alex Certify NCB ಅಧಿಕಾರಿ ಸಮೀರ್​ ವಾಂಖೆಡೆ ವಿರುದ್ಧ ಮತ್ತೊಂದು ಸ್ಪೋಟಕ ಆರೋಪ ಮಾಡಿದ ನವಾಬ್​ ಮಲ್ಲಿಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

NCB ಅಧಿಕಾರಿ ಸಮೀರ್​ ವಾಂಖೆಡೆ ವಿರುದ್ಧ ಮತ್ತೊಂದು ಸ್ಪೋಟಕ ಆರೋಪ ಮಾಡಿದ ನವಾಬ್​ ಮಲ್ಲಿಕ್

ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ವಿರುದ್ಧ ಲಂಚಾವತಾರದ ಪ್ರಕರಣವು ದಾಖಲಾದ ಬಳಿಕ ಡ್ರಗ್ಸ್ ಪ್ರಕರಣವು ದಿನಕ್ಕೊಂದು ಟ್ವಿಸ್ಟ್​ ಪಡೆದುಕೊಳ್ತಿದೆ. ಈ ಹೈ ಪ್ರೊಫೈಲ್​ ಪ್ರಕರಣದಲ್ಲಿ ಇದೀಗ ಸಾಕಷ್ಟು ಜನರ ಹೆಸರು ಬಯಲಿಗೆ ಬರುತ್ತಿದೆ.

ಸಮೀರ್​ ವಾಂಖೆಡೆ ವಿರುದ್ಧ ದಿನಕ್ಕೊಂದು ಆರೋಪ ಮಾಡುತ್ತಿರುವ ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್​ ಇಂದು ಮತ್ತಷ್ಟು ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಿನ್ನೆಯಷ್ಟೇ ಸಮೀರ್​ ವಾಂಖೆಡೆ ವಿರುದ್ಧ ಫೋನ್​ ಕದ್ದಾಲಿಕೆ ಆರೋಪ ಹೊರಿಸಿದ್ದ ನವಾಬ್​ ಮಲ್ಲಿಕ್​ ಇಂದು ಮತ್ತೊಮ್ಮೆ ಮಾಧ್ಯಮಗಳ ಮುಂದೆ ಬಂದಿದ್ದು ಡ್ರಗ್​ ಪೆಡ್ಲರ್​ ಜೊತೆ ಸಮೀರ್​ ವಾಂಖೆಡೆ ಸಂಬಂಧ ಹೊಂದಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಆ ದಿನ ನಡೆದ ಕ್ರೂಸ್​ ಪಾರ್ಟಿಯಲ್ಲಿ ವಾಂಖೆಡೆ ಸ್ನೇಹಿತ ಎನ್ನಲಾದ ಗಡ್ಡಧಾರಿ ವ್ಯಕ್ತಿ ಕೂಡ ಹಾಜರಿದ್ದನು. ಎನ್​ಸಿಬಿಯಲ್ಲಿರುವ ಪ್ರತಿಯೊಬ್ಬರಿಗೂ ಆ ಗಡ್ಡಧಾರಿ ವ್ಯಕ್ತಿ ಯಾರೆಂದು ತಿಳಿದಿದೆ. ಈ ಬಗ್ಗೆಯೂ ಎನ್​ಸಿಬಿ ತನಿಖೆ ನಡೆಸಲೇಬೇಕಾದ ಅಗತ್ಯವಿದೆ. ಈತ ಸಮೀರ್​ ವಾಂಖೆಡೆಯ ಸ್ನೇಹಿತ ಎಂದು ನನಗೆ ಗುಮಾನಿ ಇದೆ ಎಂದು ಹೇಳಿದ್ದಾರೆ .

ನಿನ್ನೆ ಕೂಡ ಸಮೀರ್​ ವಾಂಖೆಡೆ ವಿರುದ್ಧ ಹರಿಹಾಯ್ದಿದ್ದ ನವಾಬ್​ ಮಲ್ಲಿಕ್​ ಮುಂಬೈ ಹಾಗೂ ಥಾಣೆಯಲ್ಲಿ ಇಬ್ಬರು ವ್ಯಕ್ತಿಗಳ ಸಹಾಯದಿಂದ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ನನ್ನ ಹಾಗೂ ನನ್ನ ಕುಟುಂಬಸ್ಥರ ಫೋನ್​ ಕರೆಗಳನ್ನು ಕದ್ದಾಲಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದೀಗ ಮಲ್ಲಿಕ್​ ಡ್ರಗ್​ ಪೆಡ್ಲರ್​ಗಳ ಜೊತೆ ವಾಂಖೆಡೆ ಸಂಬಂಧದ ಬಗ್ಗೆ ಹೇಳಿಕೆ ನೀಡಿದ್ದಾರೆ.

ಈ ನಡುವೆ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಮುಂಬೈ ಪೊಲೀಸರು ಎಸಿಪಿ ಮಟ್ಟದ ವಿಶೇಷ ಅಧಿಕಾರಿಯನ್ನು ನೇಮಿಸಿದ್ದಾರೆ. ಈ ಅಧಿಕಾರಿಯು ಸಮೀರ್​ ವಾಂಖೆಡೆ ವಿರುದ್ಧ ದಾಖಲಾದ ನಾಲ್ಕು ಪ್ರಕರಣಗಳ ತನಿಖೆ ನಡೆಸಲಿದ್ದಾರೆ ಎಂದು ಮುಂಬೈ ಪೊಲೀಸ್​ ಇಲಾಖೆ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...