alex Certify Bengaluru : ನನ್ನ ಪತ್ನಿ ‘ಮಾದಕ ವ್ಯಸನಿ’ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ-ನಿರ್ಮಾಪಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Bengaluru : ನನ್ನ ಪತ್ನಿ ‘ಮಾದಕ ವ್ಯಸನಿ’ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ-ನಿರ್ಮಾಪಕ

ಬೆಂಗಳೂರು : ನನ್ನ ಪತ್ನಿ ಮಾದಕ ವ್ಯಸನಿ , ಆಕೆಗೆ ಡ್ರಗ್ ಪೆಡ್ಲರ್ ಜೊತೆ ಅನೈತಿಕ ಸಂಬಂಧವಿದೆ ಎಂದು ಸ್ಯಾಂಡಲ್ ವುಡ್ ನಟ ಕಂ ನಿರ್ಮಾಪಕರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ನಿರ್ಮಾಪಕ ಚಂದ್ರಶೇಖರ್ ಎಂಬುವವರು ನಮಿತಾ ಎಂಬುವವರನ್ನು ಮದುವೆಯಾಗಿದ್ದರು. ಕೆಲಕಾಲ ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿದೆ. ನನ್ನ ಪತ್ನಿ ಕದ್ದು ಮುಚ್ಚಿ ಡ್ರಗ್ಸ್ ಸೇವನೆ ಮಾಡುತ್ತಿದ್ದಳು. ಡ್ರಗ್ ಪೆಡ್ಲರ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಆರೋಪಿಸಿ ದೂರು ನೀಡಿದ್ದಾರೆ. ನಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ಸಮಿತಾ ಹಾಗೂ ಡ್ರಗ್ ಪೆಡ್ಲರ್ ಲಕ್ಞ್ಮೀಶ ಪ್ರಭು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆಯೇ ಹಲ್ಲೆ ನಡೆಸಿದ್ದರು ಎಂದು ಚಂದ್ರಶೇಖರ್ ದೂರು ನೀಡಿದ್ದಾರೆ.

ಇನ್ನೂ ಪತ್ನಿ ನಮಿತಾ ಕೂಡ ಪತಿ ವಿರುದ್ಧ ದೂರು ನೀಡಿದ್ದು, ಚಂದ್ರಶೇಖರ್ ಗೆ ಈ ಮೊದಲೇ ಮಗುವಾಗಿ ಮಗು ಇದ್ದರೂ ಕೂಡ ವಿಚ್ಚೇಧನ ನೀಡಿದ್ದಾಗಿ ಹೇಳಿ ನನ್ನನ್ನು ಮದುವೆ ಆಗಿ ವಂಚಿಸಿದ್ದಾರೆ. ಅಲ್ಲದೇ ನನ್ನ ಮೇಲೆ ಡ್ರಗ್ಸ್ ಆರೋಪ ಮಾಡಿ ಹಲ್ಲೆ ನಡೆಸಿ ದ್ದಾರೆ ಎಂದು ನಮಿತಾ ಕೂಡ ಪತಿ ವಿರುದ್ಧ ದೂರು ನೀಡಿದ್ದಾರೆ. ಘಟನೆ ಸಂಬಂಧ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪರಸ್ಪರ ಪ್ರಕರಣ ದಾಖಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...