ಪ್ರಸಿದ್ಧ ಒಟಿಟಿ ವೇದಿಕೆ ನೆಟ್ಫ್ಲಿಕ್ಸ್ ತನ್ನ ಬಳಕೆದಾರರಿಗೆ ವಿಡಿಯೋ ಗೇಮ್ ಸೌಲಭ್ಯವನ್ನೂ ನೀಡಲಿದೆ. ಇದಕ್ಕಾಗಿ ನೆಟ್ಫ್ಲಿಕ್ಸ್ ಕಂಪನಿಯು ಫೇಸ್ಬುಕ್ & ಎಲೆಕ್ಟ್ರಾನಿಕ್ಸ್ ಮಾಜಿ ಆರ್ಟ್ಸ್ ಎಕ್ಸಿಕ್ಯೂಟಿವ್ ಮೈಕ್ ವೆರ್ಡುರನ್ನ ವಿಡಿಯೋ ಗೇಮ್ ಅಭಿವೃದ್ಧಿಯ ನೂತನ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ.
ವೆರ್ಡು ಈ ಹಿಂದೆ ಫೇಸ್ಬುಕ್ ರಿಯಾಲಿಟಿ ಲ್ಯಾಬ್ಸ್ನ ಉಪಾಧ್ಯಕ್ಷರಾಗಿದ್ದರು. ವೆರ್ಡು ನೆಟ್ಫ್ಲಿಕ್ಸ್ ಮುಖ್ಯ ಕಾರ್ಯಾಚರಣಾ ಅಧಿಕಾರಿ ಗ್ರೆಗ್ ಪೀಟರ್ಸ್ಗೆ ವರದಿ ಮಾಡಿಕೊಳ್ಳುತ್ತಿದ್ದಾರೆ.
ಮಧ್ಯಪ್ರದೇಶ: ಬಾವಿಗೆ ಬಿದ್ದು ಮೃತಪಟ್ಟವರ ಸಂಖ್ಯೆ 11 ಕ್ಕೆ ಏರಿಕೆ, ಪರಿಹಾರ ಘೋಷಿಸಿದ ಮೋದಿ
ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಒಟಿಟಿ ವೇದಿಕೆಯಲ್ಲಿ ಮುಂಚೂಣಿ ಸ್ಥಾನದಲ್ಲಿರುವ ನೆಟ್ಫ್ಲಿಕ್ಸ್ 2019ರಲ್ಲಿಯೇ ಗೇಮಿಂಗ್ ಮಾರುಕಟ್ಟೆಗೆ ಕಾಲಿಡುವ ಬಗ್ಗೆ ಮುನ್ಸೂಚನೆ ನೀಡಿತ್ತು. ಪ್ರಾರಂಭದ ದಿನಗಳಲ್ಲಿ ನೆಟ್ಫ್ಲಿಕ್ಸ್ ಹೆಚ್ಚುವರಿ ಶುಲ್ಕವಿಲ್ಲದೇ ಗೇಮಿಂಗ್ ಸೇವೆ ನೀಡುತ್ತಿದೆ.
ಇದು ಮಾತ್ರವಲ್ಲದೇ ಮಕ್ಕಳ ಗೇಮಿಂಗ್ ಬಳಕೆ ಬಗ್ಗೆ ಪೋಷಕರು ಕಣ್ಣಿಡಲು ಕಿಡ್ಸ್ ರಿಕ್ಯಾಪ್ ಮೇಲ್ ಎಂಬ ಸೌಲಭ್ಯವನ್ನ ನೀಡಿದೆ. ಈ ಸೌಲಭ್ಯದ ಮೂಲಕ ಪೋಷಕರು ಮಕ್ಕಳ ಮೇಲೆ ನಿಗಾ ಇಡಬಹುದಾಗಿದೆ. ನೆಟ್ಫ್ಲಿಕ್ಸ್ ಪ್ರೊಫೈಲ್ನಲ್ಲಿ ಮಕ್ಕಳ ಖಾತೆ ಜೋಡಿಸಿಕೊಂಡ ಬಳಿಕ ಪೋಷಕರು ಮಕ್ಕಳ ಚಟುವಟಿಕೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.