alex Certify ಲವ್, ಸೆಕ್ಸ್, ದೋಖಾ: ಆಂಟಿಯೊಂದಿಗೆ ಸಂಬಂಧ ಬೆಳೆಸಿ ಉಸಿರು ನಿಲ್ಲಿಸಿದ ಯುವಕ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲವ್, ಸೆಕ್ಸ್, ದೋಖಾ: ಆಂಟಿಯೊಂದಿಗೆ ಸಂಬಂಧ ಬೆಳೆಸಿ ಉಸಿರು ನಿಲ್ಲಿಸಿದ ಯುವಕ: ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಕೊಲೆ ರಹಸ್ಯ

ಕಲಬುರಗಿ: ಫೇಸ್ಬುಕ್ ಮೂಲಕ ಪರಿಚಯವಾದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಯುವಕ ಆಕೆಯನ್ನು ಕೊಲೆ ಮಾಡಿದ ಘಟನೆ ನಡೆದಿದ್ದು, ಚಿಂಚೋಳಿ ಠಾಣೆ ಪೊಲೀಸರು ಪ್ರಕರಣ ಭೇದಿಸಿದ್ದಾರೆ.

ಅಸ್ಸಾಂ ಮೂಲದ ಜಸ್ಮಿನಾ ಮೃತ ಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಇಬ್ಬರು ಮಕ್ಕಳೊಂದಿಗೆ ಸುಖವಾಗಿ ಸಂಸಾರ ಸಾಗಿಸುತ್ತಿದ್ದ ಜಸ್ಮಿನಾ ಅವರಿಗೆ ಫೇಸ್ಬುಕ್ ಮೂಲಕ ಬಿಹಾರದ ಮೊಹಮ್ಮದ್ ಜುಲ್ಫಿಕರ್ ಎಂಬ ಯುವಕ ಪರಿಚಯವಾಗಿದ್ದಾನೆ.

ಇಬ್ಬರೂ ಪ್ರೀತಿಸಿದ್ದು, ಜೊತೆಯಾಗಿ ಜೀವನ ನಡೆಸಲು ಒಂದೂವರೆ ವರ್ಷದ ಹಿಂದೆ ಚಿಂಚೋಳಿಗೆ ಬಂದು ಒಂದು ತಿಂಗಳು ಸಂಸಾರ ನಡೆಸಿದ್ದಾರೆ. ನಂತರ ಮದುವೆಯಾಗುವಂತೆ ಜಸ್ಮಿನಾ ಒತ್ತಾಯಿಸಿದಾಗ ನಿರಾಕರಿಸಿದ್ದಾನೆ. ಕಳೆದ ವರ್ಷ ಏಪ್ರಿಲ್ 5 ರಂದು ಪೋಲಕಪಳ್ಳಿ ಸಮೀಪ ಆಕೆಯನ್ನು ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದಾನೆ.

ಮೃತದೇಹ ದೊರೆತ ನಂತರ ಜಿಂಚೋಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ, ಸುತ್ತಮುತ್ತಲಿನ ಯಾವುದೇ ಠಾಣೆಗಳಲ್ಲಿ ನಾಪತ್ತೆ ಪ್ರಕರಣ ದಾಖಲಾಗಿರಲಿಲ್ಲ. ಜಸ್ಮಿನಾಳ ಮೊಬೈಲ್ ನಂಬರ್ ಕಾಲ್ ಡೀಟೇಲ್ಸ್ ಸಂಗ್ರಹಿಸಿದ ಪೊಲೀಸರು ಹಾಕಿ ಸಿಮ್ ಖರೀದಿಸುವಾಗ ನೀಡಿದ ಫೋಟೋ ಸಂಗ್ರಹಿಸಿದ್ದಾರೆ. ಬಳಿಕ ಮೃತ ದೇಹದೊಂದಿಗೆ ಹೋಲಿಕೆ ಮಾಡಿದಾಗ ಮೃತಪಟ್ಟಿರುವುದು ಜಸ್ಮಿನಾ ಎಂದು ಪೊಲೀಸರಿಗೆ ಗೊತ್ತಾಗಿದೆ. ಯಾವ ನಂಬರ್ ಗಳಿಂದ ಆಕೆಗೆ ಕರೆ ಬಂದಿದೆ ಎಂದು ಪರಿಶೀಲಿಸಿದಾಗ ಮೊಹಮ್ಮದ್ ಜುಲ್ಫಿಕರ್ ಮೊಬೈಲ್ ನಿಂದ ಕಾಲ್ ಬಂದಿರುವುದು ಗೊತ್ತಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...