alex Certify ನವರಾತ್ರಿ ವಿಶೇಷ: ದುರ್ಗೆಯ ವಿವಿಧ ಆಯುಧಗಳ ಮಹತ್ವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವರಾತ್ರಿ ವಿಶೇಷ: ದುರ್ಗೆಯ ವಿವಿಧ ಆಯುಧಗಳ ಮಹತ್ವ

ಜಗತ್ತಿನ ಸೃಷ್ಟಿಕರ್ತೆಯಾದ ಆದಿಶಕ್ತಿಯನ್ನು ಭಕ್ತಿ ಭಾವಗಳಿಂದ ಒಂಭತ್ತು ದಿನಗಳ ಪರ್ಯಂತ ಇಡೀ ಭಾರತವೇ ಪೂಜಿಸುವ ಹಬ್ಬ ’ನವರಾತ್ರಿ ಅಥವಾ ದಸರಾ’. ಮಹಾಲಯ ಅಮಾವಾಸ್ಯೆಯ ಮಾರನೇ ದಿನ, ಅಂದರೆ ಈ ಬಾರಿ ಅಕ್ಟೋಬರ್‌ 7 ರಿಂದ 15ರವರೆಗೆ ನವರಾತ್ರಿ ಉತ್ಸವ ಜರುಗಲಿದೆ.

ಮುಖ್ಯವಾಗಿ ಇಲ್ಲಿ ದುರ್ಗಾದೇವಿಯನ್ನು ನಾನಾ ರೂಪಗಳಿಂದ ಪೂಜಿಸಲಾಗುತ್ತದೆ. ಆಕೆಯು ಅವತಾರ ತಾಳಿ, ಜಗತ್ತಿಗೆ ಕಂಟಕರಾಗಿದ್ದ ಅನೇಕ ರೀತಿಯ ರಾಕ್ಷಸರನ್ನು ಸಂಹರಿಸಿದ ಒಟ್ಟಾರೆ ಸಾರಾಂಶವನ್ನು ನವರಾತ್ರಿಯಲ್ಲಿ ನಮ್ಮ ಸನಾತನ ಸಂಪ್ರದಾಯದ ಹಿರಿಯರು ಹೆಣೆದಿದ್ದಾರೆ. ಇದೇ ದುರ್ಗೆಯಲ್ಲಿ ’ತ್ರಿದೇವಿ’ ಸ್ವರೂಪರಾಗಿ ಸರಸ್ವತಿ, ಲಕ್ಷ್ಮೀ ಹಾಗೂ ಪಾರ್ವತಿ ನೆಲೆಸಿರುತ್ತಾರೆ. ಆಕೆಯು ಮಹಿಷಾಸುರನಂತಹ ಬಲಶಾಲಿ ರಾಕ್ಷಸನನ್ನು ಸಂಹಸರಿಸಲು ಎಲ್ಲ ದೇವತೆಗಳು ತಮ್ಮ ಬಳಿಯ ಅತಿ ಪ್ರಭಾವಶಾಲಿಯಾದ ಅಸ್ತ್ರವೊಂದನ್ನು ತಾಯಿ ದುರ್ಗೆಗೆ ಅರ್ಪಿಸಿದ್ದಾರೆ.

ಹಾಗಾದರೆ ದುರ್ಗಾದೇವಿ ಹಿಡಿದಿರುವ ಆಯುಧಗಳು ಯಾವುದು ? ಅವುಗಳ ಮಹತ್ವವೇನು ? ತಿಳಿಯೋಣ ಬನ್ನಿ.

ತ್ರಿಶೂಲ- ಪರಶಿವನು ನೀಡಿದ ಅತ್ಯಂತ ಶಕ್ತಿಶಾಲಿ ಆಯುಧ. ಕೊನೆಗೆ ಮಹಿಷಾಸುರನ ಸಂಹರಿಸಿದ್ದು ಇದರಿಂದಲೇ, ತಾಯಿಯ ಸಂಹಾರ ರೂಪದಲ್ಲಿ ಆಕೆಯು ಎರಡೂ ಕೈಗಳಿಂದ ಹಿಡಿದಿರುವುದು ತ್ರಿಶೂಲವನ್ನೇ ಎನ್ನುವುದು ವಿಶೇಷ. ಸತ್ವ, ರಜಸ್ಸು ಮತ್ತು ತಮೋ ಗುಣಗಳ ಪ್ರತೀಕವಿದು.

ಸುದರ್ಶನ ಚಕ್ರ – ವಿಷ್ಣುವಿನ ಅತ್ಯಂತ ಶಕ್ತಿಯುತ ಆಯುಧವಿದು. ಭೂಮಿ ಹಾಗೂ ವಿಶ್ವವು ಪರಿಭ್ರಮಿಸುವ ಸೂಚಕ ಇದು.

BREAKING NEWS: ಕಾರ್ ಗಳ ಮುಖಾಮುಖಿ ಡಿಕ್ಕಿ; ಇಬ್ಬರ ಸಾವು

ಕಮಲ – ಸೃಷ್ಟಿಕರ್ತ ಬ್ರಹ್ಮದೇವರು ನೀಡಿರುವ ಈ ಆಯುಧವು ಪರಮ ಜ್ಞಾನದ ಸಂಕೇತ. ಎಲ್ಲ ವಿಷಯಗಳ ಪೂರ್ಣ ಜ್ಞಾನ ತಾಯಿ ದುರ್ಗೆಗೆ ಇದೆ ಎನ್ನುವುದರ ಪ್ರತೀಕ.

ಬಿಲ್ಲು, ಬಾಣ – ಪವನದೇವರು ಮತ್ತು ಸೂರ್ಯದೇವರು ನೀಡಿದ ತಮ್ಮ ಶಕ್ತಿಯ ಸಂಕೇತವಾದ ಇವುಗಳು ಜಗತ್ತಿನ ಚಲನ ಶಕ್ತಿಯ ಸಂಕೇತಗಳಾಗಿವೆ.

ಖಡ್ಗ – ಮಹಾಗಣಪತಿ ದೇವರು ನೀಡಿರುವ ಈ ವಿಶಿಷ್ಟ ಆಯುಧವು ಜ್ಞಾನ ಮತ್ತು ಸ್ವತಂತ್ರ ಶಕ್ತಿಯ ಸಂಕೇತ. ಯಾವುದೇ ಹಂಗಿಗೂ ನಿಲುಕದ ಉತ್ಕೃಷ್ಟ ಶಕ್ತಿಯ ಸ್ವರೂಪ ದುರ್ಗೆ ಎನ್ನುವುದನ್ನು ಖಡ್ಗ ಹಾಗೂ ಅದರ ಮಿಂಚುವ ಕಾಂತಿಯು ತೋರಿಸಿಕೊಡುತ್ತದೆ.

ವಜ್ರ – ವಜ್ರ ಅಥವಾ ವಜ್ರಾಯುಧವು ದೇವತೆಗಳ ರಾಜನಾದ ಇಂದ್ರದೇವರ ಕೊಡುಗೆ. ಇದು ದಿಟ್ಟ ಸಂಕಲ್ಪ ಮತ್ತು ಆತ್ಮಶಕ್ತಿಯ ಸಂಕೇತ. ದುರ್ಗೆಯು ತನ್ನ ಈ ಆಯುಧದಿಂದ ಭಕ್ತರಲ್ಲಿ ಆತ್ಮವಿಶ್ವಾಸ, ದೃಢಸಂಕಲ್ಪಗಳನ್ನು ತುಂಬಿ ಜೀವನದಲ್ಲಿ ಉತ್ತಮ ಧ್ಯೇಯದ ಕಡೆಗೆ ಮುನ್ನಡೆಸುತ್ತಾಳೆ ಎನ್ನುತ್ತಾರೆ ಹಿರಿಯರು.

ಕತ್ತಿ – ಇದು ಅಗ್ನಿದೇವರ ಆಯುಧ. ಸರಿ ಮತ್ತು ತಪ್ಪಿನ ನಡುವಿನ ತೆಳುವಾದ ಗೆರೆಯನ್ನು ಪ್ರತಿನಿಧಿಸುತ್ತದೆ. ನಿರ್ಣಾಯಕ ಶಕ್ತಿ ಮತ್ತು ಜಗತ್ತನ್ನು ಕ್ಷಣ ಮಾತ್ರದಲ್ಲಿ ಸೀಳಿ ಹಾಕುವ ಪ್ರತೀಕವಿದು.

ಹಾವು – ಜಾಗೃತ ಅವಸ್ಥೆ ಮತ್ತು ಆಂತರಿಕ ಶಕ್ತಿಯ ಪ್ರತೀಕವಿದು. ಒಂದು ಹಂತದ ಚಿಂತನೆಯಿಂದ ಅತ್ಯುನ್ನತ ಬ್ರಹ್ಮಚಿಂತನೆ ಕಡೆಗೆ ಸಾಗುವ ದ್ಯೋತಕವಾಗಿದೆ.

ಕೊಡಲಿ – ವಿಶ್ವದ ಶಿಲ್ಪಿ ಎನಿಸಿರುವ ವಿಶ್ವಕರ್ಮ ದೇವರು ನೀಡಿದ ಆಯುಧವಿದು. ದುರ್ಗೆಯು ಕೆಟ್ಟತನ, ವಾಮಮಾರ್ಗ, ಮಾಟ, ವಾಮಾಚಾರಗಳಂತಹ ಅನಾಚಾರಗಳ ವಿರುದ್ಧ ಹೋರಾಡಿ ಹೊಸತು ಮತ್ತು ಸದಾಚಾರ ಪದ್ಧತಿಯನ್ನು ಉತ್ತೇಜಿಸುವ ಪ್ರತೀಕವಿದು.

ಹಳೆಯದ್ದು, ಪ್ರಾರಬ್ಧ, ಕಪಟತನ, ಭೂಮಿಗೆ ಕಂಟಕ, ಜಗತ್ತಿಗೆ ಮಾರಕವಾದವುಗಳನ್ನು ನಾಶಪಡಿಸುತ್ತಾಳೆ. ಜತೆಗೆ ಹೊಸತನ್ನು ಏನಾದರೂ ಕೂಡ ನಿರ್ಮಿಸಿಕೊಡುವುದರಲ್ಲಿ ದುರ್ಗೆಯು ಸಮರ್ಥಳು ಎಂದು ದೇವಾನುದೇವತೆಗಳು ಈ ಆಯುಧಗಳಿಂದ ಜಗತ್ತಿಗೆ ಸಂದೇಶ ಸಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...