alex Certify ಕೂದಲಿಗೆ ಪೋಷಣೆ ನೀಡಿ ಸೊಂಪಾಗಿ ಬೆಳೆಯುಲು ಸಹಾಯ ಮಾಡುತ್ತೆ ಸಾಸಿವೆ ಎಣ್ಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲಿಗೆ ಪೋಷಣೆ ನೀಡಿ ಸೊಂಪಾಗಿ ಬೆಳೆಯುಲು ಸಹಾಯ ಮಾಡುತ್ತೆ ಸಾಸಿವೆ ಎಣ್ಣೆ

Mustard Oil For Hair: Benefits Of Sarson Ka Tel And Hair Masks For Lustrous Tresses - NDTV Foodಸಾಸಿವೆ ಎಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ದರಿಂದ ಇದನ್ನು ಅಡುಗೆಗೆ ಬಳಸುತ್ತಾರೆ. ಹಾಗೇ ಇದು ಚರ್ಮದ ಆರೋಗ್ಯಕ್ಕೂ ಕೂಡ ಉತ್ತಮ. ಆದರೆ ಇದನ್ನು ಕೂದಲಿಗೆ ಹಚ್ಚಬಹುದೇ ಎಂಬ ಗೊಂದಲ ಹಲವರಲ್ಲಿದೆ.

ಸಾಸಿವೆ ಎಣ್ಣೆ ಕೂದಲಿಗೆ ಹಚ್ಚುವುದರಿಂದ ಹಲವು ಪ್ರಯೋಜನಗಳಿವೆ.

* ಸಾಸಿವೆ ಎಣ್ಣೆಯನ್ನು ಕೂದಲಿಗೆ ಬಳಸಿದರೆ ವಯಸ್ಸಾದರೂ ಕೂದಲು ಬೆಳ್ಳಗಾಗುವುದಿಲ್ಲ.

* ಸಾಸಿವೆ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಒಣ ಕೂದಲಿನ ಸಮಸ್ಯೆ ನಿವಾರಣೆಯಾಗಿ ಕೂದಲು ತೇವಾಂಶದಿಂದ ಕೂಡಿರುತ್ತದೆ. ಹಾಗೇ ಕೂದಲು ಸಿಕ್ಕಾಗುವುದು ಕಡಿಮೆಯಾಗುತ್ತದೆ.

* ಈ ಎಣ್ಣೆಯಿಂದ ತಲೆಗೆ ಮಸಾಜ್ ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.

* ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಗಳು, ಒಮೆಗಾ 3, ಕೊಬ್ಬಿನ ಆಮ್ಲಗಳು ಇರುವುದರಿಂದ ಕೂದಲು ಉದ್ದವಾಗಿ ಬೆಳೆಯಲು ಸಹಕಾರಿ.

* ಸಾಸಿವೆ ಎಣ್ಣೆಯನ್ನು ಕೂದಲಿಗೆ ಬಳಸುವುದರಿಂದ ಕೂದಲು ತುಂಡಾಗುವುದನ್ನು ತಡೆಯಬಹುದು. ಹಾಗೇ ಕೂದಲುದುರುವ ಸಮಸ್ಯೆ ದೂರವಾಗುತ್ತದೆ.

* ಒಂದು ಟೇಬಲ್ ಚಮಚ ತೆಂಗಿನ ಎಣ್ಣೆಗೆ ಒಂದು ಟೇಬಲ್ ಚಮಚ ಬಿಸಿ ಸಾಸಿವೆ ಎಣ್ಣೆಯನ್ನು ಬೆರೆಸಿ. ಈ ಮಿಶ್ರಣವನ್ನು ಕೂದಲ ಬುಡಕ್ಕೆ ಲೇಪಿಸಿ ತದನಂತರ ಇದನ್ನು 10 ನಿಮಿಷ ನೆನೆಯಲು ಬಿಡಿ, ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಕೂದಲು ಹೊಳಪಿನಿಂದ ಕೂಡಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...