alex Certify 6 ರೂ. ಚಿಲ್ಲರೆ ಹಿಂದಿರುಗಿಸಲು ವಿಫಲ; 26 ವರ್ಷಗಳ ಹಿಂದಿನ ಪ್ರಕರಣದಲ್ಲಿ ರೈಲ್ವೆ ಇಲಾಖೆ ನೌಕರನಿಗೆ ‘ರಿಲೀಫ್’ ನೀಡಲು ಕೋರ್ಟ್ ನಕಾರ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6 ರೂ. ಚಿಲ್ಲರೆ ಹಿಂದಿರುಗಿಸಲು ವಿಫಲ; 26 ವರ್ಷಗಳ ಹಿಂದಿನ ಪ್ರಕರಣದಲ್ಲಿ ರೈಲ್ವೆ ಇಲಾಖೆ ನೌಕರನಿಗೆ ‘ರಿಲೀಫ್’ ನೀಡಲು ಕೋರ್ಟ್ ನಕಾರ !

article-image

26 ವರ್ಷಗಳ ಹಿಂದೆ ಪ್ರಯಾಣಿಕನಂತೆ ನಟಿಸಿದ್ದ ವಿಜಿಲೆನ್ಸ್ ಸಿಬ್ಬಂದಿಗೆ ಆರು ರೂಪಾಯಿ ಚಿಲ್ಲರೆ ಹಿಂದಿರುಗಿಸಲು ವಿಫಲನಾಗಿ ತನಿಖಾ ತಂಡಕ್ಕೆ ಸಿಕ್ಕಿ ಬಿದ್ದಿದ್ದ ರೈಲ್ವೆ ಕ್ಲರ್ಕ್ ಒಬ್ಬರಿಗೆ ರಿಲೀಫ್ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದ್ದು, ಆತನ ಅಮಾನತು ಆದೇಶವನ್ನು ಎತ್ತಿ ಹಿಡಿದಿದೆ.

ಪ್ರಕರಣದ ವಿವರ: ಮುಂಬೈನ ಕುರ್ಲಾ ಟರ್ಮಿನೆಸ್ ಜಂಕ್ಷನ್ ನಲ್ಲಿ ಟಿಕೆಟ್ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವರ್ಮಾ ಎಂಬವರು ಜನವರಿ 31, 2002 ರಂದು ಟಿಕೆಟ್ ಕೇಳಿಕೊಂಡು ಬಂದ ಪ್ರಯಾಣಿಕರೊಬ್ಬರಿಗೆ 6 ರೂಪಾಯಿ ಚಿಲ್ಲರೆ ಮರಳಿಸಿರಲಿಲ್ಲ.

ವಾಸ್ತವವಾಗಿ ಈ ಪ್ರಯಾಣಿಕ ರೈಲ್ವೆ ವಿಜಿಲೆನ್ಸ್ ತಂಡದ ಸದಸ್ಯನಾಗಿದ್ದು, ತಪಾಸಣೆ ಸಲುವಾಗಿ ಪ್ರಯಾಣಿಕನಂತೆ ನಟಿಸಿದ್ದ. ಈತ ಕುರ್ಲಾದಿಂದ ಅರೇ ಏರಿಯಕ್ಕೆ ಟಿಕೆಟ್ ಕೇಳಿದ್ದು, 500 ರೂಪಾಯಿ ನೋಟು ನೀಡಿದ್ದ. ಟಿಕೆಟ್ ದರ 214 ಪಡೆದು 286 ರೂಪಾಯಿಗಳನ್ನು ವರ್ಮಾ ಆ ಪ್ರಯಾಣಿಕನಿಗೆ ಮರಳಿಸಬೇಕಿತ್ತು. ಆದರೆ ಆತ 280 ರೂಪಾಯಿಗಳನ್ನು ಮಾತ್ರ ನೀಡಿದ್ದು, ಇದೇ ಸಂದರ್ಭದಲ್ಲಿ ವಿಜಿಲೆನ್ಸ್ ತಂಡ ದಾಳಿ ನಡೆಸಿತ್ತು.

ಈ ಸಂದರ್ಭದಲ್ಲಿ ರೈಲ್ವೆ ಕ್ಯಾಶ್ ನಲ್ಲಿ 58 ರೂಪಾಯಿ ಕಡಿಮೆ ಇದ್ದಿದ್ದು ಕಂಡುಬಂದಿತ್ತಲ್ಲದೆ, ಕ್ಲರ್ಕ್ ವರ್ಮಾ ಕುಳಿತಿದ್ದ ಹಿಂಬದಿ ಹೆಚ್ಚುವರಿ 450 ರೂಪಾಯಿ ಆಗಿತ್ತು. ಈ ಹಣ ಪ್ರಯಾಣಿಕರಿಗೆ ಚಿಲ್ಲರೆ ಮರಳಿಸಿದೆ ಅಕ್ರಮವಾಗಿ ಪಡೆದಿರುವುದು ಎಂದು ಗುರುತಿಸಿದ್ದ ವಿಜಿಲೆನ್ಸ್ ತಂಡ ಆತನನ್ನು ಅಮಾನತುಗೊಳಿಸುವಂತೆ ಶಿಫಾರಸ್ಸು ಮಾಡಿದ್ದು, ಅದರಂತೆ ಕ್ರಮಕೈಗೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ವರ್ಮ ನ್ಯಾಯಾಲಯದ ಮೆಟ್ಟಿಲೇರಿದ್ದು, 26 ವರ್ಷದ ಹಿಂದಿನ ಪ್ರಕರಣದಲ್ಲಿ ಕೊನೆಗೂ ಆತನಿಗೆ ರಿಲೀಫ್ ಸಿಕ್ಕಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...