alex Certify ಪಾರ್ಕ್‌ ನಲ್ಲಿದ್ದ ಕ್ರೇನ್ ಮೇಲೇರಿ ನಗ್ನನಾದ ವ್ಯಕ್ತಿ; ಕೆಳಗಿಳಿಸಲು ಹರಸಾಹಸಪಟ್ಟ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಕ್‌ ನಲ್ಲಿದ್ದ ಕ್ರೇನ್ ಮೇಲೇರಿ ನಗ್ನನಾದ ವ್ಯಕ್ತಿ; ಕೆಳಗಿಳಿಸಲು ಹರಸಾಹಸಪಟ್ಟ ಪೊಲೀಸರು

ನ್ಯೂಯಾರ್ಕ್ ನ ವಾಷಿಂಗ್ಟನ್​ ಸ್ಕ್ವೇರ್​ ಪಾರ್ಕ್​ ಬಳಿ ವ್ಯಕ್ತಿಯೊಬ್ಬರು ಕಟ್ಟಡ ನಿರ್ಮಾಣದಲ್ಲಿ ಬಳಸುವ ಕ್ರೇನ್​ ಮೇಲೆ ಹತ್ತಿ, ಉದ್ಯಾನದ ಆವರಣದಲ್ಲಿ ಭಾರೀ ಜನಸಮೂಹ ಜಮಾಯಿಸುತ್ತಿದ್ದಂತೆ ವಿವಸ್ತ್ರಗೊಂಡಿದ್ದಾನೆ.

ಅಪರಿಚಿತ ವ್ಯಕ್ತಿ ಅಲ್ಲಿದ್ದವರನ್ನು ಉದ್ದೇಶಿಸಿ “ನಿಮಗೆ ಇಂದು ಮನರಂಜನೆ ಇಲ್ಲವೇ?” ಎಂದು ಕೂಗಿದನು. “ನಿಮಗೆ ಮನರಂಜನೆ ಇಲ್ಲವೇ?’ ಎಂಬ ಸಾಲು ರಸ್ಸೆಲ್​ ಕ್ರೋವ್​ ಅವರ 2000ರಲ್ಲಿ ಬಿಡುಗಡೆಯಾದ ಚಲನಚಿತ್ರ “ಗ್ಲಾಡಿಯೇಟರ್​’ ನಿಂದ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಆರ್ಚ್​ ಪಕ್ಕದ ಕಾಂಡೋರ್​ ಕ್ರೇನ್​ ಅನ್ನು ಹತ್ತುವಾಗಲೇ ಆ ವ್ಯಕ್ತಿ ಶರ್ಟ್​ಲೆಸ್​ ಆಗಿದ್ದ. ಹಲವಾರು ಬಾರಿ ಆತ ನೆಗೆಯುವುದಾಗಿ ಬೆದರಿಕೆ ಹಾಕಿದ್ದ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ವೀಕ್ಷಕರು ಅಂಚಿನಿಂದ ದೂರ ಹೋಗುವಂತೆ ಆತನನ್ನು ಕೇಳಿದ್ದಾರೆ.

ಅವನು ಜಿಗಿದರೆ ಅಥವಾ ಬಿದ್ದರೆ ರಕ್ಷಣೆಗಾಗಿ ದೊಡ್ಡ ಏರ್​ಬ್ಯಾಗ್​ ಅನ್ನು ಬಿಚ್ಚಲಾಗಿತ್ತು. ನಂತರ, ಆತನನ್ನು ಕೆಳಕ್ಕೆ ಇಳಿಸಲು ಕ್ರೇನ್​ ಆಪರೇಟರ್​ಗೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ, ಬಳಿಕ ಅವನನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿ ಬಂಧಿಸಲಾಗಿದೆ. ಆದರೆ ನೂರಾರು ಜನರು ಇವನ ಹುಚ್ಚಾಟ ವೀಕ್ಷಿಸಲು ಜಮಾಯಿಸಿದ್ದರು.

ಈ ಸ್ಥಳದಲ್ಲಿ ಬಟ್ಟೆ ಬಿಚ್ಚಿಕೊಂಡ ಪ್ರಕರಣ ಇದೇ ಮೊದಲಲ್ಲ. 2020 ರ ಬೇಸಿಗೆಯಲ್ಲಿ, ವ್ಯಕ್ತಿಯೊಬ್ಬ ಬೆತ್ತಲೆಯಾಗಿದ್ದು, ಉದ್ಯಾನವನದ ಬರಿದಾದ ಕಾರಂಜಿಯಲ್ಲಿ ಕುಳಿತಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...