alex Certify ಗೃಹಿಣಿಯರಿಗೆ ಭರ್ಜರಿ ಗುಡ್​ ನ್ಯೂಸ್​: ಅನಿಲ ಉಳಿತಾಯ ಮಾಡಬಲ್ಲ ಗ್ಯಾಸ್​ ಸ್ಟೌ ಶೀಘ್ರದಲ್ಲೇ ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೃಹಿಣಿಯರಿಗೆ ಭರ್ಜರಿ ಗುಡ್​ ನ್ಯೂಸ್​: ಅನಿಲ ಉಳಿತಾಯ ಮಾಡಬಲ್ಲ ಗ್ಯಾಸ್​ ಸ್ಟೌ ಶೀಘ್ರದಲ್ಲೇ ಲಭ್ಯ

ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿರುವ ಸರ್ಕಾರಿ ನೇಮಿತ ಸಲಹಾ ಸಂಸ್ಥೆಯಾದ ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಘವು ಪಿಎನ್​ಜಿ ಗ್ರಾಹಕರಿಗೆಂದೇ ಹೊಸ ಗ್ಯಾಸ್​ ಸ್ಟೌ ಅಭಿವೃದ್ಧಿಪಡಿಸಿದೆ. ಈ ಹೊಸ ಗ್ಯಾಸ್​ ಸ್ಟೌ ಅನಿಲದ ಬಳಕೆಯನ್ನ ಕಡಿಮೆ ಮಾಡಲಿದ್ದು, ಇದರಿಂದಾಗಿ ಹಣವೂ ಉಳಿತಾಯವಾಗಲಿದೆ.

ಎನರ್ಜಿ ಎಫಿಷಿಯೆನ್ಸಿ ಸರ್ವೀಸ್​ ಲಿಮಿಟೆಡ್​ ಜೊತೆಯಲ್ಲಿ ತಿಳುವಳಿಕೆ ಒಪ್ಪಂದಕ್ಕೆ ಪಿಸಿಆರ್​ಎ ಸಹಿಯನ್ನ ಹಾಕಿದೆ. ಕುಕ್​ ಸ್ಟೌ ಯೋಜನೆಯ ಮೊದಲ ಹಂತದಲ್ಲಿ ದೇಶಾದ್ಯಂತ ಇಇಎಸ್​ಎಲ್​ 10 ಲಕ್ಷ ಗ್ಯಾಸ್​ ಸ್ಟೌಗಳನ್ನ ವಿತರಣೆ ಮಾಡಲಿದೆ.

ಈ ಹೊಸ ಗ್ಯಾಸ್​ ಸ್ಟೌಗಳು ಗ್ರಾಹಕರಿಗೆ ಅಗ್ಗದ ದರದಲ್ಲಿಯೇ ಸಿಗಲಿದೆ ಎಂದು ಪಿಸಿಆರ್​ಎ ಗ್ಯಾರಂಟಿ ನೀಡಿದೆ. ಎಲ್​ಪಿಜಿ ಸಿಲಿಂಡರ್​ಗಳ ಸಹಾಯದಿಂದ ಗ್ರಾಹಕರು ಇನ್ಮೇಲೆ ಈ ಹೊಸ ಸ್ಟೌಗಳನ್ನ ಬಳಕೆ ಮಾಡಬಹುದಾಗಿದೆ.

ಈ ಹೊಸ ಸ್ಟೌನಿಂದಾಗಿ ಎಲ್​ಪಿಜಿ ಬಳಕೆಯನ್ನ 40 ಪ್ರತಿಶತ ಕಡಿಮೆ ಮಾಡುವ ಸಾಮರ್ಥ್ಯವನ್ನ ಹೊಂದಿದೆ. ಉಷ್ಣ ದಕ್ಷತೆಯ ಪ್ರಮಾಣ ಕಡಿಮೆಯಾಗೋದ್ರಿಂದ ಅನಿಲವು ಸ್ಟೌನಲ್ಲಿಯೇ ಹೆಚ್ಚು ಬಳಕೆಯಾಗಲಿದೆ. ಅಲ್ಲದೇ ಈ ಹೊಸ ಸ್ಟೌಗಳಿಗೆ ಐಎಸ್​ಐ ಮುದ್ರೆ ಕೂಡ ದಕ್ಕಿದೆ.

ಎಲ್ಲಾ ಎಲ್​ಪಿಜಿ ಗ್ರಾಹಕರು ತಮ್ಮ ಮನೆಯಲ್ಲಿರುವ ಸಾಮಾನ್ಯ ಗ್ಯಾಸ್​ ಸ್ಟೌಗಳನ್ನ ಬದಿಕ್ಕೊತ್ತಿ ಈ ಹೊಸ ಒಲೆಯನ್ನ ಮನೆಗೆ ಕೊಂಡೊಯ್ಯೋದ್ರಿಂದ 3901 ಕೋಟಿ ರೂಪಾಯಿ ಮೌಲ್ಯದ ನೈಸರ್ಗಿಕ ಅನಿಲ ಬಳಕೆಯನ್ನ ಉಳಿತಾಯ ಮಾಡಬಹುದಾಗಿದೆ ಎಂದು ಪೆಟ್ರೋಲಿಯಂ ಸಂರಕ್ಷಣಾ ಸಂಶೋಧನಾ ಸಂಘ ಮಾಹಿತಿ ನೀಡಿದೆ. ಇದು ಮಾತ್ರವಲ್ಲದೇ ಪರಿಸರಕ್ಕೆ ಹೊರಸೂಸಲಾಗುತ್ತಿದ್ದ ಕಾರ್ಬನ್​ ಡೈಯಾಕ್ಸೈಡ್​ ಪ್ರಮಾಣ 11 ಮಿಲಿಯನ್​ ಟನ್​ನಷ್ಟು ಕಡಿತವಾಗಲಿದೆ ಎಂದು ಅಂದಾಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...