alex Certify ವಿಮಾನ ಪ್ರಯಾಣಿಕನ ಲಗೇಜ್‌ನಲ್ಲಿತ್ತು ಜೀವಂತ ಬೆಕ್ಕು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಪ್ರಯಾಣಿಕನ ಲಗೇಜ್‌ನಲ್ಲಿತ್ತು ಜೀವಂತ ಬೆಕ್ಕು….!

ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಸೂಟ್‌ಕೇಸ್‌ನಲ್ಲಿ ಸೇರಿಕೊಂಡಿದ್ದ ಜೀವಂತ ಬೆಕ್ಕಿನ‌ ಮರಿ ಪತ್ತೆ ಮಾಡಿದ್ದಾರೆ.

ನವೆಂಬರ್ 16ರಂದು ಎಕ್ಸ್-ರೇ ಘಟಕದ ಮೂಲಕ ಬ್ಯಾಗ್ ಪರಿಶೀಲನೆ ನಡೆದಾಗ ಭದ್ರತಾ ಸಿಬ್ಬಂದಿ ಆಶ್ಚರ್ಯಚಕಿತರಾದರು. ಎಕ್ಸ್‌ ರೇ ನಲ್ಲಿ ಬ್ಯಾಗೇಜ್ ಒಳಗೆ ನಾಲ್ಕು ಕಾಲು, ಬಾಲದ ಪ್ರಾಣಿ ಕಾಣಿಸಿದೆ.

ಬಳಿಕ ಪರಿಶೀಲಿಸಿದ್ದು, ಬೆಕ್ಕು ಪತ್ತೆಯಾದ ನಂತರ ಪ್ರಯಾಣಿಕನು ಟಿಕೆಟ್ ಕೌಂಟರ್‌ಗೆ ಹಿಂತಿರುಗಲು ಸಂದೇಶ ಕಳುಹಿಸಲಾಯಿತು.

ಆ ಪ್ರಯಾಣಿಕ ಬೆಕ್ಕು ಬೇರೊಬ್ಬರಿಗೆ ಸೇರಿದೆ, ಬೆಕ್ಕು ಸೂಟ್ ಕೇಸ್ ನಲ್ಲಿದೆ ಎಂದು ತನಗೆ ತಿಳಿದಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ. ಬಳಿಕ ಬೆಕ್ಕನ್ನು ಅದರ ಮಾಲೀಕರಿಗೆ ಹಿಂತಿರುಗಿಸಲಾಯಿತು. ವಿಮಾನ ನಿಲ್ದಾಣದ ಅಧಿಕಾರಿಗಳು ತಲುಪುವವರೆಗೂ ತನ್ನ ಟ್ಯಾಬಿ ಕಾಣೆಯಾಗಿರುವುದು ಬೆಕ್ಕಿನ‌ ಮಾಲಕಿಗೂ ತಿಳಿದಿರಲಿಲ್ಲ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...