alex Certify ಎನರ್ಜಿ ಡ್ರಿಂಕ್‌ ಕುಡಿತೀರಾ ? ಹಾಗಾದ್ರೆ ನೀವು ಓದಲೇಬೇಕು ಈ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎನರ್ಜಿ ಡ್ರಿಂಕ್‌ ಕುಡಿತೀರಾ ? ಹಾಗಾದ್ರೆ ನೀವು ಓದಲೇಬೇಕು ಈ ಸುದ್ದಿ

ಲಂಡನ್​: ತನ್ನ ಸಹೋದ್ಯೋಗಿಗಳನ್ನು ಮೆಚ್ಚಿಸಲು 10 ನಿಮಿಷಗಳಲ್ಲಿ 12 ಎನರ್ಜಿ ಡ್ರಿಂಕ್‌ ಗಳನ್ನು ಕುಡಿದ ವ್ಯಕ್ತಿಯೊಬ್ಬ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾನೆ. ಜಾಹೀರಾತುಗಳಲ್ಲಿ ಸೆಲೆಬ್ರಿಟಿಗಳು ಕುಡಿಯುವ ಎನರ್ಜಿ ಡ್ರಿಂಕ್​ ಅನ್ನು ತಾನೂ ಕುಡಿಯಲು ಹೋಗಿ ಎಡವಟ್ಟು ಆಗಿದ್ದು, ಇದೀಗ ಸಾವು-ಬದುಕಿನ ನಡುವೆ ವ್ಯಕ್ತಿ ಹೋರಾಟ ಮಾಡುತ್ತಿದ್ದಾನೆ.

ಇದು ನಡೆದಿರುವುದು ಲಂಡನ್​ನಲ್ಲಿ. 36 ವರ್ಷದ ಗೇಮರ್ ರೆ ಆಸ್ಪತ್ರೆಗೆ ದಾಖಲಾಗಿದ್ದಾನೆ, ಒಂದೇ ಸಲಕ್ಕೆ ಎನರ್ಜಿ ಡ್ರಿಂಕ್​ ಕುಡಿದಿರುವ ಈತನ ಅಂಗಾಂಗಗಳಿಗೆ ಭಾರಿ ಹಾನಿಯಾಗಿದೆ. ಇದರ ಬಗ್ಗೆ ವಿಡಿಯೋ ವೈರಲ್​ ಆಗಿದೆ.

ಡಾ ಎಚ್‌ಸು ಕ್ಲಿನಿಕಲ್ ಫಾರ್ಮಸಿಸ್ಟ್ ಆಗಿದ್ದು, ಅವರು ಚುಬ್ಬೆಮು ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. 2.68 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಈ ಯುಟ್ಯೂಬ್​ ಚಾನೆಲ್​ನಲ್ಲಿ ಎಚ್​ಸಿ ಅವರು ಎನರ್ಜಿ ಡ್ರಿಂಕ್ಸ್​ ಒಂದೇ ಬಾರಿ ಕುಡಿದರೆ ಏನೆಲ್ಲಾ ಅನಾಹುತ ಆಗುತ್ತದೆ ಎಂಬ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ತನ್ನ ಸಹೋದ್ಯೋಗಿಗಳನ್ನು ಮೆಚ್ಚಿಸಲು 10 ನಿಮಿಷಗಳಲ್ಲಿ 12 ಎನರ್ಜಿ ಡ್ರಿಂಕ್‌ಗಳನ್ನು ಕುಡಿದ ನಂತರ ಗೇಮರ್​ ರೇ ಅವರಿಗೆ ಹೊಟ್ಟೆ ನೋವು ಬಂದಿತು. ಸಾವು-ನೋವಿನ ನಡುವೆ ಬದುಕುವಂಥ ಸ್ಥಿತಿ ನಿರ್ಮಾಣವಾಯಿತು. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಹುಅಂಗಾಂಗಗಳು ವೈಫಲ್ಯವಾಗಿದೆ ಎಂದು ಎಚ್ಚರಿಕೆಯ ಮೂಲಕ ಡಾ.ಎಚ್​ಸು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...