alex Certify BIG NEWS: ಈ ಬಾರಿ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಲಿವೆ 49 ಟ್ಯಾಬ್ಲೋಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಈ ಬಾರಿ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಲಿವೆ 49 ಟ್ಯಾಬ್ಲೋಗಳು

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂ ಸವಾರಿ ವೀಕ್ಷಣೆಗಾಗಿ ಲಕ್ಷಾಂತರ ಜನರು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದಾರೆ. ಈ ಬಾರಿ ಜಂಬೂ ಸವಾರಿ ಮೆರವವಣಿಗೆಯಲ್ಲಿ 49 ಸ್ತಬ್ಧಚಿತ್ರಗಳು ಭಾಗವಹಿಸಲಿವೆ.

ಬಾಗಲಕೋಟೆ- ಬಾದಾಮಿ ಚಾಲುಕ್ಯರ ರಾಜವಂಶ ಹಾಗೂ ಬನಶಂಕರಿ ದೇವಿ ಸ್ಥಬಧ ಚಿತ್ರ, ಬಳ್ಳಾರಿ – ಕುಮರಸ್ವಾಮಿ ದೇವಸ್ಥಾನ ಹಾಗೂ ಪಾರ್ವತಿ ದೇವಾಲಯ, ಬೆಳಗಾವಿಯ- ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಫಾಲ್ಸ್, ಸುವರ್ಣಸೌಧ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿರಾಯಣ್ಣ ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ.

ಬೆಂಗಳೂರು ಗ್ರಾಮಾಂತರ ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ಚಂದ್ರಯಾನ-3, ಬೀದರ್ – ಕೃಷ್ಣಮೃಗ ಸಂರಕ್ಷಣಾಧಾಮದ ಅರಣ್ಯ ಪ್ರದೇಶ, ಚಾಮರಾಜನಗರ-ಜಾನಪದ, ಭಕ್ತಿಯ ಬೀಡು, ಹುಲಿ ಆನೆಗಳ ಸಂತೃಪ್ತಿಯ ಕಾಡು, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ-ಏಕತೆಯಲ್ಲಿ ಅನೇಕತೆ, ಚಿಕ್ಕಮಗಳೂರು ಜಿಲ್ಲೆ-ಬೆಟ್ಟದಿಂದ ಬಟ್ಟಲಿಗೆ, ಚಿತ್ರದುರ್ಗ-ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ, ದಕ್ಷಿಣ ಕನ್ನಡ-ಪಿಲಕುಳ ಗುತ್ತಿನಮನೆ-ವಿವೇಕಾನಂದ ತಾರಾಲಯ-ಬೀಚ್ ಸರ್ಫಿಂಗ್, ದಾವಣಗೆರೆ-ಸಂತ ಸೇವಾಲಾಲ ಹುಟ್ಟೂರು ಮತ್ತು ಬಂಜಾರಾ ಸಂಪ್ರದಾಯ, ಧಾರವಾಡ- ಧಾರವಾಡ ಪೇಡಾ, ಧಾರವಾಡ ಎಮ್ಮೆ ನಮ್ಮ ಹೆಮ್ಮೆ, ಗದಗ- ಸಬರಮತಿ ಆಶ್ರಮ ಸ್ತಬ್ಧಚಿತ್ರ ಮೆರವಣಿಗೆ, ಹಾಸನ-ಹಾಸನಾಂಬ ದೇವಾಲಯ, ಹಲ್ಮಡಿ-ಈಶ್ವರ ದೇವಾಲಯ, ಹಾವೇರಿ- ಶಂಕನಾದ ಮೊಳಗಿಸುತ್ತಿರುವ ಕನಕದಾಸರು ಮತ್ತು ಗದ್ದಿಗೆ ಕಾಗಿನೆಲೆ, ಕಲಬುರ್ಗಿ-ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯಪ್ರದೇಶ ವನ್ಯಜೀವಿ ಧಾಮ, ಕೊಡಗು-ಕೊಡಗಿನ ಪ್ರೇಕ್ಷಣೀಯ ಸ್ಥಳಗಳು, ಕೋಲಾರ-ನರೇಗಾ ಯೋಜನೆಯಡಿ ವೀರಗಲ್ಲುಗಳ ಉತ್ಖನನ ಮತ್ತು ಮರುಸ್ಥಪನೆ, ಕೊಪ್ಪಳ-ಕಿನ್ನಾಳ ಕಲೆ ಮತ್ತು ಕೈಮಗ್ಗ, ಮಂಡ್ಯ- ಸಾಂಪ್ರದಾಯಿಕ ಉದ್ಯಮ ಆಲೆಮನೆ, ಮೈಸೂರು-ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳು, ರಾಯಚೂರು-ನವರಂಗ ದರ್ವಾಜ ಹಾಗೂ ಆರ್ ಟಿಪಿಎಸ್, ರಾಮನಗರ-ಚನ್ನಪಟ್ಟಣದ ಚಂದದ ಗೊಂಬೆಗಳು, ಶಿವಮೊಗ್ಗ -ಕುವೆಂಪು ಪ್ರತಿಮೆ, ಕುಪ್ಪಳ್ಳಿ, ಗುಡವಿ ಪಕ್ಷಿಧಾಮ ಮತ್ತು ಚಿತ್ರದುರ್ಗ-ನಗರ ಕೋಎ, ಹುಲಿ ಸಿಂಹಧಾಮ, ಶಿವಪ್ಪ ನಾಯಕ ಪ್ರತಿಮೆ ಟ್ಯಾಬ್ಲೋಗಳು ಭಾಗಿಯಾಗಲಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...