alex Certify ʼಚಿನ್ನದ ಹುಡುಗʼ ನೀರಜ್​ ಚೋಪ್ರಾ ಸಂದರ್ಶನದ ವೇಳೆ ಎದುರಾಯ್ತು ಮುಜುಗರದ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಚಿನ್ನದ ಹುಡುಗʼ ನೀರಜ್​ ಚೋಪ್ರಾ ಸಂದರ್ಶನದ ವೇಳೆ ಎದುರಾಯ್ತು ಮುಜುಗರದ ಪ್ರಶ್ನೆ

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಸ್ವರ್ಣ ಸಾಧನೆಗೈದ ನೀರಜ್​ ಚೋಪ್ರಾ ಸದ್ಯ ಸಾಲು ಸಾಲು ಸಂದರ್ಶನಗಳಲ್ಲಿ ಬ್ಯುಸಿ ಆಗಿದ್ದಾರೆ. ಸಂದರ್ಶನಗಳಲ್ಲಿ ನೀರಜ್​ ಚೋಪ್ರಾ ತಮ್ಮ ಸಾಧನೆಯ ಹಾದಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ ಸಮಾರಂಭವೊಂದರಲ್ಲಿ ಸಂದರ್ಶಕ ರಾಜೀವ್​ ಸೇಠಿ, ನೀರಜ್​ ಚೋಪ್ರಾಗೆ ತೀರಾ ವೈಯಕ್ತಿಕ ಪ್ರಶ್ನೆಯನ್ನು ಕೇಳಿದ್ದಾರೆ.

ಸಂದರ್ಶನದಲ್ಲಿ ಊಹಿಸಲೂ ಅಸಾಧ್ಯವಾದ ಪ್ರಶ್ನೆಯನ್ನು ರಾಜೀವ್​ ಸೇಠಿ ಕೇಳಿದ್ದಾರೆ. ಹೌದು…! ನೀರಜ್​ ಚೋಪ್ರಾರ ಬಳಿ ಸೆಕ್ಸ್​ ಜೀವನದ ಬಗ್ಗೆ ಹೇಳುವಂತೆ ರಾಜೀವ್​ ಸೇಠಿ ಅಸಂಬದ್ಧ ಪ್ರಶ್ನೆಯನ್ನೇ ಕೇಳಿಬಿಟ್ಟಿದ್ದಾರೆ..!

ನೀವು ಎಷ್ಟು ಸುಂದರವಾಗಿದ್ದೀರಾ ಎಂದು ಸೇಠಿ ಪ್ರಶ್ನೆಯನ್ನು ಆರಂಭಿಸಿದ್ದರು. ಇದಾದ ಬಳಿಕ ಕೋಟಿಗಟ್ಟಲೇ ಭಾರತೀಯರು ನಿಮ್ಮ ಬಳಿ ಒಂದು ಪ್ರಶ್ನೆಯನ್ನು ಕೇಳಬಯಸುತ್ತಿದ್ದಾರೆ. ಆದರೆ ಹಿಂಜರಿಕೆಯಿಂದ ಸುಮ್ಮನಿದ್ದಾರೆ ಎಂದು ಹೇಳಿದ ಸೇಠಿ ಬಳಿಕ ಹಿಂದಿಯಲ್ಲಿ ನೀವು ನಿಮ್ಮ ಕ್ರೀಡಾ ಜೀವನ ಹಾಗೂ ಸೆಕ್ಸ್​ ಜೀವನವನ್ನು ಹೇಗೆ ನಿಭಾಯಿಸುತ್ತೀರಿ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಮಾತಿನಲ್ಲೇ ಚಾಟಿ ನೀಡಿದ ನೀರಜ್​, ಕ್ಷಮಿಸಿ ಸರ್​, ನಾನು ಕ್ಷಮಿಸಿ ಎಂದು ಕೇಳಿದ್ದೇನೆ. ಇದರಿಂದ ನೀವು ನಿಮ್ಮ ಪ್ರಶ್ನೆಗೆ ಉತ್ತರ ಹುಡುಕಿಕೊಳ್ಳಬಹುದು ಎಂದು ಹೇಳಿದ್ದಾರೆ.

ಆದರೆ ಇಷ್ಟಕ್ಕೆ ಸುಮ್ಮನಾಗದ ಸೇಠಿ ಮತ್ತೆ ಅದೇ ಪ್ರಶ್ನೆಯನ್ನೇ ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ನೀರಜ್​ ಚೋಪ್ರಾ ನಿಮ್ಮ ಪ್ರಶ್ನೆಯಿಂದಲೇ ನನ್ನ ಮನಸ್ಸು ತುಂಬಿ ಬಂದಿದೆ ಎಂದು ಹೇಳಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಕ್ಲಿಪ್​ ವೈರಲ್​ ಆಗಿದ್ದು ಆಟಗಾರನಿಗೆ ಮಾಡಿದ ಅವಮಾನವಿದು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

— Rosy (@rose_k01) September 3, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...