alex Certify ಮದುವೆ ನೆಪದಲ್ಲಿ ಕಿರುತೆರೆ ನಟಿ ಮೇಲೆ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ನೆಪದಲ್ಲಿ ಕಿರುತೆರೆ ನಟಿ ಮೇಲೆ ಅತ್ಯಾಚಾರ

ಮುಂಬೈ: ಮದುವೆಯ ನೆಪದಲ್ಲಿ ಕಿರುತೆರೆ ನಟಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಪೈಲಟ್ ವಿರುದ್ಧ ದೂರು ದಾಖಲಾಗಿದೆ.

ಮುಂಬೈ ಉಪನಗರ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಈ ಕುರಿತಾಗಿ ಎಫ್ಐಆರ್ ದಾಖಲಾಗಿದೆ. ಮಾಡೆಲ್ ಕಂ ಟಿವಿ ನಟಿಯಾಗಿರುವ ಯುವತಿಗೆ ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ವೃತ್ತಿಪರ ಪೈಲಟ್ ಪರಿಚಯವಾಗಿದ್ದಾನೆ. ಭೋಪಾಲ್ ಮೂಲದ ಪೈಲಟ್ ಯುವತಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದು, ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಲ್ಲಿ ಚಾಟ್ ಮಾಡುತ್ತಿದ್ದ.

10 ದಿನಗಳ ಹಿಂದೆ ನಟಿ ಮನೆಗೆ ಬಂದಿದ್ದ ಆರೋಪಿ ಅತ್ಯಾಚಾರ ಎಸಗಿದ್ದಾನೆ. ತನ್ನ ಪೋಷಕರೊಂದಿಗೆ ಮಾತನಾಡಿ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಆತನ ನಡವಳಿಕೆಯಿಂದ ಬೇಸತ್ತ ನಟಿ ಪೊಲೀಸರಿಗೆ ದೂರು ನೀಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...