alex Certify ‘ಡ್ರಗ್ಸ್​ ಪ್ರಕರಣ ಮುಂಬೈನಿಂದ ಬಾಲಿವುಡ್​ ಎತ್ತಂಗಡಿ ಮಾಡಿಸಲು ನಡೆಸಿದ ಹುನ್ನಾರ’ : ನವಾಬ್​ ಮಲ್ಲಿಕ್​ ಹೊಸ ಬಾಂಬ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಡ್ರಗ್ಸ್​ ಪ್ರಕರಣ ಮುಂಬೈನಿಂದ ಬಾಲಿವುಡ್​ ಎತ್ತಂಗಡಿ ಮಾಡಿಸಲು ನಡೆಸಿದ ಹುನ್ನಾರ’ : ನವಾಬ್​ ಮಲ್ಲಿಕ್​ ಹೊಸ ಬಾಂಬ್​

ಡ್ರಗ್​ ಪ್ರಕರಣ ಸಂಬಂಧ ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಲೇ ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್​ ಸುದ್ದಿಯಾಗುತ್ತಲೇ ಇದ್ದಾರೆ. ಎನ್​ಸಿಬಿ ವಿರುದ್ಧ ಇಂದು ಮತ್ತೊಮ್ಮೆ ಆಕ್ರೋಶ ಹೊರಹಾಕಿದ ನವಾಬ್​, ಆರೋಪಿಯ ಅಪರಾಧವು ಸಾಬೀತಾಗದೇ ಆ ವ್ಯಕ್ತಿಯನ್ನು ಜೈಲಿನಲ್ಲಿಡೋದು ಅನ್ಯಾಯವಾಗಿದೆ. ಎರಡು ದಿನಗಳ ಹಿಂದೆ ವಿಶೇಷ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ಜಾಮೀನು ನೀಡಿದೆ. ನಿನ್ನೆ ಮೂವರು ಜಾಮೀನು ಪಡೆದು ಹೊರ ಬಂದಿದ್ದಾರೆ. ನನ್ನ ಪ್ರಕಾರ ಇವರಿಗೆ ಮೊದಲೇ ಜಾಮೀನು ನೀಡಬಹುದಿತ್ತು. ಆದರೆ ಎನ್​ಸಿಬಿ ಯಾವಾಗಲೂ ಪ್ರಕರಣಗಳನ್ನು ಕ್ಲಿಷ್ಟಕರ ಮಾಡಿಬಿಡುತ್ತದೆ. ಕೇಸ್​ನ್ನು ಕಠಿಣ ಗೊಳಿಸಲೆಂದೇ ಎನ್​ಸಿಬಿ ಸುಳ್ಳು ಹೇಳುತ್ತೆ. ಈ ಮೂಲಕ ಆರೋಪಿಗಳು ಹೆಚ್ಚಿನ ದಿನಗಳ ಕಾಲ ಜೈಲಿನಲ್ಲಿಯೇ ಕೊಳೆಯುವಂತೆ ಮಾಡುತ್ತದೆ ಎಂದು ಕಿಡಿಕಾರಿದ್ದಾರೆ.

ನಿನ್ನೆಯವರೆಗೂ ಮುಂಬೈ ಪೊಲೀಸರ ಬಳಿ ಭದ್ರತೆ ಕೇಳುತ್ತಿದ್ದ ಸಮೀರ್​ ವಾಂಖೆಡೆ ನಿನ್ನೆ ಹೈಕೋರ್ಟ್​ಗೆ ತೆರಳಿ ಮುಂಬೈ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದಿದ್ದಾರೆ. ಈ 8 ದಿನಗಳಲ್ಲಿ ಮುಂಬೈ ಪೊಲೀಸರ ಮೇಲೆ ನಂಬಿಕೆ ಕಳೆದುಕೊಳ್ಳಲು ಕಾರಣ ಏನಿರಬಹುದು..? ಬಹುಶಃ ಅನೇಕ ವಿಚಾರಗಳಿಂದ ಅವರಿಗೆ ಈ ಭಯ ಹುಟ್ಟಿರಬಹುದು ಎಂದು ವ್ಯಂಗ್ಯವಾಡಿದ್ರು.

ವಾಂಖಡೆ ಖಾಸಗಿ ಜೀವನಕ್ಕೆ ನವಾಬ್​ ಧಕ್ಕೆ ಉಂಟು ಮಾಡಿದ್ದಾರೆ ಎಂಬ ಆರೋಪನ್ನೂ ಇದೇ ವೇಳೆ ತಳ್ಳಿ ಹಾಕಿದ ಅವರು, ನಾನು ಮೊದಲ ಹೆಂಡತಿಯ ಫೋಟೋ ರಿಲೀಸ್​ ಮಾಡಿದ್ದೆ. ಅನೇಕರು ನನ್ನ ಬಳಿ ಈ ಫೋಟೋ ರಿಲೀಸ್​ ಮಾಡಿದ್ದೇಕೆ ಎಂದು ಕೇಳಿದ್ದರು..? ರಾತ್ರಿ 2 ಗಂಟೆ ಸುಮಾರಿಗೆ ನನಗೆ ಎಲ್ಲಿಂದಲೂ ಫೋಟೋ ಸಿಕ್ಕಿತ್ತು. ಈ ಚಿತ್ರದಲ್ಲಿರುವ ವ್ಯಕ್ತಿಯೇ ಈ ಫೋಟೋವನ್ನು ಸಾರ್ವಜನಿಕಗೊಳಿಸಿ ಎಂದು ಹೇಳಿದ್ದರು ಎಂದಿದ್ದಾರೆ.

ವಾಂಖೆಡೆಯನ್ನು ಬಳಸಿ ಮಹಾರಾಷ್ಟ್ರ ಸರ್ಕಾರಕ್ಕೆ ಕಳಂಕ ತರುವ ಪ್ರಯತ್ನ ಇದಾಗಿದೆ ಎಂದು ನಾನು ಮೊದಲ ದಿನದಿಂದಲೇ ಹೇಳುತ್ತಾ ಬಂದಿದ್ದೇನೆ. ರಿಯಾ ಚಕ್ರವರ್ತಿಯಿಂದ ಆರಂಭಿಸಿ ವಾಂಖೆಡೆ ಬಾಲಿವುಡ್​ ತಾರೆಯರಿಗೆ ಸಮನ್ಸ್​ ನೀಡಿದ್ದು ಬಿಟ್ಟರೆ ಕಳೆದ 1 ವರ್ಷದಲ್ಲಿ ಯಾರನ್ನೂ ಬಂಧಿಸಿಲ್ಲ. ಪ್ರಕರಣದಲ್ಲಿ ಆರೋಪಿಯ ದೋಷ ಕಂಡುಬಂದರೆ ಅವರನ್ನು ಬಂಧಿಸಬೇಕು. ಆದರೆ ಇಲ್ಲಿ ಪ್ರಕರಣದ ಹೆಸರಲ್ಲಿ ಸುಲಿಗೆ ನಡೆಯುತ್ತಿದೆ. ಹಾಲಿ ಸರ್ಕಾರ ಹಾಗೂ ಬಾಲಿವುಡ್​ನ್ನು ಮುಂಬೈನಿಂದ ಎತ್ತಂಗಡಿ ಮಾಡಲು ಬಿಜೆಪಿ ಮಾಡಿದ ಪ್ಲಾನ್​ ಇದಾಗಿದೆ. ಬಾಲಿವುಡ್​ ಗಣ್ಯರಿಗೆ ತೊಂದರೆ ಕೊಟ್ಟರೆ ಬಾಲಿವುಡ್​ ಮುಂಬೈನಿಂದ ತೆರಳುತ್ತದೆ. ಬಳಿಕ ಉತ್ತರ ಪ್ರದೇಶದಲ್ಲಿ ಬಾಲಿವುಡ್​ನ್ನು ತಳವೂರಿಸಿ ಹೊಸ ಫಿಲಂ ಸಿಟಿ ನಿರ್ಮಿಸಬಹುದು ಎಂಬ ಷಡ್ಯಂತ್ರವನ್ನಿಟ್ಟು ಇದನ್ನೆಲ್ಲ ಮಾಡಲಾಗ್ತಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...