alex Certify ಕುಖ್ಯಾತ ದರೋಡೆಕೋರನ ಮೇಲೆ ಫೈರಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಖ್ಯಾತ ದರೋಡೆಕೋರನ ಮೇಲೆ ಫೈರಿಂಗ್

ಬೆಂಗಳೂರು: ನೆಲಮಂಗಲದ ದಾನೋಜಿ ಪಾಳ್ಯ ರಸ್ತೆಯಲ್ಲಿ ಕುಖ್ಯಾತ ದರೋಡೆಕೋರನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.

ಯೋಗಾನಂದ ಅಲಿಯಾಸ್ ನೈಟ್ ಶಿಫ್ಟ್ ಯೋಗಿ ಮೇಲೆ ಫೈರಿಂಗ್ ಮಾಡಲಾಗಿದೆ. ಸ್ಥಳ ಮಹಜರಿಗೆ ಕರೆದೊಯ್ಯುತ್ತಿದ್ದಾಗ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಯೋಗಿ ಮುಂದಾಗಿದ್ದಾನೆ. ಈ ವೇಳೆ ನೆಲಮಂಗಲ ಇನ್ಸ್ ಪೆಕ್ಟರ್ ಶಶಿಧರ್ ಫೈರಿಂಗ್ ಮಾಡಿದ್ದಾರೆ.

ದರೋಡೆ ಸೇರಿದಂತೆ 18 ಪ್ರಕರಣಗಳಲ್ಲಿ ಯೋಗಿ ಆರೋಪಿಯಾಗಿದ್ದು, ಆತನನ್ನು ಬಂಧಿಸಿ ಮಹಜರಿಗೆ ಕರೆದುಕೊಂಡು ಹೋಗಲಾಗಿತ್ತು. ಗುಂಡೇಟಿನಿಂದ ಬಲಗಾಲಿಗೆ ಗಾಯವಾಗಿದ್ದು, ಗಾಯಾಳು ಯೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...