alex Certify ‘ಹಂದಿಗಳ ಜೊತೆ ಸೆಣಸಬಾರದು’: ನವಾಬ್​ ಮಲ್ಲಿಕ್​​ಗೆ ಪರೋಕ್ಷ ಟಾಂಗ್​ ಕೊಟ್ಟ ದೇವೇಂದ್ರ ಫಡ್ನವಿಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹಂದಿಗಳ ಜೊತೆ ಸೆಣಸಬಾರದು’: ನವಾಬ್​ ಮಲ್ಲಿಕ್​​ಗೆ ಪರೋಕ್ಷ ಟಾಂಗ್​ ಕೊಟ್ಟ ದೇವೇಂದ್ರ ಫಡ್ನವಿಸ್​

ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​​ ರಿಯಾಜ್​ ಭಾಟಿ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್​ ಹೊಸ ಬಾಂಬ್​ ಸಿಡಿಸಿದ ಬೆನ್ನಲ್ಲೇ ಫಡ್ನವಿಸ್​ ಟ್ವಿಟರ್​​ನಲ್ಲಿ ಮಾರ್ಮಿಕ ಪೋಸ್ಟ್​ ಒಂದನ್ನು ಶೇರ್​ ಮಾಡಿದ್ದಾರೆ.

65ನೇ ವಯಸ್ಸಿನಲ್ಲೂ ಮಕ್ಕಳನ್ನು ಹೆರುತ್ತಾರೆ ಈ ಮಹಿಳೆಯರು….!

ಪ್ರಸಿದ್ಧ ನಾಟಕಕಾರ ಜಾರ್ಜ್​ ಬೆರ್ನಾಡ್​ ಶಾರ ಸಾಲುಗಳನ್ನು ಟ್ವೀಟ್​ ಮಾಡುವ ಮೂಲಕ ದೇವೇಂದ್ರ ಫಡ್ನವಿಸ್​ ನವಾಬ್​ ಮಲ್ಲಿಕ್​​​ಗೆ ಪರೋಕ್ಷ ಟಾಂಗ್​ ನೀಡಿದ್ದಾರೆ. ಬಹಳ ಸಮಯದ ಹಿಂದೆ ನಾನೊಂದು ಪಾಠ ಕಲಿತಿದ್ದೆ. ಹಂದಿಗಳ ಜೊತೆ ಎಂದಿಗೂ ಸೆಣಸಲು ಹೋಗಬಾರದು. ಇದರಿಂದ ನೀವು ಕೊಳಕಾಗುತ್ತೀರಾ. ಇದನ್ನು ಹಂದಿ ಎಂಜಾಯ್​ ಮಾಡುತ್ತೆ ಎಂದು ಬರೆದಿದ್ದಾರೆ.

ಹುಚ್ಚು ನಾಯಿ ಕಡಿತಕ್ಕೆ ಇಲ್ಲಿದೆ ಪ್ರಥಮ ಚಿಕಿತ್ಸೆ

ಫಡ್ನವಿಸ್​ ವಿರುದ್ಧ ಹೈಡ್ರೋಜನ್​ ಬಾಂಬ್​ ಸಿಡಿಸುತ್ತೇನೆ ಎಂದಿದ್ದ ನವಾಬ್​ ಮಲ್ಲಿಕ್​​​ ಇಂದು ಬೆಳಗ್ಗೆ ದೇವೇಂದ್ರ ಫಡ್ನವಿಸ್​​ ದಾವೂದ್​ ಇಬ್ರಾಹಿಂ ಆಪ್ತ ರಿಯಾಜ್​ ಭಾಟಿ ಜೊತೆ ಸಂಪರ್ಕ ಹೊಂದಿದ್ದರು ಎಂದು ಹೇಳಿಕೆ ನೀಡಿದ್ದರು. ನಕಲಿ ಪಾಸ್​ಪೋರ್ಟ್​ ಹೊಂದುವ ಮೂಲಕ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ ರಿಯಾಜ್​​ ಫಡ್ನವಿಸ್​ ಹಾಗೂ ಪ್ರಧಾನಿ ಮೋದಿ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು ಎಂದು ಹೇಳಿದ್ದರು.

ಇದರಲ್ಲಿ ನಾನು ಪ್ರಧಾನಿ ಮೋದಿಯನ್ನು ಎಳೆದು ತರುತ್ತಿಲ್ಲ. ಆದರೆ ಈ ರಿಯಾಜ್​ ಭಾಟಿ ಪ್ರಧಾನಿಯಿದ್ದ ಕಾರ್ಯಕ್ರಮಕ್ಕೆ ಹೇಗೆ ಪ್ರವೇಶ ಪಡೆಯಲು ಸಾಧ್ಯ..? ಅಲ್ಲದೇ ಅವರೊಂದಿಗೆ ಫೊಟೋ ಕೂಡ ಕ್ಲಿಕ್ಕಿಸಿಕೊಂಡಿದ್ದಾನೆ. ಬೇರೆ ದೇಶಗಳಲ್ಲಿ ಇರುವ ಭೂಗತಪಾತಕಿಗಳು ದೇವೇಂದ್ರ ಫಡ್ನವಿಸ್​ ನೇಮಿಸಿದ್ದ ಪೊಲೀಸ್​ ಅಧಿಕಾರಿಗಳು ಕರೆ ಮಾಡಿ ತಮ್ಮ ದಾರಿಯನ್ನು ಸುಗಮಗೊಳಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದರು.

— Devendra Fadnavis (@Dev_Fadnavis) November 10, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...