alex Certify ಪ್ರೇಯಸಿ, ಆಕೆಯ ತಾಯಿಯ ಅಶ್ಲೀಲ ವಿಡಿಯೋ ಹರಿಬಿಟ್ಟ ವೈದ್ಯನ ಹತ್ಯೆ: ಮೂವರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಯಸಿ, ಆಕೆಯ ತಾಯಿಯ ಅಶ್ಲೀಲ ವಿಡಿಯೋ ಹರಿಬಿಟ್ಟ ವೈದ್ಯನ ಹತ್ಯೆ: ಮೂವರು ಅರೆಸ್ಟ್

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಫೋಟೋ, ವಿಡಿಯೋ ಹರಿಬಿಟ್ಟ ಪ್ರಿಯಕರನನ್ನು ಕೊಲೆ ಮಾಡಿದ ಪ್ರೇಯಸಿ ಮತ್ತು ಆಕೆಯ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ನ್ಯೂ ಮೈಕೋ ಲೇಔಟ್ ನಿವಾಸಿ ಆರ್ಕಿಟೆಕ್ಸ್ ಆಗಿರುವ 25 ವರ್ಷದ ಯುವತಿ, ಆಕೆಯ ಸ್ನೇಹಿತರಾದ ಸುಶೀಲ್(25), ಗೌತಮ್(27) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಸೂರ್ಯ ತಲೆಮರೆಸಿಕೊಂಡಿದ್ದಾನೆ.

ಸೆಪ್ಟೆಂಬರ್ 10 ರಂದು ನ್ಯೂ ಮೈಕೋ ಲೇಔಟ್ ನಲ್ಲಿ ಡಾ. ವಿಕಾಸ್(27) ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 18 ರಂದು ವಿಕಾಸ್ ಮೃತಪಟ್ಟಿದ್ದರು. ಬೇಗೂರು ಠಾಣೆ ಪೊಳಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಮೃತಪಟ್ಟ ವಿಕಾಸ್ ಮತ್ತು ಆರೋಪಿ ಯುವತಿ ಚೆನ್ನೈ ಮೂಲದವರಾಗಿದ್ದು, ವಿಕಾಸ್ ವೈದ್ಯನಾಗಿ, ಯುವತಿ ಆರ್ಕಿಟೆಕ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಾಗಿ ಪ್ರೀತಿಸುತ್ತಿದ್ದರು. ಇವರ ಮದುವೆಗೆ ಕುಟುಂಬದವರು ಒಪ್ಪಿಗೆ ಸೂಚಿಸಿದ್ದು, ನವೆಂಬರ್ ನಲ್ಲಿ ಮದುವೆಗಾಗಿ ಸಿದ್ಧತೆ ಕೂಡ ಆರಂಭಿಸಲಾಗಿತ್ತು. ಉನ್ನತ ಶಿಕ್ಷಣ ಪಡೆಯಲು ಕೋಚಿಂಗ್ ಪಡೆಯುವ ಉದ್ದೇಶದಿಂದ ವಿಕಾಸ್ ಬೆಂಗಳೂರಿನಲ್ಲಿ ನೆಲೆಸಿದ್ದು, ಯುವತಿ ಆರ್ಕಿಟೆಕ್ಟ್ ಆಗಿ ಇಲ್ಲೇ ಕೆಲಸ ಮಾಡುತ್ತಿದ್ದರು.

ಒಂದೇ ಮನೆಯಲ್ಲಿ ಆರು ತಿಂಗಳಿಂದ ಒಟ್ಟಿಗೆ ವಾಸವಾಗಿದ್ದು, ಈ ವೇಳೆ ಆಕೆಯೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ವಿಕಾಸ್ ವಿಡಿಯೋ ಮಾಡಿಕೊಂಡಿದ್ದ. ಇದರೊಂದಿಗೆ ಆಕೆಯ ತಾಯಿಯ ಅಶ್ಲೀಲ ವಿಡಿಯೋವನ್ನು ವಿಕಾಸ್ ರೆಕಾರ್ಡ್ ಮಾಡಿಕೊಂಡಿದ್ದ. ಸಾಮಾಜಿಕ ಜಾಲತಾಣದಲ್ಲಿ ಫೇಕ್ ಖಾತೆ ತೆರೆದು ಪ್ರೇಯಸಿ ಮತ್ತು ಆಕೆಯ ತಾಯಿಯ ಖಾಸಗಿ ವಿಡಿಯೋ ಹರಿಬಿಟ್ಟಿದ್ದ. ಈ ವಿಚಾರವಾಗಿ ಎರಡೂ ಕುಟುಂಬದವರ ನಡುವೆ ಗಲಾಟೆ ಆಗಿತ್ತು. ಯುವತಿ ಈ ವಿಷಯವನ್ನು ತನ್ನ ಸ್ನೇಹಿತರಾದ ಸುಶೀಲ್ ಮತ್ತು ಗೌತಮ್ ಹಾಗೂ ಸೂರ್ಯನ ಬಳಿ ಹೇಳಿಕೊಂಡಿದ್ದರು.

ವಿಕಾಸ್ ನನ್ನು ಸೆ. 10 ರಂದು ಸುಶೀಲ್ ತನ್ನ ಮನೆಗೆ ಕರೆಸಿಕೊಂಡಿದ್ದ. ಈ ವೇಳೆ ಆರೋಪಿಗಳು ಮನಬಂದಂತೆ ಥಳಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದರು. ಆಸ್ಪತ್ರೆಯಲ್ಲಿ ವಿಕಾಸ್ ಮೃತಪಟ್ಟಿದ್ದ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...