alex Certify ಹೊಸ ವರ್ಷ ಭರ್ಜರಿಯಾಗಿ ಸ್ವಾಗತಿಸಿದ ನ್ಯೂಜಿಲೆಂಡ್, ಆಸ್ಟ್ರೇಲಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷ ಭರ್ಜರಿಯಾಗಿ ಸ್ವಾಗತಿಸಿದ ನ್ಯೂಜಿಲೆಂಡ್, ಆಸ್ಟ್ರೇಲಿಯಾ

2023 ಕ್ಕೆ ಕೆಲವೇ ಗಂಟೆಗಳು ಬಾಕಿಯಿರುವುದರಿಂದ ಹೊಸ ವರ್ಷ ಸ್ವಾಗತಿಸಲು ಜನ ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಈಗಾಗಲೇ ಹೊಸ ವರ್ಷ 2023 ಸ್ವಾಗತಿಸಲಾಗಿದೆ.

ಪೆಸಿಫಿಕ್ ರಾಷ್ಟ್ರ ನ್ಯೂಜಿಲೆಂಡ್ 2023 ಅನ್ನು ಸ್ವಾಗತಿಸುವ ಮೊದಲ ದೇಶವಾಗಿದೆ. ಓಷಿಯಾನಿಯಾ ಖಂಡ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಫಿಜಿ ಮತ್ತು ಪಪುವಾ ನ್ಯೂಗಿನಿಯಂತಹ ದ್ವೀಪ ರಾಷ್ಟ್ರಗಳನ್ನು ಹೊಂದಿರುವ ದೇಶಗಳು 2023 ರ ಹೊಸ ವರ್ಷವನ್ನು ಸ್ವಾಗತಿಸಿದ ಮೊದಲಿಗರಾಗಿದ್ದಾರೆ.

ಕಿರಿಬಾಟಿಯಲ್ಲಿರುವ ಕಿರಿಟಿಮತಿ ದ್ವೀಪ 2023 ಅನ್ನು ಆಚರಿಸಿದ ಮೊದಲ ಸ್ಥಳವಾಗಿದೆ, ಅಲ್ಲಿ ಜನವರಿ 1 ರಂದು ಬೆಳಿಗ್ಗೆ 10 GMT ಯಿಂದ ಪ್ರಾರಂಭವಾಗುತ್ತದೆ(ಡಿಸೆಂಬರ್ 31 ರಂದು 3:30 pm IST). ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಜನರು ಸಹ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ನ್ಯೂಜಿಲೆಂಡ್‌ ನ ಆಕ್ಲೆಂಡ್ ನಲ್ಲಿ ಜನರು ಪಟಾಕಿ ಮತ್ತು ಬೆಳಕಿನ ಪ್ರದರ್ಶನದ ನಡುವೆ ಹೊಸ ವರ್ಷ 2023 ಹರ್ಷಚಿತ್ತದಿಂದ ಸ್ವಾಗತಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...