುವ ಕಾರೊಂದನ್ನು ನಾನು ಖರೀದಿ ಮಾಡಿದ್ದೇನೆ. ಜನರಲ್ಲಿ ಈ ಕಾರಿನ ಮೇಲೆ ನಂಬಿಕೆ ಬರುವಂತೆ ಮಾಡಲು ನಗರದಲ್ಲಿ ನಾನು ಇದೇ ವಾಹನದಲ್ಲಿ ಒಂದು ಸುತ್ತು ಹೋಗಿ ಬರುವೆ,” ಎಂದಿದ್ದಾರೆ.

ಅದಾಗಲೇ ವಾರ್ಷಿಕ ಎಂಟು ಲಕ್ಷ ಕೋಟಿ ರೂಪಾಯಿ ಮೌಲ್ಯದ ಪಳೆಯುಳಿಕೆ ಇಂಧನವನ್ನು ಭಾರತ ಆಮದು ಮಾಡಿಕೊಳ್ಳುತ್ತಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರೆದಲ್ಲಿ ಮುಂದಿನ ಐದು ವರ್ಷಗಳಲ್ಲಿ ದೇಶದ ಪಳೆಯುಳಿಕೆ ಇಂಧನದ ಆಮದು 25 ಲಕ್ಷ ಕೋಟಿ ರೂಪಾಯಿ ತಲುಪಲಿದೆ ಎಂದಿದ್ದಾರೆ.

ಕರ್ತವ್ಯದ ವೇಳೆಯಲ್ಲೇ ಕಾದಿತ್ತು ದುರ್ವಿದಿ: ಹೃದಯಾಘಾತದಿಂದ ಹೆಲ್ತ್ ಇನ್ಸ್ ಪೆಕ್ಟರ್ ಸಾವು

ಹೀಗಾಗಿ, ಒಂದಕ್ಕಿಂತ ಹೆಚ್ಚಿನ ವಿಧದ ಇಂಧನದಲ್ಲಿ (ಫ್ಲೆಕ್ಸ್ ಪ್ಯುಯೆಲ್) ಓಡಬಲ್ಲ ಕಾರುಗಳನ್ನು ಉತ್ಪಾದನೆ ಮಾಡಲು ಆಟೋಮೊಬೈಲ್ ಉತ್ಪಾದಕರಿಗೆ ಕೋರಿ ಫೈಲ್ ಒಂದಕ್ಕೆ 2-3 ದಿನಗಳಲ್ಲಿ ಸಹಿ ಮಾಡುವುದಾಗಿ ಗಡ್ಕರಿ ಹೇಳಿಕೊಂಡಿದ್ದಾರೆ. ಗ್ಯಾಸೋಲಿನ್‌ ಜೊತೆಗೆ ಮೆಥನಾಲ್ ಆಥವಾ ಎಥನಾಲ್‌ನ ಮಿಶ್ರಣದಿಂದ ಫ್ಲೆಕ್ ಇಂಧನ ತಯಾರಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...