alex Certify ಸೋಶಿಯಲ್​ ಮೀಡಿಯಾದಲ್ಲಿ ಆಮಂತ್ರಣ ಪತ್ರಿಕೆ ವೈರಲ್: ಮದುವೆಯನ್ನೇ ರದ್ದು ಮಾಡಿದ ಕುಟುಂಬಸ್ಥರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್​ ಮೀಡಿಯಾದಲ್ಲಿ ಆಮಂತ್ರಣ ಪತ್ರಿಕೆ ವೈರಲ್: ಮದುವೆಯನ್ನೇ ರದ್ದು ಮಾಡಿದ ಕುಟುಂಬಸ್ಥರು..!

ಸೋಶಿಯಲ್​ ಮೀಡಿಯಾದಲ್ಲಿ ಮದುವೆ ಆಮಂತ್ರಣ ಪತ್ರಿಕೆ ವ್ಯಾಪಕವಾಗಿ ವೈರಲ್​ ಆದ ಪರಿಣಾಮ ಜುಲೈ 18ರಂದು ನಿಗದಿಯಾಗಿದ್ದ ಮದುವೆಯನ್ನ ಕುಟುಂಬಸ್ಥರು ರದ್ದು ಮಾಡಿದ ಘಟನೆ ಮಹಾರಾಷ್ಟ್ರದ ನಾಶಿಕ್​ನಲ್ಲಿ ನಡೆದಿದೆ.

ಹಿಂದೂ ಮಹಿಳೆ ಹಾಗೂ ಮುಸ್ಲಿಂ ಯುವಕನ ನಡುವೆ ವಿವಾಹವನ್ನ ನಿಶ್ಚಯಿಸಲಾಗಿತ್ತು. ಆದರೆ ಇದು ಲವ್​ ಜಿಹಾದ್​ ಎಂದು ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮದುವೆ ರದ್ದಾಗಿದೆ.

ಮದುವೆಯನ್ನ ನಿಲ್ಲಿಸುವಂತೆ ಸಾಕಷ್ಟು ಒತ್ತಡಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವಿವಾಹ ಕಾರ್ಯಕ್ರಮವನ್ನ ರದ್ದು ಮಾಡಿದ್ದೇವೆ ಎಂದು ವಧುವಿನ ತಂದೆ ಪ್ರಸಾದ್​ ಅಡಗಾಂವಕರ್​​ ತಮ್ಮ ಸಮುದಾಯಕ್ಕೆ ಬರೆದ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ. ಪ್ರಸಾದ್​ ಆಭರಣ ವ್ಯಾಪಾರಿಯಾಗಿದ್ದಾರೆ.

28 ವರ್ಷದ ರಸಿಕಾ ಹಾಗೂ ಆಕೆಯ ಸಹಪಾಠಿಯಾಗಿದ್ದ ಆಸೀಫ್​ ಖಾನ್​ ಜುಲೈ 18ರಂದು ಹಿಂದೂ ಸಂಪ್ರದಾಯದಂತೆ ವಿವಾಹವಾಗುವವರಿದ್ದರು. ಅಂದಹಾಗೆ ಇವರಿಬ್ಬರು ಸ್ಥಳೀಯ ನ್ಯಾಯಾಲಯದಲ್ಲಿ ಈಗಾಗಲೇ ತಮ್ಮ ಮದುವೆಯನ್ನ ನೋಂದಾಯಿಸಿದ್ದಾರೆ.

ರಾಜ್ಯದಲ್ಲಿ ಮುಂದಿನ ವಾರ ಮತ್ತೊಂದು ಸುತ್ತಿನ ಅನ್​ಲಾಕ್​: ನೈಟ್​ ಕರ್ಫ್ಯೂನಿಂದ ವಿನಾಯ್ತಿ, ಪಬ್​ಗಳು ಪುನಾರಂಭ ಸಾಧ್ಯತೆ

ಪುತ್ರಿಯ ಮದುವೆಯನ್ನ ಹಿಂದೂ ಸಂಪ್ರದಾಯದಂತೆಯೇ ಮಾಡಬೇಕೆಂದು ಪ್ರಸಾದ್​ ಬಯಸಿದ್ದ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್​ನಲ್ಲಿ ವಿವಾಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದಕ್ಕಾಗಿ ಕುಟುಂಬಸ್ಥರಿಗೆ ಆಹ್ವಾನ ನೀಡಲಾಗಿತ್ತು. ಹಿಂದೂ ಸಂಪ್ರದಾಯದಂತೆ ವಿವಾಹವಾಗಲು ವರನ ಕುಟುಂಬಸ್ಥರಿಂದ ಯಾವುದೇ ಅಡ್ಡಿ ಇರಲಿಲ್ಲ.

ಆದರೆ ಸೋಶಿಯಲ್​ ಮೀಡಿಯಾದಲ್ಲಿ ಆಮಂತ್ರಣ ಪತ್ರಿಕೆ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಈ ಅಂತರ್​​ಧರ್ಮೀಯ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಸಾದ್​​ ಸಾಕಷ್ಟು ಕರೆಗಳನ್ನೂ ಸ್ವೀಕರಿಸಿದ್ದು ಮದುವೆ ನಿಲ್ಲಿಸುವಂತೆ ಒತ್ತಡ ಹೇರಲಾಗುತ್ತಿತ್ತು ಎಂದು ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...