alex Certify ಬೈಕ್​ ನಿಲ್ಲಿಸಲು ಹೇಳಿದ ಟ್ರಾಫಿಕ್​ ಪೊಲೀಸರಿಗೇ ಆವಾಜ್​; ಯುವತಿ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್​ ನಿಲ್ಲಿಸಲು ಹೇಳಿದ ಟ್ರಾಫಿಕ್​ ಪೊಲೀಸರಿಗೇ ಆವಾಜ್​; ಯುವತಿ ವಿಡಿಯೋ ವೈರಲ್​

ಬೈಕ್​ನಲ್ಲಿ ಬಂದ ಯುವತಿಯೊಬ್ಬರು ಮುಂಬೈ ಟ್ರಾಫಿಕ್​ ಪೊಲೀಸ್​ ಅಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಮುಂಬೈನ ಬಾಂದ್ರಾ- ವರ್ಲಿ ಸೀ ಲಿಂಕ್​ನಲ್ಲಿ ಸೆಪ್ಟೆಂಬರ್​ 15ರಂದು ಈ ಘಟನೆ ನಡೆದಿದ್ದು ಇದೀಗ ವಿಡಿಯೋ ಆನ್​ಲೈನ್​ನಲ್ಲಿ ಹರಿದಾಡುತ್ತಿದೆ.

ನೂಪುರ್​ ಪಟೇಲ್​ ಎಂಬ 26 ವರ್ಷದ ಯುವತಿಯನ್ನು ಬಾಂದ್ರಾ ವರ್ಲಿ ಸೀ ಟ್ರಾಫಿಕ್​ ಪೊಲೀಸರು ತಡೆದಿದ್ದರು. ಸಮುದ್ರದ ಸೇತುವೆಯ ಮೇಲೆ ಬೈಕ್​ ಓಡಿಸಲು ಅನುಮತಿ ಇರಲಿಲ್ಲ. ಆದರೂ ಅಲ್ಲಿ ಬೈಕ್​ ಓಡಿಸಿದ ಕಾರಣಕ್ಕೆ ಯುವತಿಯನ್ನು ಪೊಲೀಸರು ತಡೆದಿದ್ದಾರೆ. ನೂಪುರ್​ ಮಧ್ಯ ಪ್ರದೇಶದ ಜಬಲ್​ಪುರ ನಿವಾಸಿಯಾಗಿದ್ದು ಪುಣೆಯಲ್ಲಿರುವ ತನ್ನ ಸಹೋದರನನ್ನು ಭೇಟಿಯಾಗುತ್ತಿದ್ದಳು. ಇದೇ ವೇಳೆ ಮುಂಬೈನಲ್ಲಿರುವ ವರ್ಲಿ ಸೀ ಲಿಂಕ್​ ನೋಡಬೇಕೆಂದು ಸಹೋದರನ ಬೈಕ್​ ಎತ್ತಿಕೊಂಡು ನೂಪುರ್​​ ಬಂದಿದ್ದಳು ಎನ್ನಲಾಗಿದೆ.

ಸೀ ಲಿಂಕ್​ನಲ್ಲಿ ಬೈಕ್​ ನಿಲ್ಲಿಸಿದ ಪೊಲೀಸರನ್ನೇ ನೂಪುರ್ ಬೆದರಿಸಿದ್ದಾಳೆ. ಬೈಕ್​ನಿಂದ ಇಳಿಯಲು ನಿರಾಕರಿಸಿದ ಯುವತಿಯು ಪೊಲೀಸ್​ ಸಿಬ್ಬಂದಿಗೆ ಆವಾಜ್​ ಹಾಕಿದ್ದಾಳೆ. ಪೊಲೀಸರು ಸಾಕಷ್ಟು ವಿನಂತಿ ಮಾಡಿದ ಬಳಿಕವೂ ನೂಪುರ್​​​​ ತನ್ನ ಅಸಭ್ಯ ವರ್ತನೆಯನ್ನು ಮುಂದುವರಿಸಿದ್ದಾಳೆ. ಅಲ್ಲದೇ ಪೊಲೀಸರನ್ನೇ ನಿಂದಿಸಿದ್ದಾಳೆ.

ನೂಪುರ್​ಗೆ ಸೀ ಲಿಂಕ್​ನಲ್ಲಿ ದ್ವಿಚಕ್ರ ವಾಹನಗಳಿಗೆ ಅವಕಾಶವಿಲ್ಲ ಎಂಬುದರ ಅರಿವಿರಲಿಲ್ಲ. ಆದರೂ ಪೊಲೀಸರ ಮಾತನ್ನ ಕೇಳಲು ಸಹ ಆಕೆ ತಯಾರಿರಲಿಲ್ಲ ಎನ್ನಲಾಗಿದೆ.

— Free Press Journal (@fpjindia) September 24, 2023

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...