alex Certify ನಿಸಾನ್ ಮ್ಯಾಗ್ನೈಟ್ ಗೆ ಭಾರತದಲ್ಲಿ 72 ಸಾವಿರಕ್ಕೂ ಅಧಿಕ ಬುಕ್ಕಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಸಾನ್ ಮ್ಯಾಗ್ನೈಟ್ ಗೆ ಭಾರತದಲ್ಲಿ 72 ಸಾವಿರಕ್ಕೂ ಅಧಿಕ ಬುಕ್ಕಿಂಗ್

ತನ್ನ ಹೊಸ ಎ‌ಸ್‌ಯುವಿ ಮ್ಯಾಗ್ನೈಟ್‌‌ ಅದಾಗಲೇ 72,000ದಷ್ಟು ಬುಕಿಂಗ್ ಆಗಿದ್ದು, 30,000 ದಷ್ಟು ಡೆಲಿವರಿ ಪೂರ್ಣಗೊಂಡಿದೆ ಎಂದು ನಿಸಾನ್ ಘೋಷಿಸಿದೆ.

ಭಾರೀ ಪೈಪೋಟಿ ಇರುವ ಎಸ್‌ಯುವಿ ಕ್ಷೇತ್ರದಲ್ಲಿ ತನ್ನದೊಂದು ಬೆಟ್ ಮಾಡಿರುವ ನಿಸಾನ್, ಭಾರತದ ಕಾರು ಮಾರುಕಟ್ಟೆಯಲ್ಲಿ ತನ್ನ ಅಳಿವು-ಉಳಿವಿನ ಸಂಬಂಧ ಹೋರಾಟಕ್ಕೆ ಮುಂದಾಗಿದೆ. ಮಾರುತಿ ಸುಜ಼ುಕಿಯ ವಿಟಾರಾ ಬ್ರೀಜ಼ಾ, ಹ್ಯೂಂಡಾಯ್‌ ವೆನ್ಯೂನಂಥ ಎಸ್‌ಯುವಿಗಳೊಂದಿಗೆ ನಿಸಾನ್‌ನ ಮ್ಯಾಗ್ನೈಟ್ ಪೈಪೋಟಿ ಮಾಡಬೇಕಿದೆ.

ಎಲ್‌ಇಡಿ ಬೈ ಪ್ರೊಜೆಕ್ಟರ್‌ ಹೆಡ್‌ ಲ್ಯಾಂಪ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, 16-ಇಂಚಿನ ಬಹುಲೋಹದ ಚಕ್ರಗಳು, ಛಾವಣಿ ರೇಲ್‌ಗಳು, ಮುಂಬದಿ ಹಾಗೂ ಹಿಂಬದಿ ಸ್ಕಿಡ್ ಪ್ಲೇಟ್‌ಗಳು ಸೇರಿದಂತೆ ಕಾರಿನಲ್ಲಿ ಆಧುನಿಕ ಸಲಕರಣೆಗಳೆಲ್ಲವೂ ಇವೆ.

ಸಿದ್ದರಾಮಯ್ಯ ಹೆಂಡ ಕುಡಿದಾಗ ಒಂದು ಮಾತು, ಕುಡಿಯದೇ ಇದ್ದಾಗ ಒಂದು ಮಾತು ಆಡ್ತಾರೆ; ವಿಪಕ್ಷ ನಾಯಕನ ವಿರುದ್ಧ ಈಶ್ವರಪ್ಪ ವಾಗ್ದಾಳಿ

8.0 ಇಂಚಿನ ಟಚ್‌ಸ್ಕ್ರೀನ್‌ ಇನ್ಫೋಟೇನ್ಮೆಂಟ್ ವ್ಯವಸ್ಥೆ, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್‌ ಆಟೋ ಕನೆಕ್ಟಿವಿಟಿ, 7.0 ಇಂಚಿನ ಟಿಎಫ್‌ಟಿ ಡಿಸ್ಪ್ಲೇ ಇರುವ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌, ಧ್ವನಿ ಗುರುತಿಸುವ ತಂತ್ರಜ್ಞಾನ, ಪುಶ್‌-ಬಟನ್ ಸ್ಟಾರ್ಟ್, ಕ್ರೂಸ್ ನಿಯಂತ್ರಣ, 360 ಡಿಗ್ರಿ ಕ್ಯಾಮೆರಾ, ಟೈರ್‌ನಲ್ಲಿರುವ ಗಾಳಿ ಒತ್ತಡದ ಮಾನಿಟರ್‌ ಸೇರಿದಂತೆ ಅನೇಕ ಆಕರ್ಷಕ ಫೀಚರ್‌ಗಳೂ ಸಹ ಮ್ಯಾಗ್ನೈಟ್‌ನಲ್ಲಿವೆ.

ಪೆಟ್ರೋಲ್‌ ಚಾಲಿತ ಇಂಜಿನ್‌ನ ಎರಡು ವಿಧಗಳೊಂದಿಗೆ ಮ್ಯಾಗ್ನೈಟ್ ಬಂದಿದ್ದು, 1.0 ಲೀಟರ್‌, ಮೂರು ಸಿಲೆಂಡರ್‌ ಜೊತೆಗೆ 72ಎಚ್‌ಪಿಯಷ್ಟು ಶಕ್ತಿಯುತವಾದ ಇಂಜಿನ್‌ ಹಾಗೂ 1.0 ಲೀಟರ್‌ನ, ಮೂರು ಸಿಲಿಂಡರ್‌ನ‌, ಟರ್ಬೋ-ಪೆಟ್ರೋಲ್ ಘಟಕದ, 100 ಎಚ್‌ಪಿಯಷ್ಟು ಶಕ್ತಿಶಾಲಿಯಾದ ಮತ್ತೊಂದು ಇಂಜಿನ್‌ನ ಆಯ್ಕೆಯನ್ನು ಕಾರಿಗೆ ಕೊಡಲಾಗಿದೆ. ಮ್ಯಾಗ್ನೈಟ್‌ನ ಡೀಸೆಲ್‌ ಕಾರನ್ನು ನಿಸಾನ್ ಬಿಡುಗಡೆ ಮಾಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...