alex Certify ಬಸ್​ ನಲ್ಲಿ ಸೀಟಿಗಾಗಿ ಇಬ್ಬರು ವೃದ್ಧರ ಕಾದಾಟ: ಫನ್ನಿ ವಿಡಿಯೋ ಶೇರ್ ಮಾಡಿದ ಮುಂಬೈ ಪೊಲೀಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್​ ನಲ್ಲಿ ಸೀಟಿಗಾಗಿ ಇಬ್ಬರು ವೃದ್ಧರ ಕಾದಾಟ: ಫನ್ನಿ ವಿಡಿಯೋ ಶೇರ್ ಮಾಡಿದ ಮುಂಬೈ ಪೊಲೀಸ್​

ಸೋಶಿಯಲ್​ ಮೀಡಿಯಾದಲ್ಲಿ ಮುಂಬೈ ಪೊಲೀಸರು ಪೋಸ್ಟ್​ ಮಾಡುವ ಕೆಲವೊಂದು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತವೆ. ಈ ಕಾರಣಕ್ಕಾಗಿ ಸೋಶಿಯಲ್​ ಮೀಡಿಯಾಗಳಲ್ಲಿ ಮುಂಬೈ ಪೊಲೀಸರು ಸಖತ್​ ಫೇಮಸ್​ ಆಗಿದ್ದಾರೆ. ಫನ್ನಿ ವಿಡಿಯೋಗಳ ಮೂಲಕ ಜನರಿಗೆ ನಗಿಸುವುದು ಮಾತ್ರವಲ್ಲದೇ ಅದರ ಜೊತೆಯಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮುಂಬೈ ಪೊಲೀಸ್​ ಇಲಾಖೆಯ ಸೋಶಿಯಲ್ ಮೀಡಿಯಾ ಖಾತೆಗಳು ಮಾಡುತ್ತಿವೆ. ಅದೇ ರೀತಿ ಇತ್ತೀಚಿಗೆ ಪೋಸ್ಟ್​ ಮಾಡಲಾದ ವಿಡಿಯೋವೊಂದು ಟ್ವಿಟರ್​ನಲ್ಲಿ ವೈರಲ್​ ಆಗಿದೆ.

ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಲಾದ ವಿಡಿಯೋ ಇದಾಗಿದ್ದು ಇದರಲ್ಲಿ ಬಸ್​ನಲ್ಲಿ ಕುಳಿತು ಇಬ್ಬರು ವೃದ್ಧರು ಸೀಟಿನಲ್ಲಿ ತನಗೆ ಹೆಚ್ಚು ಜಾಗ ಬೇಕು, ತನಗೆ ಹೆಚ್ಚು ಜಾಗ ಬೇಕು ಎಂದು ಜಗಳವಾಡಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ದೂಡಿಕೊಂಡು ವೃದ್ದರು ಜಗಳವಾಡುತ್ತಿರುವ ವಿಡಿಯೋ ಸಖತ್​ ವೈರಲ್​ ಆಗಿದೆ. ಈ ವಿಡಿಯೋ ಶೇರ್​ ಮಾಡಿರುವ ಮುಂಬೈ ಪೊಲೀಸ್​ ಇಲಾಖೆಯು ದ್ವಿಚಕ್ರ ವಾಹನದಲ್ಲಿ ಮೂರನೇ ವ್ಯಕ್ತಿಗೆ ಸ್ಥಳಾವಕಾಶ ಇರೋದಿಲ್ಲ ಎಂದು ಶೀರ್ಷಿಕೆ ನೀಡಲಾಗಿದೆ.

ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮುಂಬೈ ಪೊಲೀಸ್​ ಇಲಾಖೆಯ ಬುದ್ಧಿವಂತಿಕೆಗೆ ಶಹಬ್ಬಾಸ್​ ಅಂತಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...