alex Certify ಆರ್ಯನ್‌ ಖಾನ್‌ ಡ್ರಗ್ಸ್​​ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್…! ಪ್ರಮುಖ ಸಾಕ್ಷಿ ಕೆ.ಪಿ. ಗೋಸಾವಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಯನ್‌ ಖಾನ್‌ ಡ್ರಗ್ಸ್​​ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್…! ಪ್ರಮುಖ ಸಾಕ್ಷಿ ಕೆ.ಪಿ. ಗೋಸಾವಿ ಅರೆಸ್ಟ್

ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​​ ಜೊತೆ ಸೆಲ್ಫಿ ತೆಗೆದುಕೊಂಡು ವೈರಲ್​ ಆಗಿದ್ದ ಡ್ರಗ್ಸ್​ ಪ್ರಕರಣದ ಸಾಕ್ಷಿದಾರ ಕೆ.ಸಿ. ಗೋಸಾವಿಯನ್ನು 2018 ರಲ್ಲಿ ಪುಣೆಯಲ್ಲಿ ದಾಖಲಾಗಿದ್ದ ವಂಚನೆ ಕೇಸ್ ​ನಲ್ಲಿ ಇದೀಗ ಬಂಧಿಸಲಾಗಿದೆ.

ತಮಗೆ ಜೀವ ಬೆದರಿಕೆಯಿದ್ದು ಹೀಗಾಗಿ ತಾನು ಪೊಲೀಸರಿಗೆ ಶರಣಾಗುತ್ತಿದ್ದೇನೆ ಎಂದು ಗೋಸಾವಿ ಹೇಳಿರುವ ಬೆನ್ನಲ್ಲೇ  ಗೋಸಾವಿ ಹಳೆಯ ಪ್ರಕರಣವೊಂದರ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ.

ಡ್ರಗ್ಸ್​​ ಪ್ರಕರಣದ ಪ್ರಮುಖ ಸಾಕ್ಷಿ ಎನಿಸಿರುವ ಗೋಸಾವಿ, ಆರ್ಯನ್​ ಖಾನ್​ ಜೊತೆ ಕ್ಲಿಕ್ಕಿಸಿಕೊಂಡ ಫೋಟೋ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ಇದೇ ಗೋಸಾವಿ ವ್ಯಕ್ತಿಯೊಬ್ಬರಿಗೆ ವಂಚಿಸಿದ ಆರೋಪದಲ್ಲಿ 2018ರಲ್ಲಿ ದಾಖಲಾದ ಪ್ರಕರಣವೊಂದರ ಸಂಬಂಧ ಜೈಲುಪಾಲಾಗಿದ್ದಾರೆ.

ಖಾಸಗಿ ತನಿಖೆದಾರನಾಗಿರುವ ಕೆ.ಪಿ. ಗೋಸಾವಿ ಮುಂಬೈ ಕ್ರೂಸ್​ ದಾಳಿ ವೇಳೆ ಹಾಜರಿದ್ದನು. ಇದಾದ ಬಳಿಕ ಆರ್ಯನ್​ ಖಾನ್​ ಜೊತೆಗಿನ ಸೆಲ್ಫಿ ಹಾಗೂ ವಿಡಿಯೋಗಳು ವೈರಲ್​​ ಆಗಿದ್ದವು. ಇದಾದ ಬಳಿಕ ಎನ್​ಸಿಬಿ ತನಿಖೆಯ ಮಾರ್ಗದ ಬಗ್ಗೆ ಶಿವಸೇನೆ ಮೈತ್ರಿಕೂಟಗಳು ಪ್ರಶ್ನೆ ಎತ್ತಿದ್ದವು.

ಗೋಸಾವಿ ಕೆಪಿಜಿ ಡ್ರೀಮ್ಸ್​ ಸೊಲ್ಯೂಷನ್​​ ಎಂಬ ಕಂಪನಿಯನ್ನು ನಡೆಸಿದ್ದರು ಎನ್ನಲಾಗಿದೆ. ಈ ಕಂಪನಿಯ ಮೂಲಕ ವಿದೇಶದಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಉದ್ಯೋಗದ ಭರವಸೆ ನೀಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕಂಪನಿಯ ಬಗ್ಗೆ ಪ್ರಚಾರವನ್ನು ಮಾಡಲಾಗಿತ್ತು.

ಮಲೇಷ್ಯಾದ ಹೋಟೆಲ್​ ಒಂದರಲ್ಲಿ ಕೆಲಸ ಕೊಡೋದಾಗಿ ನಂಬಿಸಿ ನನ್ನಿಂದ 3.09 ಲಕ್ಷ ರೂಪಾಯಿಗಳನ್ನು ಗೋಸಾವಿ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿ ಉದ್ಯೋಗಾಂಕ್ಷಿಯೊಬ್ಬರು ದೂರನ್ನು ದಾಖಲಿಸಿದ್ದರು.

ಆರ್ಯನ್​ ಖಾನ್​ ಪ್ರಕರಣದಲ್ಲೂ ಗೋಸಾವಿ ಅಂಗರಕ್ಷಕ ಎಂದು ಹೇಳಿಕೊಳ್ಳುತ್ತಿರುವ ಪ್ರಭಾಕರ್​ ಸೈಲ್,​ ಗೋಸಾವಿ ವಿರುದ್ಧ ಲಂಚದ ಆರೋಪ ಮಾಡಿದ್ದಾರೆ. 18 ಕೋಟಿ ರೂಪಾಯಿ ಲಂಚವನ್ನು ಶಾರೂಕ್​ ಖಾನ್​ರಿಂದ ಪಡೆಯಲು ಗೋಸಾವಿ ಮುಂದಾಗಿದ್ದ. ಇದರಲ್ಲಿ 8 ಕೋಟಿ ರೂಪಾಯಿ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆಗೆ ಸೇರುವುದಿತ್ತು ಎಂದು ಆರೋಪಿಸಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...