alex Certify ಪಲ್ಟಿ ಹೊಡೆದಿದ್ದ ಕಾರನ್ನ ಕ್ಷಣಾರ್ಧದಲ್ಲಿ ಎತ್ತಿ ನಿಲ್ಲಿಸಿದ ಜನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಲ್ಟಿ ಹೊಡೆದಿದ್ದ ಕಾರನ್ನ ಕ್ಷಣಾರ್ಧದಲ್ಲಿ ಎತ್ತಿ ನಿಲ್ಲಿಸಿದ ಜನ…!

ಮುಂಬೈ ತನ್ನ ಸೌಂದರ್ಯದ ಮೂಲಕ ಹೆಸರುವಾಸಿಯಾಗಿರೋದು ಒಂದಡೆಯಾದರೆ ಇಲ್ಲಿ ವಾಸಿಸುವ ಜನರಿಂದ ಕೂಡ ಮುಂಬೈ ಪ್ರತೀತಿಯನ್ನ ಪಡೆದುಕೊಂಡಿದೆ. ಮುಂಬೈ ಜನರು ಸಹಾಯ ಮಾಡೋದ್ರಲ್ಲಿ ಎತ್ತಿದ ಕೈ ಎಂಬ ಮಾತಿದೆ. ಕಷ್ಟದಲ್ಲಿರುವವರು ಅಪರಿಚಿತರಾಗಿದ್ದರೂ ಸರಿ ಮುಂಬೈ ಜನರು ಕೊಂಚವೂ ಇರಿಸು ಮುರಿಸು ಮಾಡದೇ ಸಹಾಯಕ್ಕೆ ಧಾವಿಸಿಬಿಡ್ತಾರೆ.

ಇದೇ ಮಾತಿಗೆ ಬೆಸ್ಟ್​ ಎಕ್ಸಾಂಪಲ್​ ಎಂಬಂತ ಘಟನೆಯೊಂದು ಮುಂಬೈನ ವಾಲ್ಕೇಶ್ವರ್​ ಏರಿಯಾದಲ್ಲಿ ನಡೆದಿದೆ. ರಸ್ತೆ ಮಧ್ಯದಲ್ಲಿ ಪಲ್ಟಿ ಹೊಡೆದಿದ್ದ ಕಾರನ್ನ ಸಾರ್ವಜನಿಕರೇ ಒಂದಾಗಿ ಸರಿಯಾಗಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಡಿಯೋವನ್ನ ಮೊದಲ ಬಾರಿಗೆ ಇನ್​ಸ್ಟಾಗ್ರಾಂನಲ್ಲಿ ಬಿಂಜಾಲ್​ ಪರೇಖ್​ ಎಂಬ ಮಹಿಳೆ ಶೇರ್ ಮಾಡಿದ್ದರು. ಇದೇ ಘಟನೆಯ ಕೆಲ ಫೋಟೋಗಳನ್ನ ಮಾನವ್​ ಮಾಂಗ್ಲಾನಿ ಎಂಬವರು ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದರು. ಧಮ್​ ಲಗಾಕೆ ಹೈಸಾ..! ಮುಂಬೈಕರ್​ ಜನತೆಯ ಶಕ್ತಿಯಿಂದಾಗಿ ಮುಂಬೈ ಪಾಲ್ಕೇಶ್ವರದಲ್ಲಿ ಉಲ್ಟಾ ಬಿದ್ದ ಕಾರು ಸರಿಯಾದ ಸ್ಥಿತಿಗೆ ಹಿಂದಿರುಗುವಲ್ಲಿ ಯಶಸ್ವಿಯಾಗಿದೆ ಎಂದು ಶೀರ್ಷಿಕೆ ನೀಡಲಾಗಿದೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು 3 ಲಕ್ಷಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ. ಮಾತ್ರವಲ್ಲದೇ ಸೋಶಿಯಲ್ ಮೀಡಿಯಾದ ಇತರೆ ವೇದಿಕೆಗಳಲ್ಲೂ ಶೇರ್​ ಮಾಡಲಾಗ್ತಾ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...