alex Certify ಎದೆಹಾಲು ಗುಲಾಬಿ ಬಣ್ಣದಲ್ಲಿದ್ದುದ್ದನ್ನು ಕಂಡು ಬೆಚ್ಚಿಬಿದ್ದ ಮಹಿಳೆ​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆಹಾಲು ಗುಲಾಬಿ ಬಣ್ಣದಲ್ಲಿದ್ದುದ್ದನ್ನು ಕಂಡು ಬೆಚ್ಚಿಬಿದ್ದ ಮಹಿಳೆ​..!

ಮಗುವಿಗೆ ಜನ್ಮ ನೀಡೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ. ತಾಯಾಗುವವಳು ಸಾಕಷ್ಟು ಕಷ್ಟಗಳನ್ನು ಎದುರಿಸಿ ಮಗುವಿಗೆ ಜನ್ಮ ನೀಡುತ್ತಾಳೆ. ತಾಯಿಯಾದವಳಿಗೆ ಪ್ರತಿದಿನವೂ ಯುದ್ಧವೇ. ಈಗೀಗ ಗರ್ಭಿಣಿಯಾದವರಿಗೆ, ಬಾಣಂತಿಯರಿಗೆ ಸಾಕಷ್ಟು ಮಾಹಿತಿಗಳು ಸೋಶಿಯಲ್​ ಮೀಡಿಯಾದಲ್ಲೇ ಸಿಕ್ಕಿ ಬಿಡುತ್ತದೆ.

ಅಲ್ಲದೇ ಈಗೆಲ್ಲ ಗಭಾವಸ್ಥೆ, ಬಾಣಂತಿ, ಎದೆ ಹಾಲು ಈ ವಿಚಾರಗಳ ಬಗ್ಗೆ ಮಾತನಾಡಲು ಯಾರೂ ನಾಚಿಕೆ ಭಾವ ವ್ಯಕ್ತಪಡಿಸೋದಿಲ್ಲ. ಹೀಗಾಗಿ ಅನೇಕರು ತಮ್ಮಲ್ಲಿರುವ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ನಡೆಸಬಹುದಾಗಿದೆ.

ಟಿಕ್​ಟಾಕ್​​ನಲ್ಲಿ ಜೋ ಜಾನ್ಸನ್​ ಎಂಬ ಹೆಸರಿನ ಮಹಿಳೆಯು ಹೊಸ ವಿಚಾರವೊಂದನ್ನು ಶೇರ್​ ಮಾಡಿದ್ದಾರೆ. ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿರುವ ಈಕೆ ತಾವು ಮಗುವಿಗೆ ಜನ್ಮ ನೀಡಿದ 6 ವಾರಗಳ ಬಳಿಕ ವಿಚಿತ್ರ ವಿಚಾರವೊಂದನ್ನು ಪತ್ತೆ ಮಾಡಿದ್ದಾರೆ. ಅದೇನೆಂದರೆ ಅವರ ಎದೆ ಹಾಲು ಬಿಳಿ ಬಣ್ಣದಲ್ಲಿ ಇರೋದ್ರ ಬದಲು ಗುಲಾಬಿ ಬಣ್ಣದಲ್ಲಿದೆ..!

ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಜಾನ್ಸನ್​ ಎದೆಹಾಲಿನ ಬಣ್ಣ ಬದಲಾಗಲು ಕಾರಣ ಏನಿರಬಹುದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಈ ಬಣ್ಣದ ಹಾಲನ್ನು ಮಗು ಕುಡಿದರೆ ಸಮಸ್ಯೆ ಇಲ್ಲವಾ ಎಂದೂ ಕೇಳಿದ್ದಾರೆ.

ಜೋರ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಶೇರ್​ ಆಗ್ತಿದೆ. ಜಾನ್ಸನ್​ ಎದೆಹಾಲು ನೋಡೋಕೆ ಥೇಟ್​ ಸ್ಟ್ರಾಬೆರಿ ಮಿಲ್ಕ್​ಶೇಕ್​ನಂತೆ ಕಾಣುತ್ತಿದೆ. ಜಾನ್ಸನ್​ರ ಈ ಸಮಸ್ಯೆಗೆ ಅನೇಕರು ಕಮೆಂಟ್​ ಮೂಲಕ ಸಲಹೆ ನೀಡಿದ್ದಾರೆ. ಕೆಲವರು ಹೇಳುವಂತೆ ಎದೆಹಾಲಿನೊಂದಿಗೆ ರಕ್ತವೂ ಬರಲು ಆರಂಭಿಸಿದಾಗ ಈ ರೀತಿ ಹಾಲಿನ ಬಣ್ಣ ಬದಲಾಗುತ್ತದೆಯಂತೆ.

ಇದೇ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಕಮೆಂಟ್​ ಮಾಡಿದ್ದು, ಗುಲಾಬಿ ಬಣ್ಣದ ಎದೆಹಾಲು ಮಗುವಿಗೆ ಸುರಕ್ಷಿತ ಎಂದಿದ್ದಾರೆ. ಇದರಿಂದ ಮಗುವಿಗೆ ಯಾವುದೇ ಹಾನಿ ಇಲ್ಲ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...