alex Certify ಅನುಷಾ ಶೆಟ್ಟಿ ಜೊತೆ ನಟ ನಾಗ ಶೌರ್ಯ ಮದುವೆ; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನುಷಾ ಶೆಟ್ಟಿ ಜೊತೆ ನಟ ನಾಗ ಶೌರ್ಯ ಮದುವೆ; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

ತೆಲುಗು ನಟ ನಾಗಶೌರ್ಯ ಬೆಂಗಳೂರು ಮೂಲದ ಅನುಷಾ ಶೆಟ್ಟಿ ಅವರೊಂದಿಗೆ ಭಾನುವಾರದಂದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಮದುವೆ ಫೋಟೋವನ್ನು ತಮ್ಮ instagram ನಲ್ಲಿ ಹಂಚಿಕೊಂಡಿರುವ ನಾಗಶೌರ್ಯ, ನನ್ನ ಜೀವನದ ಜವಾಬ್ದಾರಿಯನ್ನು ಪರಿಚಯಿಸುತ್ತಿದ್ದೇನೆ ಎಂದು ಶೀರ್ಷಿಕೆ ನೀಡಿದ್ದಾರೆ.

ಫೋಟೋಗಳು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸುತಿದ್ದಾರೆ. ಅಲ್ಲದೆ ಚಿತ್ರರಂಗದ ಗಣ್ಯರು ಕೂಡಾ ಶುಭ ಕೋರಿದ್ದಾರೆ. ವಿವಾಹ ಸಮಾರಂಭದಲ್ಲಿ ಹತ್ತಿರದ ಬಂಧುಗಳು ಹಾಗೂ ಆಪ್ತ ಸ್ನೇಹಿತರು ಇದ್ದರೆಂದು ಹೇಳಲಾಗಿದೆ.

ಅನುಷಾ ಶೆಟ್ಟಿ ಇಂಟೀರಿಯರ್ ಡಿಸೈನರ್ ಆಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಉದಯೋನ್ಮುಖ ನಟರಾಗಿರುವ ನಾಗಶೌರ್ಯ ಈಗಾಗಲೇ 23 ಚಿತ್ರಗಳಲ್ಲಿ ನಟಿಸಿದ್ದು, 24ನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...