alex Certify ಮದುವೆ ಮನೆಯಲ್ಲಿ ಕಿಚ್ಚು ಹಚ್ಚಿದ ದಂಪತಿ ನೃತ್ಯ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮನೆಯಲ್ಲಿ ಕಿಚ್ಚು ಹಚ್ಚಿದ ದಂಪತಿ ನೃತ್ಯ: ವಿಡಿಯೋ ವೈರಲ್​

ಮಧ್ಯ ವಯಸ್ಸಿನ ದಂಪತಿ ಮದುವೆ ಸಮಾರಂಭದಲ್ಲಿ ವೇದಿಕೆಯ ಮೇಲೆ ನೃತ್ಯ ಮಾಡಿರುವ ವಿಡಿಯೋ ಒಂದು ವೈರಲ್​ ಆಗಿದೆ. ಈ ಅಭಿನಯದ ಸಮಯದಲ್ಲಿ, ದಂಪತಿ ತಮ್ಮ ನೃತ್ಯವು ಶೀಘ್ರದಲ್ಲೇ ಇಷ್ಟೊಂದು ವೈರಲ್​ ಆಗುತ್ತದೆ ಎಂದೂ ನಿರೀಕ್ಷಿಸಿದಂತಿಲ್ಲ. ಈ ಜೋಡಿ ಪೆಪ್ಪಿ ಟ್ರ್ಯಾಕ್‌ನಲ್ಲಿ ತಮ್ಮ ನೃತ್ಯದೊಂದಿಗೆ ವೇದಿಕೆಗೆ ಕಿಚ್ಚು ಹಚ್ಚಿದ್ದಾರೆ.

ಈ ದಂಪತಿ ನಡುವಿನ ಕೆಮೆಸ್ಟ್ರಿ ಚೆನ್ನಾಗಿದ್ದು, ನೆಟ್ಟಿಗರು ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಬ್ಬರ ಆಕರ್ಷಕವಾದ ಮತ್ತು ತಮಾಷೆಯ ಚಲನೆಗಳು ನೆಟ್ಟಿಗರ ಮನಸ್ಸಿಗೆ ಮುದ ನೀಡುತ್ತವೆ. ಸೂಪರ್​ ಜೋಡಿ ಎಂದು ಹಲವರು ಕಮೆಂಟ್​ ಮೂಲಕ ತಿಳಿಸಿದ್ದಾರೆ.

ಈ ವಿಡಿಯೋದಲ್ಲಿ ವಯಸ್ಸಾದ ಪುರುಷನು ನೃತ್ಯ ಸಂಯೋಜನೆಯನ್ನು ಸಲೀಸಾಗಿ ನಿರ್ವಹಿಸುತ್ತಾನೆ. ಆತನ ಪತ್ನಿ ಸ್ವಲ್ಪ ಶ್ರಮ ವಹಿಸಿ ನರ್ತಿಸಿದರೂ ಅದರಲ್ಲಿ ಆಕೆ ಯಶಸ್ವಿಯಾಗುವುದನ್ನು ವಿಡಿಯೋದಲ್ಲಿ ನೋಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...