alex Certify ಪತ್ನಿಯೊಂದಿಗೆ ಅಸಭ್ಯ ವರ್ತನೆ, ವಿಪರೀತ ಮದ್ಯ ಕುಡಿಸಿದ ಗೆಳೆಯನಿಂದಲೇ ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯೊಂದಿಗೆ ಅಸಭ್ಯ ವರ್ತನೆ, ವಿಪರೀತ ಮದ್ಯ ಕುಡಿಸಿದ ಗೆಳೆಯನಿಂದಲೇ ಘೋರ ಕೃತ್ಯ

ಬೆಳಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪೊಲೀಸರು ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ವ್ಯಕ್ತಿ ಒಬ್ಬನ ಮೃತ ದೇಹ ಪತ್ತೆಯಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಮೃತ ವ್ಯಕ್ತಿಯನ್ನು ಕರೋಶಿ ಗ್ರಾಮದ ಸುನೀಲ(25) ಎಂದು ಗುರುತಿಸಿದ್ದಾರೆ.

ಜೈನಾಪುರ ಗ್ರಾಮದ ಮಹಾಂತೇಶ ಕೊಲೆ ಆರೋಪಿಯಾಗಿದ್ದಾನೆ, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತನಾಗಿದ್ದ ಮಹಾಂತೇಶನ ಪತ್ನಿಯೊಂದಿಗೆ ಸುನಿಲ ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ಆಕ್ರೋಶಗೊಂಡ ಮಹಾಂತೇಶ ಅ. 2 ರಂದು ಬೈಕ್ ನಲ್ಲಿ ಕರೋಶಿ ಬಳಿಯ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ವಿಪರೀತ ಮದ್ಯ ಕುಡಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದು, ಮೃತ ದೇಹವನ್ನು ಅರಣ್ಯ ಪ್ರದೇಶದಲ್ಲಿ ಎಸೆದು ಬಂದಿದ್ದ. ಮೃತ ದೇಹ ಪತ್ತೆಯಾದ ನಂತರ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...