alex Certify ಒಣಗಿದ ಎಲೆಯೋ…? ಬಣ್ಣದ ಚಿಟ್ಟೆಯೋ…? ನೋಡುಗರನ್ನ ಮೂಕವಿಸ್ಮಿತರನ್ನಾಗಿಸಿದೆ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಣಗಿದ ಎಲೆಯೋ…? ಬಣ್ಣದ ಚಿಟ್ಟೆಯೋ…? ನೋಡುಗರನ್ನ ಮೂಕವಿಸ್ಮಿತರನ್ನಾಗಿಸಿದೆ ಈ ವಿಡಿಯೋ

ಪ್ರಕೃತಿಯ ಮಡಿಲಲ್ಲಿ ಅಗಾಧ ಜೀವಿಗಳಿವೆ. ಕೆಲವೊಂದು ಸೃಷ್ಟಿಗಳಂತೂ ನಮ್ಮ ಕಣ್ಣನ್ನೇ ನಾವು ನಂಬಲಾರದ ಮಟ್ಟಿಗೆ ಆಶ್ಚರ್ಯವನ್ನುಂಟು ಮಾಡುತ್ತವೆ. ಸಾಕಷ್ಟು ರಹಸ್ಯಗಳನ್ನ ತನ್ನ ಒಡಲಲ್ಲಿ ಇಟ್ಟುಕೊಂಡಿರೋ ಪ್ರಕೃತಿ ಸದಾ ನಮ್ಮ ಅಚ್ಚರಿಗೆ ಒಳಪಡಿಸುವ ಕಾರ್ಯ ಮಾಡುತ್ತದೆ.

ಬಯೋಕಾನ್​ ಲಿಮಿಟೆಡ್​ನ ಕಾರ್ಯನಿರ್ವಾಹಕ ಅಧ್ಯಕ್ಷೆಯಾಗಿರುವ ಕಿರಣ್​ ಮಂಜುಮ್​ದಾರ್ ಶಾ ಈ ಮಾತಿಗೆ ಸಾಕ್ಷಿಯೆಂಬತಹ ವಿಡಿಯೋವನ್ನ ಟ್ವಿಟರ್​ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಕೇವಲ 14 ಸೆಕೆಂಡ್​ನ ಈ ವಿಡಿಯೋದಲ್ಲಿ ​ ಒಣ ಎಲೆಯೊಂದನ್ನ ತೋರಿಸುತ್ತಾರೆ. ಈ ಒಣ ಎಲೆಯನ್ನ ಸೂರ್ಯನ ಬೆಳಕು ಇರುವ ಕಡೆ ತರುತ್ತಿದ್ದಂತೆಯೇ ಒಂದು ಆಶ್ಚರ್ಯ ಕಾದಿತ್ತು..! ನಾವೆಂದುಕೊಂಡಂತೆ ಅದು ಒಣ ಎಲೆ ಆಗಿರಲಿಲ್ಲ..! ಸೂರ್ಯನ ಬೆಳಕು ತಾಕುತ್ತಿದ್ದಂತೆಯೇ ಅದು ಚಿಟ್ಟೆ ಆಕೃತಿಯಲ್ಲಿ ಬದಲಾಗಿ ಹಾರಿದೆ. ಮತ್ತೆ ಸ್ವಲ್ಪ ದೂರ ಹೋಗಿ ಒಣ ಎಲೆಯ ಆಕೃತಿಯಲ್ಲೇ ಮಲಗಿದೆ.

ಈ ವಿಡಿಯೋ 116.5 ಸಾವಿರಕ್ಕಿಂತಲೂ ಅಧಿಕ ವೀವ್ಸ್ ಸಂಪಾದಿಸಿದೆ. ವಿಡಿಯೋ ನೋಡಿದ ನೆಟ್ಟಿಗರು ಪ್ರಕೃತಿಯ ಈ ವಿಸ್ಮಯ ಕಂಡು ಮೂಕವಿಸ್ಮಿತರಾಗಿದ್ದಾರೆ.

— Kiran Mazumdar-Shaw (@kiranshaw) June 8, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...