alex Certify ಮಂಡೇಲಾ ಉಡುಪುಗಳನ್ನು ಹರಾಜಿಗಿಟ್ಟ ಕುಟುಂಬ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಡೇಲಾ ಉಡುಪುಗಳನ್ನು ಹರಾಜಿಗಿಟ್ಟ ಕುಟುಂಬ…!

ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ, ನೊಬೆಲ್‌ ಶಾಂತಿ ಪುರಸ್ಕೃತ ದಿವಂಗತ ನೆಲ್ಸನ್ ಮಂಡೇಲಾ ಅವರು ತೊಡುತ್ತಿದ್ದ ಮಡಿಬಾ ಶರ್ಟ್‌ಗಳನ್ನು ಅವರ ಕುಟುಂಬಸ್ಥರು ಹರಾಜಿಗೆ ಇರಿಸಿದ್ದಾರೆ.‌

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರು ನೀಡಿದ ಉಡುಗೊರೆಗಳು, 1998 ಹಾಗೂ 2003ರಲ್ಲಿ ಮಂಡೇಲಾ ಅವರು ರಾಣಿ ಎಲಿಜಬೆತ್‌ ಭೇಟಿ ವೇಳೆ ಧರಿಸಿದ್ದ ವರ್ಣರಂಜಿತ ಶರ್ಟ್‌ಗಳು, ಅವರ ಖಾಸಗಿ ಬ್ರೀಫ್‌ಕೇಸ್‌ಗಳು ಸೇರಿದಂತೆ ಒಟ್ಟು 100 ವಸ್ತುಗಳನ್ನು ಹರಾಜಿಗೆ ಇಡಲಾಗಿದೆ.

ಇದರಲ್ಲಿ ಸಂಗ್ರಹವಾಗುವ ಮೊತ್ತವನ್ನು ಮಂಡೇಲಾ ಸ್ಮರಣಾರ್ಥ ನಿರ್ಮಾಣವಾಗುತ್ತಿರುವ ಭವ್ಯ ಉದ್ಯಾನವನಕ್ಕೆ ಕುಟುಂಬಸ್ಥರು ನೀಡಲಿದ್ದಾರೆ.

‘ದೀಪಾವಳಿ’ಯಲ್ಲಿ ಆಕಾಶ ದೀಪ ಹಚ್ಚುವ ಸಂಪ್ರದಾಯ ಏಕಿದೆ….?

2013ರಲ್ಲಿ ಮಂಡೇಲಾ ಅವರು ನಿಧನರಾದ ಬಳಿಕ, ಅವರ ಶವವನ್ನು ಹೂಳಲಾದ ದಕ್ಷಿಣ ಆಫ್ರಿಕಾದ ಕ್ಯುನುನಲ್ಲಿ ’ಫ್ರೀಡಂ ಗಾರ್ಡನ್‌ ’ ಅಭಿವೃದ್ಧಿ ಯೋಜನೆ ಹಮ್ಮಿಕೊಳ್ಳಲಾಗಿದೆ.

ಡಿ.11 ರಂದು ಆನ್‌ಲೈನ್‌ ಹಾಗೂ ನೇರಪ್ರಸಾರದ ಮುಖಾಂತರ ಹರಾಜು ಪ್ರಕ್ರಿಯೆ ನಡೆಯಲಿದೆ. ನ್ಯೂಯಾರ್ಕ್‌ ಮೂಲದ ಗ್ಯುರ್ನ್‌ಸೇ ಎಂಬ ಕಂಪನಿಯು ಇದರ ನಿರ್ವಹಣೆ ಹೊತ್ತಿದೆ.

ಶಿಲ್ಪಾ ಶೆಟ್ಟಿ – ರಾಜ್ ಕುಂದ್ರಾಗೆ ಮತ್ತೊಂದು ಶಾಕ್: ದಂಪತಿಗಳ ವಿರುದ್ಧ ತಿರುಗಿಬಿದ್ದ ಶೆರ್ಲಿನ್ ಚೋಪ್ರಾ

ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಡೇಲಾ ಅವರ ಪುತ್ರಿ ಡಾ. ಮಕಾಜಿವೆ ಮಂಡೇಲಾ ಅವರು, ’ತಂದೆಯವರಿಗೆ ತಾವು ಜನಿಸಿದ ಈಸ್ಟರ್ನ್‌ ಕೇಪ್‌ ಅನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಿ ಸ್ಥಳೀಯರ ಜೀವನಕ್ಕೆ ದಾರಿ ಮಾಡಿಕೊಡುವ ಆಸೆಯಿತ್ತು. ಈ ನಿಟ್ಟಿನಲ್ಲಿ ಉದ್ಯಾನವನ್ನು ‘ಸ್ಫೂರ್ತಿ ಧಾಮ’ ದ ರೂಪದಲ್ಲಿ ಅಭಿವೃದ್ಧಿಪಡಿಸಲಾಗುವುದು. ದೇಶ-ವಿದೇಶಗಳಿಂದ ಜನರು ಬಂದು ಈ ಉದ್ಯಾನದಲ್ಲಿ ಓಡಾಡಿದ ಬಳಿಕ ಅವರಿಗೆ ಜವಾಬ್ದಾರಿಯ ಅರಿವಾಗಬೇಕು. ಜನಾಂಗೀಯ ತಾರತಮ್ಯ, ದೌರ್ಜನ್ಯಗಳ ವಿರುದ್ಧ ಹೋರಾಡುವ ಕಿಚ್ಚು ಮೂಡಬೇಕು. ಆ ನಿಟ್ಟಿನಲ್ಲಿ ತಂದೆಯವರು ನಡೆದ ಬಂದ ಜೀವನ ಹಾದಿಯ ದರ್ಶನವನ್ನು ಉದ್ಯಾನದಲ್ಲಿ ನಿರ್ಮಿಸಲಾಗುವುದು’ ಎಂದಿದ್ದಾರೆ.

27 ವರ್ಷಗಳ ಕಾಲ ಜೈಲು ವಾಸದ ಬಳಿಕ 1990 ರಲ್ಲಿ ಬಿಡುಗಡೆ ಹೊಂದಿದ್ದ ಮಂಡೇಲಾ ಅವರಿಗೆ ಇಂಡೋನೇಷ್ಯಾದ ಮಾಜಿ ಅಧ್ಯಕ್ಷ ಸುಹಾರ್ತೊ ಅವರು ಮಡಿಬಾ ಶರ್ಟ್ಸ್ ಮಾದರಿಯದ್ದೇ ಬಟಿಕ್‌ ಶರ್ಟ್‌ ನೀಡಿ ಗೌರವಿಸಿದ್ದರು. ಇದನ್ನೂ ಹರಾಜಿಗೆ ಇರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...