alex Certify ವಿಚ್ಛೇದನ ಪಡೆದ 18 ಪುರುಷರಿಗೆ NGO ಕಡೆಯಿಂದ ಸಂಭ್ರಮಾಚರಣೆ; ಆಹ್ವಾನ ಪತ್ರಿಕೆ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚ್ಛೇದನ ಪಡೆದ 18 ಪುರುಷರಿಗೆ NGO ಕಡೆಯಿಂದ ಸಂಭ್ರಮಾಚರಣೆ; ಆಹ್ವಾನ ಪತ್ರಿಕೆ ವೈರಲ್​

ದೀರ್ಘಕಾಲದ ಕಾನೂನು ಹೋರಾಟಗಳ ನಂತರ ವಿಚ್ಛೇದನ ಪಡೆದ 18 ಪುರುಷರಿಗಾಗಿ ಸಂಭ್ರಮಾಚರಣೆ ಆಯೋಜನೆಗೊಂಡಿದ್ದು, ಆಹ್ವಾನ ಪತ್ರಿಕೆ ವೈರಲ್​ ಆಗಿದೆ.

ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ಸರ್ಕಾರೇತರ ಸಂಸ್ಥೆ (ಎನ್​ಜಿಒ) ಭಾಯಿ ವೆಲ್ಫೇರ್​ ಸೊಸೈಟಿ ವಿಚ್ಛೇದನ ಬಯಸುವ ಪುರುಷರಿಗಾಗಿ ಸಹಾಯವಾಣಿಯನ್ನು ನಡೆಸುತ್ತಿದೆ.

ವಿವಾಹ ವಿಚ್ಛೇದನ ಸಮಾರೋಹ್​ (ಮದುವೆ ವಿಸರ್ಜನಾ ಕಾರ್ಯ) ಎಂಬ ಕಾರ್ಯಕ್ರಮವು ಸೆಪ್ಟೆಂಬರ್​ 18 ರಂದು ರಾಜಧಾನಿ ನಗರದ ಹೊರವಲಯದಲ್ಲಿರುವ ರೆಸಾರ್ಟ್​ನಲ್ಲಿ ನಡೆಯಲಿದೆ ಎಂದು ಎನ್​ಜಿಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಭ್ರಮಾಚರಣೆಯ ಆಮಂತ್ರಣ ಪತ್ರಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೆೈರಲ್​ ಆಗಿದೆ.

ಇದು ಗೆಟ್​- ಟುಗೆದರ್​ ಆಗಿತ್ತು, ಆದರೆ ಈವೆಂಟ್​ನ ಆಹ್ವಾನವು ಸಣ್ಣ ಗುಂಪಿಗೆ ಮೀಸಲಾಗಿತ್ತು, ಆಕಸ್ಮಿಕವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಇದನ್ನು ವಿರೋಧಿಸುತ್ತಿರುವ ಜನರಿಂದ ನನಗೆ ಈಗ ಕರೆಗಳು ಬರುತ್ತಿದೆ ಎಂದು ಸಂಘಟನೆಯ ಸಂಚಾಲಕ ಝಕಿ ಅಹ್ಮದ್​ ತಿಳಿಸಿದ್ದಾರೆ.

ಗುಂಪಿನಲ್ಲಿರುವ ಜನರು ಈಗಾಗಲೇ ತಮ್ಮ ವಿಚ್ಛೇದನ ಪಡೆದುಕೊಂಡಿದ್ದಾರೆ. ದೀರ್ಘಕಾಲದ ಕಾನೂನು ಕದನದ ನಂತರ ದೊಡ್ಡ ಜೀವನಾಂಶವನ್ನು ಪಾವತಿಸುತ್ತಿದ್ದಾರೆ ಎಂದು ಅವರು ಹೇಳಿದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...