alex Certify ಕಾರಿನ ಚಕ್ರಕ್ಕೆ ಬಟ್ಟೆ ಸಿಲುಕಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಭೀಕರ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಚಕ್ರಕ್ಕೆ ಬಟ್ಟೆ ಸಿಲುಕಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಭೀಕರ ಸಾವು

ನವದೆಹಲಿ: ಸ್ಕೂಟರ್​ನಲ್ಲಿ ಹೋಗುತ್ತಿದ್ದ ಯುವತಿಯ ಬಟ್ಟೆ ಪಕ್ಕದಲ್ಲಿ ಬರುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ ಅಪಘಾತವಾಗಿರುವ ಭಯಾನಕ ಘಟನೆ ದೆಹಲಿಯಲ್ಲಿ ನಡೆದಿದೆ. ಆಯತಪ್ಪಿ ಬಿದ್ದ ಯುವತಿಯ ಬಟ್ಟೆ ಚಕ್ರಕ್ಕೆ ಸಿಲುಕಿದ್ದರಿಂದ ಅದರ ಅರಿವು ಇಲ್ಲದ ಕಾರು ಚಾಲಕ ಕಾರನ್ನು ಚಾಲನೆ ಮಾಡುತ್ತಲೇ ಸಾಗಿದ್ದರಿಂದ ಯುವತಿ ನೋವಿನಲ್ಲಿ ಮೃತಪಟ್ಟಿದ್ದಾಳೆ.

ಕೆಲವು ಕಿಲೋಮೀಟರ್‌ಗಳವರೆಗೆ ಯುವತಿಯನ್ನು ಕಾರು ಎಳೆದುಕೊಂಡು ಹೋಗಿದೆ. ಬಟ್ಟೆ ಸಂಪೂರ್ಣ ಚಕ್ರಕ್ಕೆ ಸಿಲುಕಿದೆ. ಬೆತ್ತಲೆ ದೇಹವನ್ನು ನೋಡಿದ್ದ ಸ್ಥಳೀಯರು ಆಕೆಯ ಮೇಲೆ ಅತ್ಯಾಚಾರ ಎಸಗಿ ಎಸೆದು ಹೋಗಲಾಗಿದೆ ಎಂದು ಭಾವಿಸಿದ್ದರು. ಪೊಲೀಸರು ಕೂಡ ಹಾಗೆಯೇ ಭಾವಿಸಿದ್ದರು. ಆದರೆ ಇದೀಗ ನಿಜ ಸಂಗತಿ ಬಯಲಾಗಿದೆ.

ಬೆಳಗಿನ ಜಾವ 3:24ರ ಸುಮಾರಿಗೆ ತಮಗೆ ಈ ವಿಚಾರವಾಗಿ ಕರೆ ಬಂದಿತ್ತು. ಯುವತಿ ಶವವನ್ನು ಬಲೆನೋ ಕಾರಿಗೆ ಕಟ್ಟಿ ಎಳೆದೊಯ್ಯಲಾಗುತ್ತಿದೆ ಎಂದು ಕರೆ ಮಾಡಿದವರು ತಿಳಿಸಿದ್ದರು. ನಂತರ ಹೋಗಿ ನೋಡಿ ತನಿಖೆ ಕೈಗೊಂಡಾಗ ನಿಜಾಂಶ ತಿಳಿದು ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಸ ವರ್ಷದಲ್ಲಿಯೇ ಈ ಆಘಾತಕಾರಿ ಘಟನೆ ನಡೆದಿರುವುದಾಗಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...