alex Certify ಮದುವೆ ಉಡುಪಿನಲ್ಲೇ ಪದವಿ ಪರೀಕ್ಷೆಗೆ ಹಾಜರಾದ ವಧು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಉಡುಪಿನಲ್ಲೇ ಪದವಿ ಪರೀಕ್ಷೆಗೆ ಹಾಜರಾದ ವಧು

ಬಾರ್ಮರ್: ವಧುವೊಬ್ಬಳು ಮದುವೆಯ ನಂತರ ವರನೊಂದಿಗೆ ಮದುವೆಯ ಉಡುಪಿನಲ್ಲೇ ಪದವಿಯ ಮೂರನೇ ವರ್ಷದ ಪರೀಕ್ಷೆಗೆ ಹಾಜರಾದ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ.

ಹಿರೂ ದೇವಿ ಪರೀಕ್ಷೆಗೆ ಹಾಜರಾದ ವಧು. ಈಕೆ ರಾಜಸ್ಥಾನದ ಬಾರ್ಮರ್ ನಲ್ಲಿನ ಮುಲ್ತಾನ್ಮಾಲ್ ಭಿಖ್‌ಚಂದ್ ಛಾಜೆದ್ ಕನ್ಯಾ ಪಿಜಿ ಕಾಲೇಜಿನ ಮೂರನೇ ವರ್ಷದ ಬಿ ಎಸ್ ಸಿ ವ್ಯಾಸಂಗ ಮಾಡುತ್ತಿದ್ದಳು.

ಏಪ್ರಿಲ್ 21 ರಂದು ಮರುಡಿ ನಿವಾಸಿ ಗೋಮಾರಂ ಅವರ ಜೊತೆ ಹಿರೂ ದೇವಿ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದು, ಮದುವೆಯ ವಿಧಿವಿಧಾನಗಳ ನಂತರ, ಆಕೆ ತನ್ನ ಬಿಎಸ್ಸಿ ಮೂರನೇ ವರ್ಷದ ಪರೀಕ್ಷೆಗೆ ಹಾಜರಾಗಲು ಬಯಸುವುದಾಗಿ ತನ್ನ ಅತ್ತೆಗೆ ತಿಳಿಸಿ ತನ್ನ ಪತಿಯೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ.

ಈ ಬಗ್ಗೆ ಹೆಮ್ಮೆಪಟ್ಟ ಆಕೆಯ ಪತಿ ಗೋಮಾರಮ್, “ಹಿರೂ, ಮದುವೆಯ ವಿಧಿವಿಧಾನಗಳ ನಡುವೆ ಪರೀಕ್ಷೆಯನ್ನು ತೆಗೆದುಕೊಳ್ಳಲು ನಿರ್ಧರಿಸಿ ಇಂದಿನ ಕಾಲದಲ್ಲಿ ಶಿಕ್ಷಣವು ತುಂಬಾ ಮುಖ್ಯವಾಗಿದೆ ಎಂಬ ಸಂದೇಶ ಸಾರಿದ್ದಾಳೆʼʼ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...