ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್ ಎವರೆಸ್ಟ್ 8848.86 ಮೀಟರ್ ಇದೆ ಎಂದು ಚೀನಾ ಮತ್ತು ನೇಪಾಳ ಜಂಟಿ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.
2015 ರಲ್ಲಿ ನೇಪಾಳದಲ್ಲಿ ಭೂಕಂಪ ಉಂಟಾದ ನಂತರ ಮೌಂಟ್ ಎವರೆಸ್ಟ್ ಎತ್ತರದ ಕುರಿತಾಗಿ ಚರ್ಚೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಚೀನಾ ಸಹಯೋಗದಲ್ಲಿ ಮೌಂಟ್ ಎವರೆಸ್ಟ್ ಎತ್ತರವನ್ನು ಅಳೆಯಲಾಗಿದ್ದು, 8848.86 ಮೀಟರ್ ಎತ್ತರವಿದೆ ಎಂದು ಹೇಳಲಾಗಿದೆ.
ಈ ಹಿಂದೆ ಭಾರತ ಹೇಳಿದ ಅಳತೆಗಿಂತ 86 ಸೆಂಟಿಮೀಟರ್ ಮೌಂಟ್ ಎವರೆಸ್ಟ್ ಎತ್ತರವಾಗಿದೆ. ಹಿಂದಿನ ಚೀನಾ ಅಳತೆಯ ಪ್ರಕಾರ 8844.43 ಎತ್ತರವಿತ್ತು.