alex Certify ’ಜೈಶ್ರೀರಾಮ್’ ಹೇಳಲು ಅನ್ಯ ಕೋಮಿನ ವ್ಯಕ್ತಿಗೆ ಬಲವಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಜೈಶ್ರೀರಾಮ್’ ಹೇಳಲು ಅನ್ಯ ಕೋಮಿನ ವ್ಯಕ್ತಿಗೆ ಬಲವಂತ

ಅನ್ಯ ಕೋಮಿನ ವ್ಯಕ್ತಿಯೊಬ್ಬರಿಗೆ ಥಳಿಸಿ ಆತನ ಮಗಳ ಮುಂದೆಯೇ ಬಲವಂತದಿಂದ ’ಜೈ ಶ್ರೀರಾಮ್‌’ ಎಂದು ಹೇಳುವಂತೆ ಮಾಡಿದ ಘಟನೆಯೊಂದರ ವಿಡಿಯೋವೊಂದು ವೈರಲ್ ಆಗಿದೆ.

ಒಂದು ನಿಮಿಷದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

45 ವರ್ಷದ ಈ ವ್ಯಕ್ತಿ ಮೇಲೆ ಗುಂಪೊಂದು ಹಲ್ಲೆ ಮಾಡುತ್ತಿದ್ದು, ’ಜೈ ಶ್ರೀರಾಮ್‌’ ಎಂದು ಹೇಳುವಂತೆ ಆಗ್ರಹಿಸುತ್ತಿದೆ. ಇದೇ ವೇಳೆ ಸಂತ್ರಸ್ತನ ಪುತ್ರಿ ತನ್ನ ಅಪ್ಪನನ್ನು ಕಾಪಾಡಲು ಅಸಹಾಯಕವಾಗಿ ಪ್ರಯತ್ನಿಸುತ್ತಿರುವುದನ್ನು ನೋಡಬಹುದಾಗಿದೆ. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂತ್ರಸ್ತನನ್ನು ಜೀಪ್‌ನಲ್ಲಿ ಕರೆದೊಯ್ದಿದ್ದಾರೆ.

ಕಾನ್ಪುರದ ಬರ‍್ರಾ ಪ್ರದೇಶದ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ಜರುಗಿದ್ದು, ಸಂತ್ರಸ್ತರು ಕೊಟ್ಟ ದೂರಿನನ್ವಯ ಎಫ್‌ಐಆರ್‌ ದಾಖಲಿಸಿದ್ದಾಗಿ ಪೊಲೀಸ್ ವರಿಷ್ಠಾಧಿಕಾರಿ ರವೀನಾ ತ್ಯಾಗಿ ತಿಳಿಸಿದ್ದಾರೆ.

ಹಾವು ಕಚ್ಚಿದ ಕೋಪಕ್ಕೆ ಹಾವನ್ನೇ ಕಚ್ಚಿದ ಭೂಪ….!

ಇ-ರಿಕ್ಷಾ ಚಾಲಕರಾದ ಸಂತ್ರಸ್ತ, ತನ್ನ ಮೇಲೆ ಕೆಲ ಮಂದಿ ಹಲ್ಲೆ ಮಾಡಿದ್ದು, ಕುಟುಂಬಸ್ಥರನ್ನು ಕೊಲ್ಲುವ ಬೆದರಿಕೆಯೊಡ್ಡಿದ್ದಾಗಿ ತಿಳಿಸಿದ್ದು, ಪೊಲೀಸರು ತನ್ನನ್ನು ರಕ್ಷಿಸಿದ್ದಾಗಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...