
ಫಾರ್ಚೂನ್ ಇಂಡಿಯಾ 50 ಶಕ್ತಿಶಾಲಿ ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದೆ. ಫಾರ್ಚೂನ್ ಇಂಡಿಯಾದ ಈ 2021ರ ಪಟ್ಟಿಯಲ್ಲಿ, ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಮೊದಲಿದೆ. ಇದರ ನಂತರ ನೀತಾ ಅಂಬಾನಿ ಎರಡನೇ ಸ್ಥಾನದಲ್ಲಿದ್ದಾರೆ. ಅಗ್ರ 10ರಲ್ಲಿ ಸೌಮ್ಯ ಸ್ವಾಮಿನಾಥನ್, ಕಿರಣ್ ಮಜುಂದಾರ್ ಶಾ, ಅರುಂಧತಿ ಭಟ್ಟಾಚಾರ್ಯ, ಗೀತಾ ಗೋಪಿನಾಥ್, ಸುಚಿತ್ರಾ ಐಲೆ ಮತ್ತು ರೆಡ್ಡಿ ಸಹೋದರಿಯರು ಸೇರಿದ್ದಾರೆ.
ಫಾರ್ಚೂನ್ ಇಂಡಿಯಾದ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷರಾದ ನೀತಾ ಅಂಬಾನಿ ಎರಡನೇ ಸ್ಥಾನ ಪಡೆದಿದ್ದಾರೆ. ಗೌರವ ಪ್ರಶಸ್ತಿಗೆ ಅರ್ಹರಾಗಿರುವ ನೀತಾ ಅಂಬಾನಿ ಕೊರೊನಾ ಸಂದರ್ಭದಲ್ಲಿ ಮಾಡಿದ ಕೆಲಸ ಶ್ಲಾಘನೀಯ. ವಿವಿಧ ರಾಜ್ಯಗಳಲ್ಲಿನ ಜನರು ಎದುರಿಸುತ್ತಿರುವ ಸವಾಲುಗಳನ್ನು ಪರಿಗಣಿಸಿ, ಜಾಮ್ನಗರದಲ್ಲಿ ಕೋವಿಡ್ ರೋಗಿಗಳಿಗೆ 1000 ಉಚಿತ ಹಾಸಿಗೆಗಳನ್ನು ರಿಲಯನ್ಸ್ ಫೌಂಡೇಶನ್ ನೇತೃತ್ವದಲ್ಲಿ ನೀತಾ ಅಂಬಾನಿ ನೀಡಿದ್ದರು. ಸೆವೆನ್ ಹಿಲ್ಸ್ ಆಸ್ಪತ್ರೆ ಮತ್ತು ಟ್ರೈಡೆಂಟ್ ಸೇರಿದಂತೆ ಕೆಲ ಆಸ್ಪತ್ರೆಗಳಿಗೆ ಒಟ್ಟು 775 ಉಚಿತ ಹಾಸಿಗೆಗಳನ್ನು ನೀಡಿದ್ದರು.
ಏಪ್ರಿಲ್ 2020 ರಲ್ಲಿ ಲಾಕ್ಡೌನ್ ಘೋಷಣೆಯಾದಾಗ, ನೀತಾ ಅಂಬಾನಿ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯ ನಿರ್ವಹಣಾ ತಂಡದೊಂದಿಗೆ ಸಭೆ ನಡೆಸಿದ್ದರು. ಕೋವಿಡ್ನಿಂದ ಬಡವರಿಗೆ ಎಷ್ಟು ತೊಂದರೆಯಾಗಲಿದೆ ಎಂಬುದನ್ನು ಅರಿತರು. ನಂತರ, ಬಿಎಂಸಿಯೊಂದಿಗೆ ಮುಂಬೈನಲ್ಲಿ ತಂಡ ರಚಿಸಿದ್ದರು. ಮೊದಲು 250 ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನು ಸಿದ್ಧಪಡಿಸುವುದು. ನಂತರ ಅದರ ಸಾಮರ್ಥ್ಯವನ್ನು 2000 ಹಾಸಿಗೆಗಳಿಗೆ ವಿಸ್ತರಿಸಲಾಯಿತು. ಆಮ್ಲಜನಕ ಪೂರೈಕೆ ಜೊತೆ ಉಚಿತ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿತ್ತು.
ಇದ್ರ ಜೊತೆ ಅವರ ಪ್ರತಿಷ್ಠಾನವು ಡಿಜಿಟಲ್ ಪ್ಲಾಟ್ಫಾರ್ಮ್ – JioHealthHub ಮೂಲಕ 2.5 ಮಿಲಿಯನ್ ಜನರಿಗೆ ಲಸಿಕೆ ನೀಡುವ ಜವಾಬ್ದಾರಿಯನ್ನು ವಹಿಸಿಕೊಂಡಿತ್ತು. ಪ್ರತಿಷ್ಠಾನವು 100 ಜಿಲ್ಲೆಗಳು, 19 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ, ದಿನಗೂಲಿ ನೌಕರರು, ಕಾರ್ಮಿಕರಿಗೆ 8.5 ಕೋಟಿಗಿಂತ ಹೆಚ್ಚು ಮೌಲ್ಯದ ಆಹಾರ ವಿತರಣೆ ಮಾಡಿತ್ತು. ಪ್ರಾಣಿಗಳಿಗೆ ಮೇವು ಮತ್ತು ಆರೋಗ್ಯಕ್ಕಾಗಿ 20 ಪ್ರಾಣಿಗಳ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿತ್ತು. ಇದಲ್ಲದೆ ನೀತಾ ಅಂಬಾನಿ, ಮಹಿಳೆಯರ ಕಲ್ಯಾಣಕ್ಕೆ ಶ್ರಮಿಸುತ್ತಿದ್ದಾರೆ.