alex Certify ಮೊದಲ ಅಂಗಾಂಗ ರಿಟ್ರೀವಲ್‌ ಮಾಡಿದ ನಿಮ್ಹಾನ್ಸ್…! ನಾಲ್ಕು ಜೀವಗಳನ್ನುಳಿಸಿ ಇಬ್ಬರಿಗೆ ಬೆಳಕು ನೀಡಿದ ಕೋಲಾರದ ವಧು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಅಂಗಾಂಗ ರಿಟ್ರೀವಲ್‌ ಮಾಡಿದ ನಿಮ್ಹಾನ್ಸ್…! ನಾಲ್ಕು ಜೀವಗಳನ್ನುಳಿಸಿ ಇಬ್ಬರಿಗೆ ಬೆಳಕು ನೀಡಿದ ಕೋಲಾರದ ವಧು..!

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (SOTTO) ಅಥವಾ ಕರ್ನಾಟಕದಲ್ಲಿ ಜೀವ ಸಾರ್ಥಕಥೆ ಎಂದು ಕರೆಯಲ್ಪಡುವ ಸಂಸ್ಥೆಯಿಂದ, ಆರ್ಗನ್ಸ್ ರಿಟ್ರೀವಲ್ ಗೆ ಪರವಾನಗಿ ಪಡೆದ ಎರಡು ವರ್ಷಗಳ ನಂತರ ಮೊದಲ ಅಂಗಾಂಗ ಮರುಪಡೆಯುವಿಕೆ ಆಪರೇಷನ್ ನಡೆಸಿದೆ. ಕೋಲಾರದ ವಧು ಪ್ರೀಮಿಯರ್ ಇನ್ಸ್ಟಿಟ್ಯೂಟ್ನ ಮೊದಲ ಆರ್ಗನ್ ರಿಟ್ರೀವಲ್‌ ಕೇಸ್ ಆಗಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಮೂರು ಗಂಟೆಗಳ ಕಾಲ ನಡೆದ ಈ ಪ್ರಕ್ರಿಯೆಯಲ್ಲಿ 26 ವರ್ಷದ ಬ್ರೈನ್ ಡೆಡ್ ವಧುವಿನ, ಹೃದಯ ವಾಲ್ವ್ ಗಳನ್ನು ನಾರಾಯಣ ಹೆಲ್ತ್‌ಗೆ, ಕಿಡ್ನಿಯನ್ನು ಸಕ್ರಾ ಆಸ್ಪತ್ರೆಗೆ ಮತ್ತು ಕಾರ್ನಿಯಾಗಳನ್ನು ಸರ್ಕಾರಿ ಮಿಂಟೋ ಆಸ್ಪತ್ರೆಗೆ ಕಳಿಸಲಾಯಿತು. ಅವರ ಅಂಗಗಳು ಕನಿಷ್ಠ ನಾಲ್ಕು ಜೀವಗಳನ್ನು ಉಳಿಸುತ್ತವೆ. ಜೊತೆಗೆ ಇಬ್ಬರಲ್ಲಿ ಎರಡು ದೃಷ್ಟಿ ಪುನಃಸ್ಥಾಪಿಸುತ್ತದೆ ಎಂಬುದೇ ಸಾರ್ಥಕತೆ.

ಯುವತಿಯ ಚಿತ್ರವನ್ನು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, 26ರ ಹರೆಯದ ಚೈತ್ರಾಗೆ ಇದು ದೊಡ್ಡ ದಿನವಾಗಿತ್ತು ಆದರೆ ವಿಧಿಯಾಟವೇ ಬೇರೆ ಇತ್ತು. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ನಡೆದ ಮದುವೆಯ ಆರತಕ್ಷತೆ ವೇಳೆ ಆಕೆ ಕುಸಿದುಬಿದ್ದರು. ನಿಮ್ಹಾನ್ಸ್‌ನಲ್ಲಿ ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಿದರು. ಈ ಹೃದಯ ವಿದ್ರಾವಕ ದುರಂತದ ನಡುವೆಯೂ ಆಕೆಯ ಪೋಷಕರು ಆಕೆಯ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಇದೊಂದು ಉದಾತ್ತ ಕಾರ್ಯವಾಗಿದೆ ಮತ್ತು ಇದು ಎಲ್ಲರಿಗೂ ಮಾದರಿಯಾಗಬೇಕು ಎಂದಿದ್ದರು.‌

ಗಂಡಸಾಗಿದ್ರೆ ಆರೋಪ ಸಾಬೀತುಪಡಿಸಲಿ: ಉಗ್ರಪ್ಪಗೆ ಸಿ.ಎಂ. ಇಬ್ರಾಹಿಂ ಸವಾಲ್

ನಿಮ್ಹಾನ್ಸ್ ವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರನ್ ಕೆ ಮಾತನಾಡಿ, ಗನ್ ಹಾರ್ವೇಸ್ಟಿಂಗ್ ಹೆಚ್ಚಿನ ಸಮಯ ಹಿಡಿಯುವ ಮತ್ತು ಶ್ರಮದಾಯಕ ಪ್ರಕ್ರಿಯೆಯಾಗಿದೆ. ನಿಮ್ಹಾನ್ಸ್ ರಾಜ್ಯ ಸರ್ಕಾರದ ಅವಶ್ಯಕತೆಗಳಿಗೆ ಪ್ರಾತಿನಿಧ್ಯ ನೀಡುತ್ತದೆ. ಮಹಿಳೆಯ ಕುಟುಂಬವು ಅಂಗಾಂಗಗಳನ್ನು ದಾನ ಮಾಡುವ ಬಯಕೆಯನ್ನು ವ್ಯಕ್ತಪಡಿಸಿತು, ಆದ್ದರಿಂದ ನಾವು ಕುಟುಂಬವನ್ನು ಬೆಂಬಲಿಸಲು ಅದನ್ನು ಸುಗಮಗೊಳಿಸಬೇಕಾಗಿತ್ತು. ನಾವು ನಿಯಮಿತವಾಗಿ ಅಂಗಾಂಗ ಮರುಪಡೆಯುವಿಕೆಯೊಂದಿಗೆ ಮುಂದುವರಿಯಲು ಉತ್ಸುಕರಾಗಿದ್ದೇವೆ, ಏಕೆಂದರೆ ಇದು ಹೆಚ್ಚಿನ ಜೀವಗಳನ್ನು ಉಳಿಸುತ್ತದೆ. ಆದರೆ ನಮಗೆ ಸಂಪನ್ಮೂಲದ ಅವಶ್ಯಕತೆ ಇದೆ‌, ಅಂದರೆ ಒಂದು ಆಪರೇಷನ್ ವೇಳೆ ಇಬ್ಬರು ಅರಿವಳಿಕೆ ತಜ್ಞರು, ಒಬ್ಬ ವೈದ್ಯ ಮತ್ತು ನಾಲ್ಕು ವೆಂಟಿಲೇಟರ್ ಬೆಡ್‌ಗಳ ಅವಶ್ಯಕತೆ ಇದೆ. ಈ ವಿಷಯದಲ್ಲಿ ಹೆಚ್ಚಿನ ಬೆಂಬಲ ದೊರೆತರೆ ಸಹಾಯಕವಾಗಿರುತ್ತದೆ ಎಂದು ಅವರು ಹೇಳಿದರು.

ಆಸ್ಪತ್ರೆಯಲ್ಲಿ ಈಗ 44 ವೆಂಟಿಲೇಟರ್ ಬೆಡ್‌ಗಳು ಮತ್ತು 12 ಪ್ರಮುಖ ಓಟಿಗಳು (ಆಪರೇಷನ್ ಥಿಯೇಟರ್‌ಗಳು) ಇವೆ. ಕಸಿ ಮಾಡಲು ಅಂಗಗಳನ್ನು ಕಾರ್ಯಸಾಧ್ಯವಾಗಿಡಲು ರೋಗಿಯ ಆಮ್ಲಜನಕದ ಸ್ಯಾಚುರೇಷನ್ ನಿರ್ವಹಿಸಲು ವೆಂಟಿಲೇಟರ್‌ಗಳ ಅಗತ್ಯವಿದೆ. ಒಂದು ವೆಂಟಿಲೇಟರ್ ಅನ್ನು ಚಲಾಯಿಸಲು, ಮೂರು ನರ್ಸ್‌ಗಳ ಅಗತ್ಯವಿದೆ.

ಚೈತ್ರಾ ಅವರ ಪ್ರಕರಣದಲ್ಲಿ ಬ್ಯಾಕ್‌ಅಪ್ ಆಪರೇಷನ್ ಥಿಯೇಟರ್ ಅನ್ನು ಬಳಸಲಾಯಿತು. ಆದರೆ ಎಲ್ಲಾ ಪ್ರಮುಖ OT ಗಳು ಆಕ್ರಮಿಸಿಕೊಂಡಿರುವಾಗ ಯಾವುದೇ ಜೀವ ಉಳಿಸುವ ಶಸ್ತ್ರಚಿಕಿತ್ಸೆಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ.‌‌ ಆ‌ ಸಂದರ್ಭದಲ್ಲಿ ಈ ಆರ್ಗನ್ ರಿಟ್ರೀವಲ್‌ ಅನ್ನು ಬ್ಯಾಕಪ್ ಓಟಿಗಳಲ್ಲು ಮಾಡಲು ಸಾಧ್ಯವಿಲ್ಲ. ಪ್ರತಿ ತಲೆ ಗಾಯದ ರೋಗಿಯ ಶಸ್ತ್ರಚಿಕಿತ್ಸೆಯು ನಾಲ್ಕರಿಂದ ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...