alex Certify ಗುಂಡಿ ಬಿದ್ದ ರಸ್ತೆ ರಿಪೇರಿಗೆ ಸ್ವಂತ ಜೇಬಿನಿಂದ ಮೂರು ಲಕ್ಷ ರೂಪಾಯಿ ಖರ್ಚು ಮಾಡಿದ ಪೊಲೀಸ್ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಂಡಿ ಬಿದ್ದ ರಸ್ತೆ ರಿಪೇರಿಗೆ ಸ್ವಂತ ಜೇಬಿನಿಂದ ಮೂರು ಲಕ್ಷ ರೂಪಾಯಿ ಖರ್ಚು ಮಾಡಿದ ಪೊಲೀಸ್ ಅಧಿಕಾರಿ

Mysuru Cop Spends Rs 3 Lakh from His Own Pocket to Fix Pothole-filled Road

ದೇಶದ ರಸ್ತೆಗಳಲ್ಲಿ ಅಫಘಾತಗಳು ಸಂಭವಿಸುವುದು ಸರ್ವೇ ಸಾಮಾನ್ಯ. ಇಂಥದ್ದೇ ನಿದರ್ಶನವೊಂದು ಮೈಸೂರು ಜಿಲ್ಲೆಯ ಎಚ್‌ಡಿ ಕೋಟೆ ತಾಲ್ಲೂಕಿನಲ್ಲಿ ಜರುಗಿದ್ದು, ಇಲ್ಲಿನ ಮಾದಾಪುರ – ಕೆ. ಬೆಳ್ತೂರು ನಡುವಿನ ಐದು ಕಿಮೀ ರಸ್ತೆ ಸಿಕ್ಕಾಪಟ್ಟೆ ಗುಂಡಿ ಬಿದ್ದಿತ್ತು.

ರಸ್ತೆ ಸರಿ ಮಾಡಲು ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಜನರು ಎಷ್ಟೇ ವಿನಂತಿಸಿಕೊಂಡರೂ ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಇಲ್ಲಿನ ಪೊಲೀಸ್ ಸಹಾಯಕ ಉಪನಿರೀಕ್ಷಕ ಎಸ್‌. ದೊರೆಸ್ವಾಮಿರನ್ನು ಸಹಾಯ ಕೋರಿ ಹೋಗಿದ್ದಾರೆ ಜನ.

ಎಚ್‌.ಡಿ. ಕೋಟೆ ಪೊಲೀಸ್ ಠಾಣೆಯ ದೊರೆಸ್ವಾಮಿ ತಮ್ಮ ಜನಸ್ನೇಹಿ ನಿಲುವಿನಿಂದ ಎಲ್ಲರ ಪ್ರೀತಿಪಾತ್ರರಾಗಿದ್ದಾರೆ. ರಸ್ತೆಯ ಈ ಪರಿಸ್ಥಿತಿಯ ಬಗ್ಗೆ ತಿಳಿದ ದೊರೆಸ್ವಾಮಿ ಖುದ್ದು ತಮ್ಮ ಹಾಗೂ ಮಡದಿ ಚಂದ್ರಿಕಾರ ಉಳಿತಾಯದಿಂದ ರಕ್ಷಣಾ ಸೇವಾ ಟ್ರಸ್ಟ್‌ಗೆ ಮೂರು ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾರೆ.

BIG BREAKING NEWS: 2 ತಿಂಗಳ ನಂತರ ಡೀಸೆಲ್ ಬೆಲೆ ಇಳಿಕೆ, ಪೆಟ್ರೋಲ್ ಬೆಲೆ ಮತ್ತೆ ಏರಿಕೆ

ಅಲ್ಲದೇ ರಸ್ತೆ ರಿಪೇರಿ ಮಾಡುವ ಕಾರ್ಮಿಕರಿಗೆ ತಮ್ಮ ಕೈಲಾದ ಎಲ್ಲ ರೀತಿಯ ಸಹಾಯವನ್ನೂ ಮಾಡಿದ್ದಾರೆ ದೊರೆಸ್ವಾಮಿ. ಮಂಗಳವಾರದಂದು ಖುದ್ದು ತಾವೇ ಮುಂದೆ ಬಂದು ರಸ್ತೆ ರಿಪೇರಿ ಕಾರ್ಮಿಕರೊಂದಿಗೆ ಗುದ್ದಲಿ ಹಿಡಿದು ರಿಪೇರಿ ಕೆಲಸದಲ್ಲಿ ನಿರತರಾಗಿದ್ದರು ದೊರೆಸ್ವಾಮಿ.

“30 ಗ್ರಾಮಗಳ ಜನರು ಈ ರಸ್ತೆಯನ್ನು ಪ್ರತಿನಿತ್ಯ ಬಳಸುತ್ತಾರೆ. ಅಲ್ಲಲ್ಲಿ ಅಫಘಾತಗಳಾಗಿ ಜನರು ಗಾಯಗೊಳ್ಳುತ್ತಿದ್ದಾರೆ. ಕೆಲ ಆಂಬುಲೆನ್ಸ್ ಚಾಲಕರು ಈ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದು, ಈ ಕುರಿತು ಏನಾದರೂ ಮಾಡಬೇಕೆಂದು ಅನಿಸಿದೆ” ಎನ್ನುತ್ತಾರೆ ದೊರೆಸ್ವಾಮಿ.

BIG NEWS: ಜುಲೈ 12ರಿಂದ 16ರವರೆಗೆ ಭಾರಿ ಮಳೆ ಮುನ್ಸೂಚನೆ, 7 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಣೆ

ಇದೇ ರೀತಿ ಮೊತ್ತೊಂದು ರಸ್ತೆಯ ರಿಪೇರಿಗೂ ಸಹಾಯ ಮಾಡಿರುವ ದೊರೆಸ್ವಾಮಿ, ಹೆತ್ತವರನ್ನು ಕಳೆದುಕೊಂಡಿದ್ದ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...