alex Certify ಲಾಕ್ ಡೌನ್ ನಡುವೆಯೂ ನಂಜುಂಡೇಶ್ವರ ದೇವಾಲಯದಲ್ಲಿ ಭಾರಿ ಕಾಣಿಕೆ ಸಂಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ನಡುವೆಯೂ ನಂಜುಂಡೇಶ್ವರ ದೇವಾಲಯದಲ್ಲಿ ಭಾರಿ ಕಾಣಿಕೆ ಸಂಗ್ರಹ

ಮೈಸೂರು: ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಾಲಯದಲ್ಲಿ ಲಾಕ್ ಡೌನ್ ನಡುವೆಯೂ ಭಕ್ತರಿಂದ ಭಾರಿ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.

1,29,73,194 ರೂ. ಸಂಗ್ರಹವಾಗಿದೆ. 50 ಗ್ರಾಂ ಚಿನ್ನ, 8 ಕೆಜಿ 200 ಗ್ರಾಂ ಬೆಳ್ಳಿ, ಹಾಗೂ ವಿದೇಶಿ ಕರೆನ್ಸಿ ಸಂಗ್ರಹವಾಗಿದೆ. ದೇವಾಲಯದ ಸಿಬ್ಬಂದಿ ಹಾಗೂ ಕಾವೇರಿ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ನಂಜನಗೂಡು ನಂಜುಂಡೇಶ್ವರ ದೇವಾಲಯ ಕಾಣಿಕೆ ಹುಂಡಿಯ ಹಣ ಎಣಿಕೆ ಮಾಡಿದ್ದಾರೆ.

ಲಾಕ್ ಡೌನ್ ಸಡಿಲಿಕೆಯಾದ ನಂತರ ಭಕ್ತಾದಿಗಳ ಸಂಖ್ಯೆ ಏರಿಕೆಯಾಗಿದ್ದು, ಹೀಗೆ ಬರುವ ಭಕ್ತರು ಇಷ್ಟಾರ್ಥ ಸಿದ್ಧಿಗೆ ಕಾಣಿಕೆ ಅರ್ಪಿಸುತ್ತಾರೆ. ಒಂದು ತಿಂಗಳಲ್ಲಿ 1.30 ಕೋಟಿ ರೂ. ನಷ್ಟು ಕಾಣಿಕೆ ಸಂಗ್ರಹವಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...