alex Certify ಮಾರುಕಟ್ಟೆಗೆ ಬರ್ತಿದೆ ಹೊಸ ಶ್ರೇಣಿಯ ಇ ಸೈಕಲ್; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುಕಟ್ಟೆಗೆ ಬರ್ತಿದೆ ಹೊಸ ಶ್ರೇಣಿಯ ಇ ಸೈಕಲ್; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವಿವರ

ಸೈಕಲ್ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ ನೈನ್ಟಿ ಒನ್ ಸೈಕಲ್, ಮೆರಾಕಿ S7 ಶ್ರೇಣಿಯ ಇ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ‌. 34,999 ರೂ. ನಂತೆ ಹೊಸ ಸೈಕಲ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಈ ಇ-ಬೈಕ್‌ಗಳನ್ನು ಸುಲಭ ಕಂತುಗಳ ಮೂಲಕವೂ ಖರೀದಿಸಬಹುದು.

ನೈನ್ಟಿ ಒನ್ ಪ್ರಸ್ತುತಪಡಿಸಿರುವ ಎರಡನೇ ಇ-ಬೈಕ್ ಇದಾಗಿದೆ. ಬೈಕು ಮೂಲ ಮೆರಾಕಿಯ ಎಲ್ಲಾ ವೈಶಿಷ್ಟ್ಯಗಳನ್ನು ಇದು ಹೊಂದಿದೆ ಮತ್ತು 160 ಎಂಎಂ ಡಿಸ್ಕ್ ಬ್ರೇಕ್‌, ಹೈ-ಟ್ರಾಕ್ಷನ್ ನೈಲಾನ್ ಟೈರ್‌ಗಳು ಸವಾರರಿಗೆ ಸುರಕ್ಷತೆ ಮತ್ತು ಭರವಸೆಯನ್ನು ಖಾತ್ರಿಗೊಳಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

7-ಸ್ಪೀಡ್ ಗೇರ್‌ಸೆಟ್, 5-ಮೋಡ್ ಪೆಡಲ್ ಅಸಿಸ್ಟ್‌ನಂತಹ ವೈಶಿಷ್ಟ್ಯ ಹೊಂದಿದೆ ಮತ್ತು ಬಳಕೆದಾರರ ಅನುಕೂಲಕ್ಕಾಗಿ ಸ್ಮಾರ್ಟ್ ಎಲ್‌ಸಿಡಿ ಸಹ ಹೊಂದಿದೆ.

ಮೆರಾಕಿ S7 ದಿನಕ್ಕೆ 30-40 ಕಿಮೀ ಸವಾರಿ ಮಾಡುವ ಗ್ರಾಹಕರಿಗಾಗಿ ನಗರ ಪ್ರದೇಶದ ಅಗತ್ಯತೆಗಳನ್ನು ಪರಿಹರಿಸಲು ಉತ್ತಮವಾಗಿ ವಿನ್ಯಾಸಗೊಳಿಸಿದ್ದು, ಗ್ರಾಹಕರ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ನಮಗೆ ವಿಶ್ವಾಸವಿದೆ. ಲಾಕ್ ಮತ್ತು ಕೀ ಟ್ಯಾಂಪರ್-ಪ್ರೂಫ್ ಇರಲಿದೆ ಎಂದು ನೈನ್ಟಿ ಒನ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಸಚಿನ್ ಚೋಪ್ರಾ ಹೇಳಿದ್ದಾರೆ.

ಗ್ರಾಹಕರು ಬಜಾಜ್ ಫಿನ್‌ಸರ್ವ್ ಇಎಂಐ ಸ್ಟೋರ್‌ನಲ್ಲಿ ಅತ್ಯಾಕರ್ಷಕ ಡೀಲ್‌ಗಳು ಮತ್ತು‌ ರಿಯಾಯಿತಿಗಳೊಂದಿಗೆ ನೈನ್ಟಿ ಒನ್ ಎಲೆಕ್ಟ್ರಿಕ್ ಸೈಕಲ್‌ಗಳನ್ನು ಪಡೆಯಬಹುದು. ಕ್ಯಾಶ್‌ಬ್ಯಾಕ್ ಆಫರ್‌ಗಳ ಜೊತೆಗೆ 3,000ದಿಂದ ಪ್ರಾರಂಭವಾಗುವ ಇಎಂಐ ಲಭ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...