alex Certify ನವಜಾತ ಶಿಶು ಉಡುಗೊರೆಯಾಗಿ ಪಡೆದಿದ್ದು ಬರೋಬ್ಬರಿ 2.8 ಮಿಲಿಯನ್​ ಡಾಲರ್‌ ಗಿಫ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವಜಾತ ಶಿಶು ಉಡುಗೊರೆಯಾಗಿ ಪಡೆದಿದ್ದು ಬರೋಬ್ಬರಿ 2.8 ಮಿಲಿಯನ್​ ಡಾಲರ್‌ ಗಿಫ್ಟ್

ಶ್ರೀಮಂತರು ತಮ್ಮ ಜೀವನ ಶೈಲಿಯಲ್ಲಿ ಮಿತಿಮೀರಿದ ವರ್ತನೆ ಮೂಲಕ ಚರ್ಚೆಗೆ ಗ್ರಾಸವಾಗುವುದುಂಟು. ವಿಶ್ವದ ಅತ್ಯುತ್ತಮ ಬಾಣಸಿಗರನ್ನು ನೇಮಿಸಿಕೊಳ್ಳುವುದರಿಂದ ಹಿಡಿದು ಡಿಸೈನರ್​ ಬಟ್ಟೆಗಳನ್ನು ಖರೀದಿಸುವುದು ಮತ್ತು ವಿಹಾರ ನೌಕೆಯನ್ನು ಹೊಂದುವುದು ಶ್ರೀಮಂತರ ಪಾಲಿಗೆ ಸಾಮಾನ್ಯವಾಗಿದೆ.

ಇದೆಲ್ಲವೂ ನವಜಾತ ಶಿಶುವಿಗೆ ಸೇರಿದೆ ಎಂದು ಊಹಿಸಲು ಸಾಧ್ಯವೇ? ಐವತ್ತೆರೆಡು ವರ್ಷದ ಬ್ಯಾರಿ ಡ್ರೆವಿಟ್​-ಬಾಲೋರ್ ಅವರೊಂದಿಗೆ ಎಂಗೇಜ್​ ಆದ 27 ವರ್ಷದ ಸ್ಕಾಟ್​ ಹಚಿನ್ಸನ್​ ಆಗಸ್ಟ್​ 12ರಂದು ಬಾಡಿಗೆ ತಾಯ್ತನದ ಮೂಲಕ ಗಂಡು ಮಗು ಪಡೆದರು. ರೋಮಿಯೋ ಟಾಕಿರ್ನ್​ ಹೆಸರಿನ‌ ಮಗುವನ್ನು ಬರಮಾಡಿಕೊಂಡರು. ಈ ನವಜಾತ ಶಿಶುವಿಗೆ ಶ್ರೀಮಂತ ಪೋಷಕರು ದುಬಾರಿ ಉಡುಗೊರೆಗಳನ್ನು ನೀಡಿದರು.

ಮಗು ಹುಟ್ಟುವ ಮೊದಲು, ಬಟ್ಟೆಗಾಗಿ 10 ಸಾವಿರ ಪೌಂಡ್​ ಖರ್ಚು ಮಾಡಿದ್ದು, ಅವನು ಹುಟ್ಟಿದ ಕ್ಷಣದಲ್ಲಿ ಮತ್ತೆ 20 ಸಾವಿರ ಪೌಂಡ್​ವೆಚ್ಚ ಮಾಡಿದ್ದಾರೆ. ಅವರು ರೋಮಿಯೋಗಾಗಿ 2.5 ಮಿಲಿಯನ್​ ಪೌಂಡ್​ (ಸುಮಾರು ರೂ 22.3 ಕೋಟಿ) ವೆಚ್ಚದ ವಿಹಾರ ನೌಕೆಯನ್ನು ಸಹ ಖರೀದಿಸಿದ್ದಾರೆ.

ರೋಮಿಯೋಗಿಂತ ಮೊದಲು ಹುಟ್ಟಿದ ವ್ಯಾಲೆಂಟಿನಾ ತನ್ನ ಪುಟ್ಟ ಸಹೋದರನನ್ನು ತುಂಬಾ ಇಷ್ಟಪಡುತ್ತಾಳೆ. ಅವಳು ವೈಯಕ್ತಿಕ ಅಡುಗೆಯವರು, ಹೇರ್​ ಸ್ಟೈಲಿಸ್ಟ್​, ಇತ್ತೀಚಿನ ಗ್ಯಾಜೆಟ್​ಗಳು ಮತ್ತು ಆಟಿಕೆಗಳಿಂದ ತುಂಬಿರುವ ಆಟದ ಕೋಣೆ, ಪೂರ್ಣ ಸಮಯದ ಜೊತೆಗಿರುವ ಲೈವ್ -ಇನ್​ ದಾದಿ, ಅವಳ ಪ್ರತಿಯೊಂದು ಅಗತ್ಯವನ್ನು ನೋಡಿಕೊಳ್ಳುವ ಮನೆ ಸಿಬ್ಬಂದಿಯ ತಂಡವನ್ನು ಹೊಂದಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...