alex Certify ಪತ್ರಿಕಾಗೋಷ್ಠಿ ಸಂದರ್ಭದಲ್ಲೇ ಭೂಕಂಪನ; ಕ್ಷಣಾರ್ಧದಲ್ಲೇ ಸಾವರಿಸಿಕೊಂಡು ಮಾತು ಮುಂದುವರಿಸಿದ ಪ್ರಧಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ರಿಕಾಗೋಷ್ಠಿ ಸಂದರ್ಭದಲ್ಲೇ ಭೂಕಂಪನ; ಕ್ಷಣಾರ್ಧದಲ್ಲೇ ಸಾವರಿಸಿಕೊಂಡು ಮಾತು ಮುಂದುವರಿಸಿದ ಪ್ರಧಾನಿ

ಕೊರೋನಾ ವೈರಸ್ ಕುರಿತಂತೆ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದ ನ್ಯೂಜ಼ಿಲೆಂಡ್ ಪ್ರಧಾನ ಮಂತ್ರಿ ಜೆಸಿಂದಾ ಆರ್ಡರ್ನ್‌, ರಾಜಧಾನಿ ವೆಲ್ಲಿಂಗ್ಟನ್‌ನಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಪತ್ರಿಕಾಗೋಷ್ಠಿಯ ವೇಳೆ ಕೆಲ ಕ್ಷಣ ಸ್ತಬ್ಧರಾಗಿದ್ದಾರೆ. ಆದರೆ ಕೆಲವೇ ಕ್ಷಣಗಳ ಬಳಿಕ ಜಸಿಂದಾ ತಮ್ಮ ಭಾಷಣ ಮುಂದುವರೆಸಿದ್ದಾರೆ.

ಭಾರತದ ಸೋಲಿನ ಬಳಿಕ ʼಕ್ಯಾಪ್ಟನ್ ಕೂಲ್‌ʼರ ವಾಸ್ತವಿಕ ಮಾತಿನ ಹಳೆ ವಿಡಿಯೋ ವೈರಲ್

ನ್ಯೂಜ಼ಿಲೆಂಡ್‌ನ ಉತ್ತರ ದ್ವೀಪದ ಕೇಂದ್ರ ಭಾಗದಲ್ಲಿರುವ ಟೌಮಾರುನಿ ಎಂಬ ಪ್ರದೇಶದಲ್ಲಿ ಕಂಪನ ಕೇಂದ್ರವಿರುವ ಈ ಭೂಕಂಪನವು ರಾಜಧಾನಿ ವೆಲ್ಲಿಂಗ್ಟನ್‌ನಿಂದ 35 ಕಿಮೀ ದೂರದಲ್ಲಿ ಸಂಭವಿಸಿದೆ. ರಿಕ್ಟರ್‌ ಮಾಪನದಲ್ಲಿ 5.9ರಷ್ಟಿದ್ದು ಭೂಕಂಪನದ ತೀವ್ರತೆಯಿಂದ ಯಾವುದೇ ರೀತಿಯ ಹಾನಿಯಾದ ಘಟನೆ ವರದಿಯಾಗಿಲ್ಲ.

ತಮ್ಮೊಂದಿಗೆ ವೇದಿಕೆಯ ಮೇಲಿದ್ದ ಉಪ ಪ್ರಧಾನಿ ಗ್ರಾಂಟ್ ರಾಬರ್ಟ್ಸನ್‌ಗೆ ಆ ವೇಳೆ ಸಂಭವಿಸಿದ್ದು‌, ಭೂಕಂಪನವೋ ಅಥವಾ ಬಿರುಗಾಳಿಯೋ ಎಂಬ ಗೊಂದಲವಿದ್ದಿದ್ದಾಗಿ ಜೆಸಿಂದಾ ಇದೇ ವೇಳೆ ತಿಳಿಸಿದ್ದಾರೆ.

ಈ ಸ್ಥಳಗಳನ್ನು ಸುತ್ತಲು ಅಕ್ಟೋಬರ್ ತಿಂಗಳು ಬೆಸ್ಟ್….!

ಅನಿರೀಕ್ಷಿತ ಘಟನೆ ಪ್ರಧಾನಿಯನ್ನೂ ಆತಂಕಕ್ಕೆ ತಳ್ಳಿದ್ದು, ಕೊನೆಗೆ ಸಾವರಿಸಿಕೊಂಡಿದ್ದಾರೆ.

ಭೂಕಂಪನದ ಸಾಧ್ಯತೆ ಸಕ್ರಿಯವಾಗಿರುವ ’ರಿಂಗ್ ಆಫ್ ಫೈರ್‌’ ಪ್ರದೇಶದಲ್ಲಿರುವ ನ್ಯೂಜ಼ಿಲೆಂಡ್‌ನಲ್ಲಿ ಪದೇ ಪದೇ ಮಧ್ಯಮ ಮಟ್ಟದ ತೀವ್ರತೆಯ ಭೂಕಂಪನಗಳು ಆಗುತ್ತಲೇ ಇರು‌ತ್ತವೆ. ಈ ಪ್ರದೇಶದಲ್ಲಿ 40,000 ಕಿಮೀ ನಷ್ಟು ಜ್ವಾಲಾಮುಖಿಗಳು ಹಾಗೂ ಸಾಗರದ ಆಳಗಳು ಇದ್ದು ಪೆಸಿಫಿಕ್ ಸಾಗರವನ್ನು ಭೋರ್ಗರೆಯುವಂತೆ ಮಾಡುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...