alex Certify ಮತ್ತೆ ಸುದ್ದಿಗೆ ಬಂದ ಕುಖ್ಯಾತ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಸುದ್ದಿಗೆ ಬಂದ ಕುಖ್ಯಾತ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್‌

ಸರಣಿ ಕೊಲೆಗಾರ ಚಾರ್ಲ್ಸ್ ಶೋಭರಾಜ್ ಪ್ರಕರಣದಲ್ಲಿ ಶೋಕಾಸ್ ನೋಟೀಸ್ ಒಂದನ್ನು ಹೊರಡಿಸಿರುವ ನೇಪಾಳ ಸುಪ್ರೀಂ ಕೋರ್ಟ್, 18 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿರುವ ಈತನನ್ನು ಬಿಡುಗಡೆ ಮಾಡಬಾರದೇಕೆ ಎಂದು ಅಲ್ಲಿನ ಸರ್ಕಾರವನ್ನು ಪ್ರಶ್ನಿಸಿದೆ.

ಕೊಲೆ ಪ್ರಕರಣವೊಂದರಲ್ಲಿ ಜೀವಿತಾವಧಿಯ ಜೈಲು ಶಿಕ್ಷೆಗೆ ಗುರಿಯಾಗಿರುವ ಚಾರ್ಲ್ಸ್ ಶೋಭರಾಜ್ ಪರ ವಕೀಲರು ಆತನನ್ನು ಬಿಡುಗಡೆ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದು, ಆತನ ವಯಸ್ಸನ್ನು ಪರಿಗಣಿಸಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಶೋಭರಾಜ್‌ನನ್ನು ಏಕೆ ಬಿಡುಗಡೆ ಮಾಡಬಾರದು ಎಂಬ ಬಗ್ಗೆ ಮೂರು ದಿನಗಳ ಒಳಗೆ ಲಿಖಿತ ಪ್ರತಿಕ್ರಿಯೆ ನೀಡಲು ಪರಮೋಚ್ಛ ನ್ಯಾಯಾಲಯ ಅಲ್ಲಿನ ಸರ್ಕಾರವನ್ನು ಪ್ರಶ್ನಿಸಿದೆ.

BIG BREAKING: ಒಂದೇ ದಿನದಲ್ಲಿ 6,650 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ; ದೇಶದಲ್ಲಿದೆ 77,516 ಸಕ್ರಿಯ ಪ್ರಕರಣ

ಭಾರತ ಮತ್ತು ವಿಯೆಟ್ನಾಮೀಸ್ ಪೋಷಕರ ಪುತ್ರನಾದ ಫ್ರೆಂಚ್‌ಮನ್‌ ಶೋಭರಾಜ್, ನಕಲಿ ಪಾಸ್‌ಪೋರ್ಟ್ ಒಂದನ್ನು ಬಳಸಿಕೊಂಡು, 1975ರಲ್ಲಿ ನೇಪಾಳಕ್ಕೆ ಆಗಮಿಸಿ ಇಬ್ಬರು ಪ್ರವಾಸಿಗರನ್ನು ಕೊಂದಿದ್ದ. ಆ ವೇಳೆ ಶೋಭರಾಜ್, ಅಮೆರಿಕ ಪೌರ ಕೊನ್ನಿ ಯೋ ಬೊರೋಜ಼ಿ ಮತ್ತು ತನ್ನ ಗರ್ಲ್‌ಫ್ರೆಂಡ್ ಆಗಿದ್ದ ಕೆನಡಾದ ಲೌರೆಂಟ್ ಕರ‍್ರಿಯೆರ್‌ ಎಂಬ ಇಬ್ಬರನ್ನು ಕೊಂದಿದ್ದ.

ನೇಪಾಳದ ಕೆಸಿನೋ ಒಂದರ ಹೊರಗಡೆ ಸೆಪ್ಟೆಂಬ್‌ 1, 2003ರಲ್ಲಿ ಕಡೆಯ ಬಾರಿ ಕಾಣಿಸಿಕೊಂಡಿದ್ದ ಶೋಭರಾಜ್ ಬಂಧನವಾದ ಬಳಿಕ, 1975ರಲ್ಲಿ ಕಾಠ್ಮಂಡು ಮತ್ತು ಭಕ್ತಪುರದಲ್ಲಿ ಜೋಡಿಯನ್ನು ಕೊಂದಿದ್ದ ಆರೋಪದ ಮೇಲೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದರು.

ಸದ್ಯ ಕಾಠ್ಮಂಡು ಕೇಂದ್ರ ಕಾರಾಗೃಹದಲ್ಲಿ 21 ವರ್ಷಗಳ ಜೈಲುಶಿಕ್ಷೆ ಪೂರೈಸುತ್ತಿರುವ ಶೋಭರಾಜ್, ಕೆನಡಾ ಪ್ರಜೆಯನ್ನು ಕೊಂದ ಆರೋಪದ ಸಂಬಂಧ ತನಿಖೆ ಎದುರಿಸಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...