alex Certify ಇಂದಿನಿಂದ ಹೊಸ GST ದರ: ಯಾವುದು ಅಗ್ಗ ? ಯಾವುದು ದುಬಾರಿ ? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನಿಂದ ಹೊಸ GST ದರ: ಯಾವುದು ಅಗ್ಗ ? ಯಾವುದು ದುಬಾರಿ ? ಇಲ್ಲಿದೆ ಮಾಹಿತಿ

ಹಲವು ವಸ್ತುಗಳ ಮೇಲೆ ವಿಧಿಸಲಾಗಿದ್ದ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್‌.ಟಿ) ಸೋಮವಾರದಿಂದ ಪರಿಷ್ಕರಣೆಯಾಗಿದೆ. ಜೂನ್‌ನಲ್ಲಿ ಜಿ.ಎಸ್‌.ಟಿ. ಕೌನ್ಸಿಲ್ ಅನೇಕ ಉಪ ಸಮಿತಿಗಳು ನೀಡಿದ ಶಿಫಾರಸ್ಸನ್ನು ಒಪ್ಪಿಕೊಂಡಿದ್ದು, ಇದರ ಪರಿಣಾಮವಾಗಿ ತೆರಿಗೆ ದರ ಬದಲಾವಣೆಗಳಾಗುತ್ತಿವೆ.

ಈ ಮಧ್ಯೆ, ದೇಶವು ಹಣದುಬ್ಬರದಿಂದ ಬಳಲುತ್ತಿರುವ ಕಾರಣ ಈ ಪರಿಷ್ಕರಣೆ ಸಮಯವು ತಪ್ಪಾಗಿದೆ ಎಂದು ವಾದಿಸಿರುವ ಕಾಂಗ್ರೆಸ್, ತೆರಿಗೆ ದರಗಳನ್ನು ಬದಲಾಯಿಸಿದ್ದಕ್ಕಾಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಹೊಸ ಜಿ.ಎಸ್.ಟಿ. ದರಗಳು: ಯಾವುದು ಹೆಚ್ಚು ದುಬಾರಿ ?

ಮೊಸರು ಮತ್ತು ಹಿಟ್ಟು ಸೇರಿದಂತೆ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳಿಗೆ ಶೇಕಡಾ 5ರ ಜಿ.ಎಸ್‌.ಟಿ.ಯನ್ನು ನೀಡಬೇಕಾಗುತ್ತದೆ. ಈ ಹಿಂದೆ, ಮೊದಲೇ ಪ್ಯಾಕ್ ಮಾಡಿದ ಮತ್ತು ಮೊದಲೇ ಲೇಬಲ್ ಮಾಡಿದ ವಸ್ತುಗಳಿಗೆ ಜಿಎಸ್‌ಟಿ ಪಾವತಿಯಿಂದ ವಿನಾಯಿತಿ ನೀಡಲಾಗಿತ್ತು.

ದಿನಕ್ಕೆ 1,000 ರೂ.ಗಿಂತ ಕಡಿಮೆ ಇರುವ ಹೋಟೆಲ್ ಕೊಠಡಿಗಳ ಮೇಲಿನ ರಿಯಾಯಿತಿಯನ್ನು ಹಿಂಪಡೆಯಲಾಗಿದೆ. ಇಲ್ಲಿ 12 ಪ್ರತಿಶತದಷ್ಟು ತೆರಿಗೆ ವಿಧಿಸಲಾಗಿದೆ.

BIG NEWS: ದ್ರೌಪದಿ ಮುರ್ಮು ಅವರಿಗೆ ಕಾಂಗ್ರೆಸ್ ನಿಂದ ಅವಮಾನ; ಸಿದ್ದರಾಮಯ್ಯ ಮುಖವಾಡ ಈಗ ಕಳಚಿದೆ; ಸಿ. ಟಿ. ರವಿ ವಾಗ್ದಾಳಿ

ಮುದ್ರಣ, ಬರವಣಿಗೆ ಮತ್ತು ಶಾಯಿಯಂತಹ ಉತ್ಪನ್ನಗಳ ಮೇಲೆ ತೆರಿಗೆ ದರವು 12 ಪ್ರತಿಶತದಿಂದ 18 ಪ್ರತಿಶತಕ್ಕೆ ಏರಿಸಲಾಗಿದೆ. ಚಾಕುಗಳು, ಸ್ಪೂನ್‌ಗಳು, ಪೆನ್ಸಿಲ್ ಶಾರ್ಪನರ್‌ಗಳು ಮತ್ತು ಎಲ್‌ಇಡಿ ಲ್ಯಾಂಪ್‌ಗಳಿಗೂ ಇದು ಅನ್ವಯ.

5,000 ಕ್ಕಿಂತ ಹೆಚ್ಚು ಬಾಡಿಗೆ ಇರುವ ಆಸ್ಪತ್ರೆಯ ಕೊಠಡಿಗಳಿಗೆ 5 ಪ್ರತಿಶತದಷ್ಟು ಜಿ.ಎಸ್‌.ಟಿ. ನಿಗದಿಪಡಿಸಿದ್ದು, ಐಸಿಯು ಪ್ರವೇಶಕ್ಕೆ ವಿನಾಯಿತಿ ನೀಡಲಾಗಿದೆ.

ಟೆಟ್ರಾ ಪ್ಯಾಕ್‌ಗಳ ಮೇಲೆ 18 ಪ್ರತಿಶತ ಜಿ.ಎಸ್‌.ಟಿ. ವಿಧಿಸಲಾಗುತ್ತದೆ. ಚೆಕ್ ಬುಕ್‌ಗಳ ಮೇಲೆ ಬ್ಯಾಂಕ್‌ಗಳು ವಿಧಿಸುವ ಶುಲ್ಕದ ಮೇಲೆ ಜಿ.ಎಸ್‌.ಟಿ. ವಿಧಿಸಲಾಗುವುದು. ತೆರಿಗೆಯನ್ನು 5 ರಿಂದ 12 ರಷ್ಟು ಹೆಚ್ಚಿಸಿರುವುದರಿಂದ ಸೋಲಾರ್ ಹೀಟರ್‌ಗಳು ಸಹ ದುಬಾರಿಯಾಗುತ್ತವೆ.

ಅಗ್ಗವಾಗುವ ವಸ್ತುಗಳು:

ಒಸ್ಟೊಮಿ ಮತ್ತು ಆರ್ಥೊಪೆಡಿಕ್ ಉಪಕರಣಗಳು ಸೋಮವಾರದಿಂದ ಅಗ್ಗವಾಗುತ್ತವೆ. ರೋಪ್‌ವೇ ಪ್ರಯಾಣದ ಮೇಲೆ ವಿಧಿಸುವ ತೆರಿಗೆಯನ್ನು 12 ರಿಂದ 5 ಪ್ರತಿಶತಕ್ಕೆ ಇಳಿಸಲಾಗುತ್ತದೆ.

ಟ್ರಕ್ ಬಾಡಿಗೆ ಕಡಿಮೆ ವೆಚ್ಚವಾಗುತ್ತದೆ. ಎಲೆಕ್ಟ್ರಿಕ್ ವಾಹನಗಳು ಕೇವಲ 5 ಪ್ರತಿಶತ ಜಿ.ಎಸ್‌.ಟಿ.ಯನ್ನು ಆಕರ್ಷಿಸುತ್ತವೆ. ಈಶಾನ್ಯದಿಂದ ಎಕನಾಮಿ ಕ್ಲಾಸ್ ವಿಮಾನದ ಪ್ರಯಾಣಕ್ಕೆ ಜಿ.ಎಸ್‌.ಟಿ. ಪಾವತಿಸಬೇಕಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...