alex Certify ಹಿಂದೂ ದೇವಾಲಯಕ್ಕೆ ಗೋದಾನ ಮಾಡಿದ ಮುಸ್ಲಿಂ ಕುಟುಂಬ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದೂ ದೇವಾಲಯಕ್ಕೆ ಗೋದಾನ ಮಾಡಿದ ಮುಸ್ಲಿಂ ಕುಟುಂಬ

ಕೋಮು ಸೌಹಾರ್ದದ ನಿದರ್ಶನವೊಂದರಲ್ಲಿ, ಮುಸ್ಲಿಂ ಕುಟುಂಬವೊಂದು ಹಿಂದೂ ದೇವಾಲಯವೊಂದಕ್ಕೆ ಗೋವನ್ನು ನೀಡಿದ ಘಟನೆ ಅಸ್ಸಾಂ ಶಿವಸಾಗರ ಜಿಲ್ಲೆಯಲ್ಲಿ ಜರುಗಿದೆ.

ಶಿವ ಡೋಲ್ ದೇಗುಲಕ್ಕೆ ಗೋವನ್ನು ನೀಡಿದ ಖಲೀಲುರ್‌ ರಹಮಾನ್ ಹಜ಼ಾರಿಕಾ ತಮ್ಮ ಪುತ್ರಿ ಆ ಹಸುವನ್ನು ಚಿಕ್ಕಂದಿನಿಂದಲೂ ಸಾಕಿ ಸಲಹಿದ್ದಾಗಿ ತಿಳಿಸಿದ್ದಾರೆ.

ಅಹೋಂದ ರಾಜ್ಯಭಾರದ ದಿನಗಳಲ್ಲಿ ಮಹಾಪುರುಷ್ ಶ್ರೀಮಂತಾ ಶಂಕರದೇವ್‌ ಹಾಗೂ ಆಜ಼ಾನ್ ಫಕೀರರು ಮಾನವೀಯ ತತ್ವಾದರ್ಶಗಳ ಮೇಲೆ ಈ ಐತಿಹಾಸಿಕ ಸ್ಥಳವನ್ನು ರಚಿಸಿದ್ದಾರೆ. 104 ಅಡಿ ಎತ್ತರವಿರುವ ದೇಗುಲದ ಕೇಂದ್ರ ಸ್ಥಾವರವು ದೇಶದಲ್ಲಿರುವ ಶಿವ ದೇಗುಲಗಳಲ್ಲೇ ಅತ್ಯಂತ ಎತ್ತರ ಸ್ಥಾವರವಾಗಿರುವ ಪೈಕಿ ಒಂದು ಎನ್ನಲಾಗಿದೆ.

ಈ ಹಸು ಬಿಸ್ಕಿಟ್‌ಗಳನ್ನು ಇಷ್ಟ ಪಡುತ್ತಿದ್ದ ಕಾರಣ ಅದಕ್ಕೆ ’ಬಿಸ್ಕಿಟ್’ ಎಂದೇ ಹೆಸರಿಟ್ಟಿದ್ದಾಗಿ ಖಲೀಲುರ್‌ ತಿಳಿಸಿದ್ದಾರೆ. “ಇದು ಅಸ್ಸಾಮೀ ಹೊಸ ವರ್ಷದ ಮೊದಲ ಸೋಮವಾರವಾಗಿದೆ. ದೇವರ ಮುಂದೆ ಯಾವುದೇ ಜಾತಿ, ಧರ್ಮದ ಭೇದವಿಲ್ಲ. ಎಲ್ಲರ ಒಳಿತು ಬಯಸಿ ಪ್ರಾರ್ಥಿಸಲು ಈ ಮುಸ್ಲಿಂ ವ್ಯಕ್ತಿ ನನ್ನಲ್ಲಿ ಕೇಳಿಕೊಂಡಿದ್ದಾರೆ,” ಎಂದು ಶಿವ ಡೋಲ್‌ನ ಅರ್ಚಕ ಸುರೇಶ್ ಬೊರ್ತಾಕುರ್‌ ತಿಳಿಸಿದ್ದಾರೆ.

ಶಿವ ಡೋಲ್‌ನಲ್ಲಿ ಮೂರು ಹಿಂದೂ ದೇವಾಲಯಗಳಿವೆ – ಶಿವಡೋಲ್, ವಿಷ್ಣುಡೋಲ್ ಹಾಗೂ ದೇವಿಡೋಲ್ ದೇಗುಲಗಳು. ಜೊತೆಗೆ ಒಂದು ವಸ್ತು ಸಂಗ್ರಹಾಲಯವೂ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...