alex Certify BIG NEWS: ಚಿನ್ನ ಮಾರಾಟಕ್ಕೆ ಹೊಸ ನಿಯಮ; ಏ.1ರಿಂದಲೇ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚಿನ್ನ ಮಾರಾಟಕ್ಕೆ ಹೊಸ ನಿಯಮ; ಏ.1ರಿಂದಲೇ ಜಾರಿ

ನವದೆಹಲಿ: ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಬರುವ ಜೂನ್ 1 ರಿಂದ 6 ಅಂಕಿಗಳ ಹಾಲ್ಮಾರ್ಕಿಂಗ್ ಅನ್ನು ಕಡ್ಡಾಯ ಮಾಡಲಾಗಿದ್ದು, ಆರು ಅಂಕಿಗಳ ಕೋಡ್ ಇಲ್ಲದೆ ಹಾಲ್‌ಮಾರ್ಕ್ ಮಾಡಿದ ಚಿನ್ನದ ಆಭರಣಗಳು ಮತ್ತು ಚಿನ್ನದ ಕಲಾಕೃತಿಗಳ ಮಾರಾಟವನ್ನು ಏಪ್ರಿಲ್ 1 ರಿಂದ ನಿಷೇಧಿಸಲಾಗಿದೆ.

4 ಅಂಕಿ ಮತ್ತು 6 ಅಂಕಿಗಳ ಹಾಲ್‌ಮಾರ್ಕಿಂಗ್ ಕುರಿತು ಗ್ರಾಹಕರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮೈಕ್ರೋ ಸೇಲ್ ಘಟಕಗಳಲ್ಲಿ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು 6 ಅಂಕಿಗಳ ಹಾಲ್‌ಮಾರ್ಕಿಂಗ್‌ ಅನ್ನು ಕಡ್ಡಾಯ ಮಾಡಲಾಗಿದೆ. ಏಪ್ರಿಲ್ 1ರಿಂದ HUID ಹೊಂದಿರುವ ಚಿನ್ನದ ಆಭರಣಗಳ ಮಾರಾಟವನ್ನು ಮಾತ್ರ ಅನುಮತಿಸಲಾಗುವುದು.

ಹೊಸ ನಿಯಮದ ಪ್ರಕಾರ, ಏಪ್ರಿಲ್ 1 ರಿಂದ, ಆರು ಅಂಕಿಗಳ ಆಲ್ಫಾನ್ಯೂಮರಿಕ್ ಹಾಲ್‌ಮಾರ್ಕಿಂಗ್ ಮಾತ್ರ ಮಾನ್ಯವಾಗಿರುತ್ತದೆ. ಹಾಲ್‌ಮಾರ್ಕಿಂಗ್‌ ಇಲ್ಲದ ಚಿನ್ನ ಮತ್ತು ಚಿನ್ನಾಭರಣಗಳನ್ನು ಮಾರಾಟ ಮಾಡುವಂತಿಲ್ಲ. ಅಲ್ಲದೆ, ಇನ್ಮುಂದೆ ನಾಲ್ಕು ಅಂಕಿಗಳ ಹಾಲ್‌ಮಾರ್ಕ್ ಅನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...