alex Certify ಯೆಜ್ಡಿ ಬೈಕ್‌ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್: ಮತ್ತೆ ರಸ್ತೆಗಿಳಿಯಲಿದ್ದಾನೆ ’ರೋಡ್‌‌ ಕಿಂಗ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೆಜ್ಡಿ ಬೈಕ್‌ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್: ಮತ್ತೆ ರಸ್ತೆಗಿಳಿಯಲಿದ್ದಾನೆ ’ರೋಡ್‌‌ ಕಿಂಗ್’

ದಶಕಗಳ ಹಿಂದೆ ಭಾರತೀಯ ರಸ್ತೆಗಳಲ್ಲಿ ತನ್ನದೇ ಹವಾ ಎಬ್ಬಿಸಿದ್ದ ’ಕ್ಲಾಸಿಕ್ ಲೆಜೆಂಡ್ಸ್‌’ನ ’ಯೆಜ಼್ಡಿ’ ಬೈಕುಗಳು ದೇಶೀ ಮಾರುಕಟ್ಟೆಗೆ ಮತ್ತೊಮ್ಮೆ ಪ್ರವೇಶಿಸಲಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಮೋಟರ್‌ ಸೈಕಲ್‌ಗಳಲ್ಲಿ ಐಕಾನಿಕ್ ಬ್ರಾಂಡ್‌ ಒಂದಾಗಿರುವ ಯೆಜ಼್ಡಿ 2022ರ ಮೊದಲಾರ್ಧದಲ್ಲಿ ತನ್ನ ಆಧುನಿಕ ಅವತಾರದಲ್ಲಿ ಬಿಡುಗಡೆಯಾಗಲಿದೆ. ಜನವರಿ 2022ರಲ್ಲೇ ಯೆಜ಼್ಡಿ ಲಾಂಚ್‌ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತನ್ನ ಜಾವಾ ಬ್ರಾಂಡ್‌ನ ಮೋಟರ್‌ ಸೈಕಲ್‌ಗಳನ್ನು ಭಾರತಕ್ಕೆ ಮರಳಿ ತಂದಿರುವ ಕ್ಲಾಸಿಕ್ ಲೆಜೆಂಡ್ಸ್‌, ಮುಂದಿನ ವರ್ಷದಲ್ಲಿ ಯೆಜ಼್ಡಿಯ ಕನಿಷ್ಠ ಎರಡು ಅವತಾರಗಳನ್ನು ಪರಿಚಯಿಸಲಿದೆ. ಇವುಗಳಲ್ಲಿ ಒಂದು ಸಾಹಸಕ್ಕೆ ಮತ್ತೊಂದು ಬಹುವಿಧದ ಉಪಯೋಗಕ್ಕೆ ಬರಲಿದೆ. ಈ ಬೈಕುಗಳನ್ನು ಅದಾಗಲೇ ದೇಶದಲ್ಲಿ ಪ್ರಯೋಗಾತ್ಮಕ ರೈಡ್‌ಗಳಿಗೆ ಒಳಪಡಿಸಲಾಗಿದೆ.

BIG NEWS: ಪರಿಷತ್ ಚುನಾವಣೆ; ಸಿಎಂ ಬೊಮ್ಮಾಯಿ ಭೇಟಿಯಾದ ರಮೇಶ್ ಜಾರಕಿಹೊಳಿ; ಕುತೂಹಲ ಮೂಡಿಸಿದ ಚರ್ಚೆ

ತನ್ನ ಜಾವಾ ಬೈಕುಗಳನ್ನು ಉತ್ಪಾದಿಸುವ ಘಟಕದಲ್ಲೇ ಯೆಜ಼್ಡಿ ಬೈಕುಗಳನ್ನು ಕ್ಲಾಸಿಕ್ ಲೆಜೆಂಡ್ಸ್‌ ಉತ್ಪಾದಿಸಲಿದೆ. ತನ್ನ ಯೆಜ಼್ಡಿ ಹಾಗೂ ಯೆಜ಼್ಡಿ ರೋಡ್‌ಕಿಂಗ್ಸ್‌ ಮಾಡೆಲ್‌ಗಳ ಮೇಲೆ ಟ್ರೇಡ್‌ಮಾರ್ಕ್‌ಗಳನ್ನು ಕ್ಲಾಸಿಕ್ ಲೆಜೆಂಡ್ಸ್‌ ಅದಾಗಲೇ ಫೈಲ್ ಮಾಡಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...